ಸಿಹಿ ಕಹಿ ಚಂದ್ರು, ಸಿಂಪಲ್ ಬ್ಯೂಟಿ ಶ್ವೇತಾ ಶ್ರೀವಾತ್ಸವ್ ಸಿರಿ 'ಸೂಪರ್ ಮಾಮ್' ಜಡ್ಜ್: ಶೋ ಎಂದಿನಿಂದ ಶುರು?

By ಅನಿತಾ ಬನಾರಿ

ಕಿರಿತೆರೆಯಲ್ಲಿ ಕಾಂಪಿಟೇಷನ್‌ ಜೋರಾಗಿದೆ. ಒಂದಕ್ಕಿಂತ ಒಂದು ಮನರಂಜನಾ ವಾಹಿನಿ ಹೊಸ ಹೊಸ ರಿಯಾಲಿಟಿ ಶೋಗಳನ್ನು ವೀಕ್ಷಕರಿಗಾಗಿ ತರುತ್ತಿದೆ. ಈಗ ಅಪ್ಪಟ ಕನ್ನಡದ ಮನರಂಜನಾ ವಾಹನಿ ಸಿರಿ ಕನ್ನಡ ಕೂಡ ರಿಯಾಲಿಟಿ ಶೋ ಅನ್ನು ದೊಡ್ಡ ಮಟ್ಟದಲ್ಲಿ ಪ್ರಸಾರ ಮಾಡುತ್ತಿದೆ.

ಸಿರಿ ಕನ್ನಡದ ಅದ್ಧೂರಿ ರಿಯಾಲಿಟಿ ಶೋ ಸಿರಿ 'ಸೂಪರ್ ಮಾಮ್' ಅನ್ನು ಆರಂಭ ಮಾಡುತ್ತಿದೆ. ವಿಶೇಷ ಅಂದರೆ, ಈ ರಿಯಾಲಿಟಿ ಶೋ ಅಮ್ಮ-ಮಕ್ಕಳ ಅನುಬಂಧ ಸಾರುವ ಅತಿದೊಡ್ಡ ರಿಯಾಲಿಟಿ ಶೋಗಳಲ್ಲೊಂದು ಎಂದು ಸಿರಿ ಕನ್ನಡ ವಾಹಿನಿ ಹೇಳಿಕೊಂಡಿದೆ. ಹೀಗಾಗಿ ರಿಯಾಲಿಟಿ ಶೋ ಮೇಲೆ ಕಿರುತೆರೆ ವೀಕ್ಷಕರು ಕಣ್ಣಿಟ್ಟಿದ್ದಾರೆ.

Actress Shweta Srivatsav and Sihi Kahi Chandru Judge for Siri Kannadas Super Mom reality show

ಸಿರಿ 'ಸೂಪರ್ ಮಾಮ್' ಹೈಲೈಟ್ ಏನಪ್ಪಾ ಅಂದ್ರೆ, ಅದು ಈ ರಿಯಾಲಿಟಿ ಶೋ ತೀರ್ಪುಗಾರರು. ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಿಹಿ ಕಹಿ ಚಂದ್ರು ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ಕಿರುತೆರೆಗೆ ಎಂಟ್ರಿ ಕೊಟ್ಟು ಸಿಂಪಲ್ ಆಗಿ ಸಿನಿಮಾದಲ್ಲಿ ಮಿಂಚುತ್ತಿರೋ ಶ್ವೇತಾ ಶ್ರೀವತ್ಸವ್ ಜೊತೆ ಸಿಹಿ ಕಹಿ ಚಂದ್ರು ಕೂಡ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೊಂದು ಪಾಸಿಟಿವ್ ರಿಯಾಲಿಟಿ ಶೋ ಎಂದು ಸಿರಿ ಕನ್ನಡ ಹೇಳಿಕೊಂಡಿದೆ. "ಅಮ್ಮ ಮತ್ತು ಮಕ್ಕಳ ಬಾಂಡಿಂಗ್ ಅನ್ನು ಮತ್ತಷ್ಟು ಸ್ಟ್ರಾಂಗ್ ಮಾಡುವ ರಿಯಾಲಿಟಿ ಶೋ ಎಂದು ಹೇಳಿಕೊಂಡಿದೆ. ಅಲ್ಲದೆ ವೀಕ್ಷಕರು ಈ ಶೋನಲ್ಲಿ ಅಮ್ಮ ಮಕ್ಕಳ ಇಂಟ್ರೆಸ್ಟಿಂಗ್ ಸ್ಟೋರಿಗಳನ್ನು ನೋಡಬಹುದು. ಅವರ ಅಡ್ವೆಂಚರಸ್ ಗೇಮ್‌ಗಳನ್ನು ಸೆಲೆಬ್ರೇಟ್ ಮಾಡಬಹುದು. ಈಗಿನ ಮಕ್ಕಳು ತುಂಬಾನೇ ಎನರ್ಜೆಟಿಕ್, ಚಾಲೆಂಜಿಂಗ್ ಮತ್ತು ಟ್ಯಾಲೆಂಟೆಡ್.. ಒಟ್ಟಾರೆ ಇದೊಂದು ಪವರ್ ಪ್ಯಾಕ್ಡ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಆಗಿ ಸಿರಿಕನ್ನಡ ವಾಹಿನಿಯಲ್ಲಿ ಬರ್ತಾ ಇದೆ" ಎಂದು ಕಾರ್ಯಕ್ರಮ ನಡೆಸಿಕೊಡುತ್ತಿರುವ ಸಿಹಿ ಕಹಿ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.

ಸ್ಯಾಂಡಲ್‌ವುಡ್ ಸಿಂಪಲ್‌ಕ್ವೀನ್ 'ಶ್ವೇತಾ ಶ್ರೀ ವಾತ್ಸವ್' ಈ ಶೋನ ಹೈಲೈಟ್. "ಈ ಶೋ ಮದರ್‌ಹುಡ್ ಮತ್ತು ಚೈಲ್ಡ್ ಹುಡ್ ಅನ್ನು ಸೆಲೆಬ್ರೇಟ್ ಮಾಡುವ ಶೋ.. ಈ ರಿಯಾಲಿಟಿ ಶೋನ ಥೀಮ್ ನನಗೆ ತುಂಬಾ ಇಷ್ಟ ಆಯ್ತು. ಆ ಕಾರಣಕ್ಕೆ 8 ವರ್ಷಗಳಿಂದ ಯಾವುದೇ ಆಫರ್ ಒಪ್ಪಿಕೊಳ್ಳದೆ ಇದನ್ನು ಒಪ್ಪಿಕೊಂಡಿದ್ದೇನೆ. ಮುಖ್ಯವಾಗಿ ಅಮ್ಮನ ಜೊತೆ ಮಗು ಬಂಧ ಹೇಗಿದೆ? ಎಂಬುದನ್ನು ಈ ಶೋ ಮೂಲಕ ಕಂಡುಕೊಳ್ಳಬಹುದು. ಆ ಕಾರಣಕ್ಕೆ ಈ ಶೋ ಸ್ಪೆಷಲ್ ಅನಿಸುತ್ತೆ." ಎಂದು ಶ್ವೇತಾ ಶ್ರೀವತ್ಸವ್ ಹೇಳಿದ್ದಾರೆ.

Actress Shweta Srivatsav and Sihi Kahi Chandru Judge for Siri Kannadas Super Mom reality show

'ಸಿರಿ ಸೂಪರ್ ಮಾಮ್' ರಿಯಾಲಿಟಿ ಶೋನಲ್ಲಿ ಸ್ಯಾಂಡಲ್‌ವುಡ್ ತಾರೆಯರು ಜಡ್ಜ್ ಆಗಿ ಭಾಗವಹಿಸುತ್ತಿದ್ದಾರೆ. ಪ್ರತಿ ಸಂಚಿಕೆಯಲ್ಲೂ ಅವರ ರಿಯಲ್ ಲೈಫ್ ಎಕ್ಸ್‌ಪಿರಿಯನ್ಸ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ನಿರೂಪಕರಾಗಿ ಕಿರುತೆರೆಯ ಖ್ಯಾತ ನಟಿ ರಶ್ಮಿತಾ ಚಂಗಪ್ಪ ಮತ್ತು ಕಾಮಿಡಿ ಕಿಲಾಡಿಯ ಹಾಸ್ಯ ನಟ ಸೂರಜ್ ಶೋ ನಡೆಸಿಕೊಡುತ್ತಿದ್ದಾರೆ.

"ಸಿರಿ ಸೂಪರ್ ಮಾಮ್' ರಿಯಾಲಿಟಿ ಶೋನಲ್ಲೂ ಎಲಿಮೇಷನ್ ಇರುತ್ತೆ. ಈ ರಿಯಾಲಿಟಿ ಶೋ ಗೆದ್ದ ಸೂಪರ್ ಮಾಮ್‌ಗೆ 5 ಲಕ್ಷ ಕ್ಯಾಶ್ ಪ್ರೈಜ್ ಸಿಗಲಿದೆ. ಈ ಕಾರ್ಯಕ್ರಮವು ಇದೇ ಡಿಸೆಂಬರ್ 4 ರಿಂದ ಸೋಮವಾರದಿಂದ ಶುಕ್ರವಾರ ಪ್ರಸಾರವಾಗಲಿದೆ." ಎಂದು ವಾಹಿನಿ ಮುಖ್ಯಸ್ಥ ರಾಜೇಶ್ ರಾಜಘಟ್ಟ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ 'ಸಿರಿ ಸೂಪರ್ ಮಾಮ್' ಶೋ ಆರಂಭಕ್ಕೆ ಒಂದು ಕಾರಣವುದೆ. ಸಿರಿ ಕನ್ನಡದ 5 ವರ್ಷ ಪೂರೈಸುತ್ತಿರುವ ಬೆನ್ನಲ್ಲಿ ಈ ರಿಯಾಲಿಟಿ ಶೋ ಆರಂಭ ಮಾಡಲಾಗುತ್ತಿದೆ.

More from Filmibeat

English summary
Shweta Srivatsav and Sihi Kahi Chandru reality show Super Mom will start on December 4th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X