ಭಾರತದ ಎಲ್ಲಾ ಭಾಷೆಗಳನ್ನು ಕಲಿಯುತ್ತಿರುವ ಶ್ವೇತಾ ಪ್ರಸಾದ್!

By ಪ್ರಿಯಾ ದೊರೆ

ರಾಧಾ ಮಿಸ್ ಅಲಿಯಾಸ್ ಶ್ವೇತಾ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಟಿ. ಫೋಟೋಶೂಟ್ ಮಾಡಿಸಿ, ಒಳ್ಳೊಳ್ಳೆ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಾ, ಫ್ಯಾನ್ಸ್ ಗಳಿಂದ ಬರುವ ಕಮೆಂಟ್ ಗಳಿಗೆ ರಿಪ್ಲೇ ಮಾಡುತ್ತಾ, ಇನ್ನಷ್ಟು ಹತ್ತಿರವಾಗುತ್ತಿರುತ್ತಾರೆ.

ರಾಧಾ ರಮಣ ಧಾರಾವಾಹಿಯಾದ ಮೇಲೆ ನಟಿ ಶ್ವೇತಾ ಪ್ರಸಾದ್ ಅಷ್ಟಾಗಿ ಎಲ್ಲೂ ಕಾಣಿಸಲಿಲ್ಲ. ಆದರೆ ಶ್ವೇತಾ ಪ್ರಸಾದ್ ಸಖತ್ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಜೀರೋ ಸೈಜ್ ಮೆಂಟೈನ್ ಮಾಡುತ್ತಿದ್ದಾರೆ.

ಶ್ವೇತಾ ಪ್ರಸಾದ್ ಆಗಾಗ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಕಳೆದ ತಿಂಗಳು ಸ್ನೇಹಿತೆಯ ಜೊತೆ ಬ್ಯಾಂಕಾಕ್ ಗೆ ಹಾರಿದ್ದರು. ಅಲ್ಲಿನ ಬೀದಿ ಬೀದಿಯಲ್ಲಿ ಅಡ್ಡಾಡುತ್ತಾ, ಸ್ಪೆಷಲ್ ಫುಡ್ ಟೇಸ್ಟ್ ಮಾಡುತ್ತಾ, ಸ್ಟೇ ಆಗಿರುವ ರೂಮಿನಲ್ಲಿ ರೀಲ್ಸ್ ಮಾಡಿಕೊಂಡು ಮಸ್ತ್ ಮಜಾ ಮಾಡಿದ್ದರು.

ಶ್ವೇತಾ ಪ್ರಸಾದ್ ಕಿರುತೆಗೆ ಬಂದಿದ್ದು ಅಚಾನಕ್!

ಶ್ವೇತಾ ಕಿರುತೆರೆಗೆ ಬಂದದ್ದು ಅಚಾನಕ್ಕಾಗಿಯಾದರೂ ಬೆಳೆದು ಗುರುತಿಸಿಕೊಂಡಿದ್ದು ಮಾತ್ರ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ. ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ, ಬದುಕಿನ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಅರ್ಥೈಸುವ ಈ ಮುದ್ದುಮೊಗದ ಮಲೆನಾಡ ಚೆಲುವೆ ಶ್ವೇತಾ. ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆಯಲು ಬೆಂಗಳೂರಿಗೆ ಬಂದರು. ಬೆಂಗಳೂರಿನ ಆರ್ವಿ ಕಾಲೇಜ್‌ನಿಂದ ಆರ್ಕಿಟೆಕ್ಟ್ ಆಗಿ ಹೊರಬಂದ ಶ್ವೇತಾ ಅದೇ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ ಅನಿರೀಕ್ಷಿತವಾಗಿ ಇವರಿಗೆ ಒಲಿದದ್ದು ಕಿರುತೆರೆಯ ನಂಟು.

ನಟನೆ ಬೇಡ ಎಂದುಕೊಂಡಿದ್ದರು!

ಶ್ವೇತಾರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಸಂಪರ್ಕಿಸಿದ್ದರು ಶೃತಿ ನಾಯ್ಡು. ಅಂದು ಒಲ್ಲೆ ಎಂದಿದ್ದರು. ಕೊನೆಗೆ ಮನವೊಲಿಸಿ, ನಾನಿದ್ದೇನೆ ಎಂಬ ಭರವಸೆ ನೀಡಿ ತಮ್ಮ ಧಾರಾವಾಹಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಸುಮಾರು 700 ಕಂತುಗಳಲ್ಲಿ ಬಂದ ಧಾರಾವಾಹಿಯಲ್ಲಿನ ಶ್ವೇತಾರ ನಟನೆ ಎಷ್ಟು ನೈಜವಾಗಿತ್ತೆಂದರೆ ಅವರು ಪ್ರತಿಯೊಬ್ಬರ ಮನೆಮಾತಾದರು. ಅಭಿನಯದಿಂದಾಗಿ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ನಂತರ ರಾಧಾ ರಮಣ ಧಾರಾವಾಹಿ ಮೂಲಕ ಶ್ವೇತಾ ನಾಯಕಿಯ ಪಾತ್ರವಹಿಸಿದರು. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಶ್ವೇತಾ ಭಾಗವಹಿಸಿದ್ದರು.

ಕುಟುಂಬದ ಜೊತೆ ಸಮಯ!

ಬಳಿಕ ಶ್ವೇತಾ ಅವರು ಆರ್‌ಜೆ ಪ್ರದೀಪ್‌ ಅವರನ್ನು ಪ್ರೀತಿಸಿ ಮದುವೆಯಾದರು. ಆ ಬಳಿಕ ಬಣ್ಣದ ಲೋಕದಿಂದ ಕೊಂಚ ದೂರವೇ ಉಳಿದಿದ್ದಾರೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಶ್ವೇತಾ ಪ್ರಸಾದ್ ಇತ್ತೀಚೆಗೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಸೋಷಿಯಲ್ ಮೀಡಿಯಾದಲ್ಲಿ ಇರುವ ಫೋಟೋಗಳು ಸಹ ಕಿಕ್ ಹುಟ್ಟುಹಾಕುವಂತದ್ದೇ. ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿರುವ ಶ್ವೇತಾ ಪ್ರಸಾದ್, ಸದ್ಯ ಪ್ರದೀಪ್ ಮಾಡುತ್ತಿರುವ ವೆಬ್ ಸಿರೀಸ್ ನಲ್ಲೂ ಜೊತೆಯಾಗಿದ್ದಾರೆ.

ಹೊಸ ಭಾಷೆಗಳನ್ನು ಕಲಿಯುತ್ತಿರುವ ನಟಿ

ಇನ್ನು ಶ್ವೇತಾ ಪ್ರಸಾದ್ ಅವರು ಅತಿ ಹೆಚ್ಚು ಟ್ರಾವೆಲ್ ಕೂಡ ಮಾಡುತ್ತಾರೆ. ಈಡೀ ಭಾರತದ ಬಹುತೇಕ ಪ್ರೇಕ್ಷಣೀಯ ಸ್ಥಳ ಟ್ರಾವೆಲ್ ಮಾಡಿರುವ ಶ್ವೇತಾ ಅವರು, ಪ್ರತೀ ಭಾಷೆಯನ್ನೂ ಕಲಿಯಲು ಬಯಸಿದ್ದಾರೆ. ಹೀಗಾಗಿ ಇತರೆ ಮಹಿಳೆಯರನ್ನು ಮಾತನಾಡಿಸಿ, ಅವರ ಭಾಷೆಯನ್ನು ಕಲಿಯುತ್ತಿದ್ದಾರೆ. ಇದರ ವೀಡಿಯೋಗಳನ್ನು ಶ್ವೇತಾ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬೆಂಗಾಲಿ, ತುಳು, ತಮಿಳು, ಕೊಂಕಣಿ, ಸಂಸ್ಕೃತ, ಹಿಮಾಚಲ ಪ್ರದೇಶದ ಮಹಾಸುಪಹಾರಿ, ನೇಪಾಳಿ ಹೀಗೆ ಹಲವು ಭಾಷೆಯ ಜನರೊಂದಿಗೆ ಮಾತನಾಡಿದ್ದಾರೆ. ಅವರ ಭಾಷೆಯನ್ನು ಕಲಿಯಲು ಪ್ರಯತ್ನಿಸಿದ್ದಾರೆ.

More from Filmibeat

English summary
Actress Shwetha Prasad Trying To Learn All Indian Languages, Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X