Actress Sindhu Kalyan: 'ಪುಟ್ಟ ಗೌರಿ ಮದುವೆ'ಯ ದುರ್ಗಾ ಈಗ ಪುಲ್ ಟೈಂ ಖಳನಾಯಕಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಅಮ್ಮ ಸುಹಾಸಿನಿ ಆಗಿ ಅಭಿನಯಿಸುತ್ತಿರುವ ಸಿಂಧೂ ಕಲ್ಯಾಣ್ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ. ಹೌದು, ಕೆ.ಎಸ್. ರಾಮ್ ಜೀ ನಿರ್ದೇಶನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿ ಸಾಗರಿ ಆಗಿ ಅಭಿನಯಿಸುತ್ತಿರುವ ಸಿಂಧೂ ಕಲ್ಯಾಣ್ ಈಗ ಸುಹಾಸಿನಿ ಆಗಿ ಮೋಡಿ ಮಾಡುತ್ತಿದ್ದಾರೆ.
'ಪುಟ್ಟ ಗೌರಿ ಮದುವೆ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಸಾಗರಿ ಕಲ್ಯಾಣ್ ನಟಿಸಿದ್ದು ಅವರಿಗೆ ಆ ಪಾತ್ರ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಪಾಸಿಟಿವ್ ಪಾತ್ರದ ಮೂಲಕವೇ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಸಿಂಧೂ ಸದ್ಯ ಕಿರುತೆರೆಯ ಜಗತ್ತಿನಲ್ಲಿ ಖಳನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

'ಕನ್ಯಾದಾನ' ಮೊದಲ ಸೀರಿಯಲ್
'ಕನ್ಯಾದಾನ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸಿಂಧೂ ಕಲ್ಯಾಣ್ ಮುಂದೆ 'ಕಾದಂಬರಿ', 'ನಿರಂತರ', 'ಕಲ್ಪವೃಕ್ಷ', 'ಗಾಯತ್ರಿ', 'ಕಾಲಚಕ್ರ', 'ತ್ರಿವೇಣಿ ಸಂಗಮ' ಧಾರಾವಾಹಿಗಳಲ್ಲಿ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆ ವೀಕ್ಷಕರ ಮನ ಸೆಳೆದ ಸಿಂಧೂ ಕಲ್ಯಾಣ 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಮೂಲಕ ಖಳನಾಯಕಿಯಾಗಿ ಭಡ್ತಿ ಪಡೆದರು.
ದುರ್ಗಾ ಆಗಿ ಮೋಡಿ
'ಪುಟ್ಟ ಗೌರಿ ಮದುವೆ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಸಿಂಧೂ ಕಲ್ಯಾಣ್ ಮುಂದೆ ಕಿರುತೆರೆಗೆ ಬಂದುದು ದುರ್ಗಾಳಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ದುರ್ಗಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ ಸಿಂಧೂ ಕಲ್ಯಾಣ್ ಖಳನಾಯಕಿಯಾಗಿ ಅಬ್ಬರಿಸಿದರು.
"ಸಾಗರಿ ಪಾತ್ರ ಒಪ್ಪಿಕೊಳ್ಳಲು ಭಯವಾಗಿತ್ತು"
ಆರಂಭದಲ್ಲಿ ಸಾಗರಿ ಪಾತ್ರ ಬಂದಾಗ ಸಿಂಧೂ ಅವರಿಗೆ ಒಪ್ಪಿಕೊಳ್ಳಲು ಭಯವಾಗಿತ್ತಂತೆ. ಜೋರಾಗಿ ಮಾತನಾಡಲು ಬರದ ಆಕೆಗೆ ತನ್ನ ಗೆಟಪ್ ಖಳನಾಯಕಿಯ ಪಾತ್ರಕ್ಕೆ ಸೂಟ್ ಆಗುತ್ತದೋ ಇಲ್ಲವೂ ಎಂಬ ಅಳುಕು ಕೂಡ ಇತ್ತಂತೆ. ನಿಭಾಯಿಸುವುದು ಕಷ್ಟ ಎಂದು ಪಾತ್ರವನ್ನು ತಿರಸ್ಕರಿಸುವ ನಿರ್ಧಾರ ಮಾಡಿದ್ದರಂತೆ. ಆದರೆ, ಇಂದು ಜನ ಸಾಗರಿಯಾಗಿ ಗುರುತಿಸುವಾಗ ನಟಿಸಿದ್ದು ಸಾರ್ಥಕ ಎಂಬ ಪಾತ್ರ ಅವರಿಗೂ ಮೂಡಿತ್ತಂತೆ.

ಸಾಗರಿ ಪಾತ್ರದಿಂದ ಕನಸು ನೆರವೇರಿತು
ಮೊದಲಿನಿಂದಲೂ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊಂದಿರುವ ಸಿಂಧೂ ಕಲ್ಯಾಣ್ 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಸಾಗರಿ ಪಾತ್ರ ಬಂದಾಗ ನಟಿಸಲು ಸಹಜವಾಗಿ ಭಯವಾಗಿತ್ತಂತೆ. ಖಳನಾಯಕಿಯ ಪಾತ್ರಕ್ಕೆ ಅದರದೇ ಆದ ರೀತಿ ನೀತಿಯಿದ್ದು ನಟಿಸುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದರು. ಆದರೆ ಇದೀಗ ತಮ್ಮ ಕನಸು ನನಸಾದ ಸಂತಸದಲ್ಲಿದ್ದಾರಂತೆ ಸಿಂಧೂ ಕಲ್ಯಾಣ್.


Click it and Unblock the Notifications











