Don't Miss!
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Sports
IND W vs WI W: ಭಾರತದ ಉತ್ತಮ ಆಲ್ರೌಂಡ್ ಪ್ರದರ್ಶನ: ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಹೆಜ್ಜೆ ಇಟ್ಟ ಶ್ವೇತಾ ಪ್ರಸಾದ್: ಎನ್‌ಜಿಒ ಮೂಲಕ ಸಮಾಜ ಸೇವೆ
ಆಕಸ್ಮಿಕವಾಗಿ ಕಿರುತೆರೆಗೆ ಬಂದ ನಟಿ ಶ್ವೇತಾ ಪ್ರಸಾದ್ ಅಪಾರ ಅಭಿಮಾನಿಗಳನ್ನು ಸಂಪಾಸಿದಿದ್ದಾರೆ. ನಟಿಸಿ ವರ್ಷಗಳು ಕಳೆದರು ಅಭಿಮಾನಿಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿರುವ ನಟಿ, ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ.
ಇನ್ ಸ್ಟಾಗ್ರಾಂ ಖಾತೆಯಲ್ಲಿ ಸದಾ ಆಕ್ಟೀವ್ ಆಗಿರುವ ಶ್ವೇತಾ ಪ್ರಸಾದ್ ಆಗಾಗ ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಇದೆಲ್ಲವನ್ನೂ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಲೋಡ್ ಮಾಡುತ್ತಾರೆ.
Gattimela:
ವೇದಾಂತ್
ಇಂದ
ಎಸ್ಕೇಪ್
ಆದ್ನಾ
ವಿಲನ್
ಅಗ್ನಿ..?
ಶ್ವೇತಾ ಪ್ರಸಾದ್ ಆಗಾಗ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ಮೆಂಟೈನ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಬರುವ ಕಮೆಂಟ್‌ಗಳಿಗೆ ರಿಪ್ಲೇ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ.

ಶ್ವೇತಾ ನಟನೆಗೆ ಫ್ಯಾನ್ಸ್ ಕಾತರ
ಜ಼ೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ನಂತರ 'ರಾಧಾ ರಮಣ' ಧಾರಾವಾಹಿ ಮೂಲಕ ಶ್ವೇತಾ ನಾಯಕಿಯ ಪಾತ್ರವಹಿಸಿದರು. 'ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಶ್ವೇತಾ ಅವರು ಭಾಗವಹಿಸಿದ್ದರು. 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಮನೆ ಮಾತಾದರು. ನಂತರ ಶ್ವೇತಾ ಪ್ರಸಾದ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಹಾಗಿದ್ದರೂ, ಅಭಿಮಾನಿಗಳು ಶ್ವೇತಾ ಅವರನ್ನು ಮತ್ತೆ ನಟಿಸುವಂತೆ ಪದೇ ಪದೇ ಕೇಳುತ್ತಿರುತ್ತಾರೆ.

ಫ್ಯಾಮಿಲಿಗೆ ಫುಲ್ ಟೈಂ
ಶ್ವೇತಾ ಅವರು ಆರ್‌ಜೆ ಪ್ರದೀಪ ಅವರನ್ನು ಪ್ರೀತಿಸಿ ಮದುವೆಯಾದರು. ಆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರವೇ ಉಳಿದಿದ್ದಾರೆ. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ. ಆಗಾಗ ಪ್ರವಾಸ ಕೈಗೊಂಡು ಅಲ್ಲಿನ ವಿಶೇಷತೆ ಬಗ್ಗೆ ತಿಳಿಸಿಕೊಡುತ್ತಾರೆ. ಪ್ರದೀಪ್ ಮಾಡುತ್ತಿರುವ ವೆಬ್ ಸಿರೀಸ್‌ನಲ್ಲೂ ಶ್ವೇತಾ ಜೊತೆಯಾಗಿದ್ದಾರೆ. ಸದಾ ಹೊಸತನಕ್ಕೆ ತೆರೆದುಕೊಳ್ಳುವ ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಕೂಡ ಮಾಡುತ್ತಾರೆ. ದೇಶ್ಯಾದ್ಯಂತ ಸುತ್ತಾಡಿದಿರುವ ಶ್ವೇತಾ ಅವರು, ಪ್ರತೀ ಭಾಷೆಯನ್ನೂ ಕಲಿಯಲು ಬಯಸಿದ್ದಾರೆ.

ಸ್ವಂತ ಬಿಸಿನೆಸ್ ಮಾಡುತ್ತಿರುವ ಶ್ವೇತಾ
ಸದ್ಯ ಶ್ವೇತಾ ಅವರು ತಮ್ಮದೇ ಬಿಸಿನೆಸ್ ಅನ್ನು ಹೊಂದಿದ್ದಾರೆ. ಇದರಲ್ಲಿ ಎಲ್ಲವೂ ಆರ್ಗಾನಿಕ್ ಆಗಿದ್ದು, ಬಿಸಿನೆಸ್ ಕ್ಲಿಕ್ ಆಗಿದೆ. ಇನ್ನು ಎಲ್ಲರಿಗೂ ಸದಾ ಒಳ್ಳೆಯದನ್ನು ಮಾಡುವಂತೆ ಬುದ್ಧಿ ಹೇಳುವ ಶ್ವೇತಾ ಅವರು, ಮಾಡುವ ಕೆಲಸಗಳೆಲ್ಲವೂ ಉತ್ತಮವಾದದ್ದು. ನಾಲ್ಕು ಜನರಿಗೆ ಸಹಾಯ ಮಾಡುತ್ತಾರೆ. ಶ್ವೇತಾ ಅವರ ಗುಣದಿಂದಲೂ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ಈ ವರ್ಷದ ಸಂಕ್ರಾಂತಿ ಹಬ್ಬದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಎನ್‌ಜಿಒ ಶುರು ಮಾಡಿದ ಶ್ವೇತಾ
ಸಂಕ್ರಾಂತಿ ಹಬ್ಬದಲ್ಲಿ ಶ್ವೇತಾ ಮತ್ತು ಪ್ರದೀಪ್ ಇಬ್ಬರೂ ಸೇರಿ ಹೋಮ, ಪೂಜೆಯನ್ನು ಮಾಡಿದ್ದರು. ಬಳಿಕ ಅವರ ತಂದೆ ಪ್ರಸಾದ್ ಫೌಂಡೇಷನ್ ಮೂಲಕ ಎನ್ ಜಿಒ ಅನ್ನು ಪ್ರಾರಂಭಿಸಿದ್ದಾರೆ. ಈ ಸಂತಸದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಪ್ಪನ ಹೆಸರಲ್ಲಿ ಸಮಾಜ ಸೇವೆ ಮಾಡಲು ಮುಂದಾಗಿದ್ದೇನೆ. ನನ್ನ ತಂದೆ ದೇವಸ್ಥಾನಗಳಿಗೆ ದೇಣಿಗೆ ನೀಡಿ ಅನ್ನದಾನಕ್ಕೆ ಸಹಕಾರ ನೀಡಬೇಕು ಎಂದು ಹೇಳಿಕೊಟ್ಟವರು ಎಂದು ಬರೆದುಕೊಂಡಿದ್ದಾರೆ.