'ಬಾಯ್ಸ್ Vs ಗರ್ಲ್ಸ್' ಎನ್ನುತಲೇ ಕಿರುತೆರೆಗೆ ಮರಳಿದ ನಟಿ ಶುಭಾ ಪೂಂಜ!

By ಅನಿತಾ ಬನಾರಿ

ನಟಿ ಶುಭಾ ಪೂಂಜ ಎಂದಾಕ್ಷಣ ಪ್ರೇಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಮುದ್ದು ಮುದ್ದಾಗಿ ಮಾತನಾಡುವ ಮೊಗ್ಗಿನ ಮನಸ್ಸಿನ ಹುಡುಗಿ ನೆನಪಾಗುತ್ತದೆ. ಹೌದು ಕನ್ನಡದಲ್ಲಿ 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ನಟಿ ಶುಭಾ ಪೂಂಜಾ ಅವರ ಸಿನಿ ಯಾನ ಶುರುವಾಗಿದ್ದು 'ಜಾಕ್ ಪಾಟ್' ಸಿನಿಮಾದ ಮೂಲಕವಾದರೂ ಆಕೆ ಫೇಮಸ್ಸು ಆಗಿದ್ದು 'ಮೊಗ್ಗಿನ ಮನಸ್ಸು' ಸಿನಿಮಾದ ಮೂಲಕ. 'ಜಾಕ್ ಪಾಟ್' ಸಿನಿಮಾ ನಂತರ 'ಚಂಡ' ಸಿನಿಮಾದಲ್ಲಿ ಈಕೆ ನಟಿಸಿದ್ದರು.

ಮುಂದೆ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟಿ ರಾಧಿಕಾ ಪಂಡಿತ್ ಅವರೊಂದಿಗೆ ತೆರೆ ಹಂಚಿಕೊಂಡಿರುವ ಈಕೆ ಸಪೋರ್ಟಿಂಗ್ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. 'ಮೊಗ್ಗಿನ ಮನಸ್ಸು' ಸಿನಿಮಾದ ರೇಣುಕಾ ಪಾತ್ರಕ್ಕೆ ಫಿಲಂ ಫೇರ್ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಅವಾರ್ಡ್ ಅನ್ನು ಪಡೆದರು.

Actress Shubha Poonja is returning to television with a new reality show Boys Vs Girls

ಮೂಲತಃ ಮಂಗಳೂರಿನರಾದ ಈಕೆ ಮಾಡಲಿಂಗ್‌ನಿಂದ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ಕ್ರಮೇಣ ಸಿನಿಮಾಗಳಲ್ಲಿ ಮಿಂಚಿದರು. 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ಇವರ ಪಾತ್ರ ಜನಮನ ಗೆದ್ದಿದ್ದಲ್ಲದೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳ ಆಫರ್ ಇವರ ಕೈ ಸೇರಿತ್ತು. 2008ರಿಂದ 12ರವರೆಗೆ ಕನ್ನಡ ಹಿರಿತೆರೆಯ ಲೀಡಿಂಗ್ ನಾಯಕ ನಟಿಯರಲ್ಲಿ ಇವರು ಒಬ್ಬರಾಗಿದ್ದರು.

ಕನ್ನಡ ಭಾಷೆಯಲ್ಲಿ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಇವರು 'ಮಚ್ಚಿ', 'ಒರು ಪೊಣ್ಣು ಒರು ಪಯಾನ್', 'ಸುಟ್ಟಪಳ್ಳಮ್' ಮುಂತಾದ ಸಿನಿಮಾಗಳ ಮೂಲಕ ತಮಿಳು ಪ್ರೇಕ್ಷಕರಿಗೆ ಚಿರಪರಿಚಿತ. 'ಸ್ಲಂ ಬಾಲ', 'ಅಂಜದಿರು', 'ತಾಕತ್', 'ಪ್ರೀತಿ ಹಂಗಾಮಾ', 'ಕಂಠೀರವ', 'ಜೈ ಮಾರುತಿ 800', 'ಗೂಗಲ್', 'ಸಿಗಂದೂರು ಚೌಡೇಶ್ವರಿ ಮಹಿಮೆ', 'ಮೀನಾಕ್ಷಿ', 'ರ್‍ಯಾಂಬೋ 2', 'ಜಯಮಹಲ್' ಹೀಗೆ ಕೆಲವು ದಿನಗಳ ನಂತರ ಹೀಗೆ ಶುಭಾ ಪೂಂಜ ಅವರ ಸಿನಿಮಾಗಳ ಪಟ್ಟಿ ಬಹಳ ಉದ್ದವಿದೆ.

ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾದ ನಟಿ ಶುಭ ಪೂಂಜ ತಮ್ಮ ಮುಗ್ಧತೆ, ಕಾಮಿಡಿ ಸೆನ್ಸ್ ಮೂಲಕವೇ ಜನಮನ ಗೆದ್ದು ಫಿನಾಲೆ ತನಕವು ದೊಡ್ಡ ಮನೆಯಲ್ಲಿದ್ದರು. ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆಯೇ ತಮ್ಮ ಪ್ರಿಯಕರ ಸುಮಂತ್ ಅವರೊಂದಿಗೆ ವೈವಾಹಿಕ ಜೀವನವನ್ನು ಆರಂಭಿಸಿದರು. ಬಿಗ್ ಬಾಸ್‌ನಲ್ಲಿ ಶುಭಾ ಪೂಂಜ ಅವರಿಗೆ ದೊರೆತ ಫೇಮ್ ಮತ್ತಷ್ಟು ಸಿನಿಮಾಗಳಿಗೆ ಅವಕಾಶ ನೀಡಿತ್ತು.

'ನರಗುಂದ ಬಂಡಾಯ', 'ಭೀರ' , 'ರೈಮ್ಸ್', 'ಅಂಬುಜಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದರು. ತ್ರಿದೇವಿ ಎಂಬ ಸಿನಿಮಾ ಮೂಲಕ ಮೊದಲ ಬಾರಿಗೆ ನಟಿಯಾಗಷ್ಟೇ ಅಲ್ಲದೆ ನಿರ್ಮಾಪಕಿಯಾಗಿ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ ನಟಿ ಶುಭಾ ಪುಂಜ.

ಸದ್ಯಕ್ಕೆ ಹೊಸ ವಿಚಾರವೆಂದರೆ ನಟಿ, ನಿರ್ಮಾಪಕಿ ಶುಭಾ ಪೂಂಜ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನೇನು ಶೀಘ್ರದಲ್ಲಿ ಆರಂಭವಾಗಲಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ಎಂಬ ರಿಯಾಲಿಟಿ ಶೋನಲ್ಲಿ ಶುಭ ಪೂಂಜಾ ಅವರು ಹುಡುಗಿಯರ ಟೀಮ್‌ನ ನಾಯಕಿಯಾಗಿ ಹೊರಹೊಮ್ಮಲಿದ್ದಾರೆ. ಹೌದು ಜಿಗರ್ ಇರೋ ಹುಡುಗ ಹುಡುಗಿಯರ ಜಿದ್ದಾ ಜಿದ್ದಿ ಎಂಬ ಹೊಸ ಥೀಮ್‌ನೊಂದಿಗೆ ಆರಂಭವಾಗಲಿರುವ ಈ ಶೋ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಶುಭಾ ಪೂಂಜಾ ಅವರು ಶೋನಲ್ಲಿ ಇರುವಿಕೆಯನ್ನು ನಿಗದಿ ಪಡಿಸಿದ್ದಾರೆ.

ಫೆಬ್ರವರಿ 1ರಿಂದ ಆರಂಭವಾಗಿಲ್ಲಿರುವ ಈ ವಿಭಿನ್ನ ರಿಯಾಲಿಟಿ ಶೋನಲ್ಲಿ ಅಚ್ಚರಿ ಎನ್ನುವಂತೆ ಬಿಗ್ ಬಾಸ್‌ನ ಹಲವು ಸೀಸನ್‌ಗಳ ನಾನಾ ಕಲಾವಿದರು ಭಾಗವಹಿಸಲಿದ್ದಾರೆ ಈಗಾಗಲೇ ಈ ಶೋ ನ ಪ್ರೊಮೋ ಬಿಡುಗಡೆಯಾಗಿದ್ದು ಬಹಳಷ್ಟು ಸದ್ದು ಮಾಡಿದೆ.

More from Filmibeat

English summary
Actress Shubha Poonja is returning to television with a new reality show Boys Vs Girls;
Read more about: shubha poonja anitha banari tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X