'ಸೀತಾರಾಮ' ಧಾರಾವಾಹಿಯಲ್ಲಿ ಹೊಸ ಎಂಟ್ರಿ? ರಾಮನ ಅವತಾರವೆತ್ತಿ ಬಂದ ಕನ್ನಡ ನಟಿಯ ಪುತ್ರ ಯಾರು?
'ಸೀತಾರಾಮ' ಧಾರಾವಾಹಿಯಲ್ಲಿ ಸೀತಾಳಿಗೆ ವಾಣಿಯ ಪೆಟ್ಟಿಗೆಯನ್ನು ತೆಗೆದು ನೋಡುವ ಆಸೆ. ಇತ್ತ ಭಾರ್ಗವಿ ಸತ್ಯಜಿತ್ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿರುತ್ತಾಳೆ.
ಅತ್ತ ಸೀತಾ ಮನೆ ಕ್ಲೀನ್ ಮಾಡುವಾಗ ಸಿಕ್ಕ ವಾಣಿಯ ಪೆಟ್ಟಿಗೆಗಳನ್ನು ತೆರೆಯುವ ತವಕದಲ್ಲಿದ್ದಾಳೆ. ಆದರೆ, ಸಾಧನಾ ಎಷ್ಟೇ ಪ್ರಯತ್ನ ಪಟ್ಟರೂ ಸೀತಾ ಒಂದು ಪೆಟ್ಟಿಗೆಯನ್ನು ತೆಗೆದು ನೋಡಿದ್ದಾಳೆ.
ಒಂದರಲ್ಲಿ ವಾಣಿಯ ಸೀರೆ, ವಾಚ್ ಇತರೆ ವಸ್ತುಗಳನ್ನು ನೋಡಿ ಸುಮ್ಮನಾಗಿದ್ದಾಳೆ. ಇದನ್ನೆಲ್ಲಾ ರಾಮ್ ನೋಡಿದರೆ ಖುಷಿ ಪಡುತ್ತಾನೆ ಎಂದು ಹೇಳಿದ್ದಾಳೆ.

ಬೇಡವೆಂದರೂ ವಾಣಿ ಪೆಟ್ಟಿಗೆ ಮೇಲೆ ಸೀತಾ ಕಣ್ಣು
ಸಾಧನಾಳಿಗೆ ಭಯವಾಗಿದೆ. ವಾಣಿಯ ಪೆಟ್ಟಿಗೆಯನ್ನು ತೆರೆದಿರುವುದು ಭಾರ್ಗವಿಗೆ ಗೊತ್ತಾದರೆ ಏನಾಗುತ್ತೋ ಎಂಬ ಆತಂಕದಲ್ಲಿದ್ದಾಳೆ. ಇನ್ನೊಂದು ಹಳೆಯ ಪೆಟ್ಟಿಗೆಯನ್ನು ನೋಡಿದ ಸೀತಾ ಅದು ಯಾರದು ಎಂದು ಕೇಳಿದ್ದಕ್ಕೆ "ಅದೂ ಕೂಡ ವಾಣಿ ಮತ್ತು ಪ್ರಸಾದ್ ಅವರ ನೆನಪುಗಳಿರುವ ಪೆಟ್ಟಿಗೆ" ಎನ್ನುತ್ತಾಳೆ. "ಅದಕ್ಕೆ ಬೀಗ ಯಾಕೆ ಹಾಕಿದೆ? ಕೀ ಕೊಡಿ" ಎಂದು ಸೀತಾ ಕೇಳಿದ್ದಕ್ಕೆ ಸಾಧನಾ ಬೇಡ ಎಂದು ಹೆದರಿದ್ದಾಳೆ. ಆದರೂ ಕೂಡ ಸೀತಾಳಿಗೆ ಆ ಪೆಟ್ಟಿಗೆಯ ಮೇಲೆ ಕಣ್ಣು ಬಿದ್ದಿದ್ದು, ರಾಮ್‌ನನ್ನು ಕರೆದುಕೊಂಡು ಬಂದು ಪೆಟ್ಟಿಗೆ ತೆರೆಯುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.
ಬದಲಾಗುತ್ತಾನಾ ಶ್ರೀರಾಮ ದೇಸಾಯಿ?
ಆ ಪೆಟ್ಟಿಗೆಯಲ್ಲಿ ಹಳೆಯ ಕ್ಯಾಮರಾ ಇದ್ದು, ಅದನ್ನು ರಾಮ್ ನೋಡುತ್ತಾನೆ. ಅದರಲ್ಲಿ ಭಾರ್ಗವಿಯ ಬಣ್ಣ ಬಯಲಾಗುತ್ತಾ ಎಂಬ ಕುತೂಹಲ ಮೂಡಿದೆ. ಈ ಹೊತ್ತಿನಲ್ಲೇ ಶ್ರೀರಾಮ್ ಪಾತ್ರಧಾರಿ ಬದಲಾವಣೆಯ ಸುದ್ದಿ ಕೇಳಿ ಬಂದಿದ್ದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಆದರೆ, ಇದರ ಕಥೆಯೇ ಬೇರೆ ಇದೆ. ಸೀತಾರಾಮ ಧಾರಾವಾಹಿಯಲ್ಲಿ ಎರಡು ರಹಸ್ಯವಾದ ಕಥೆಗಳಿದ್ದವು. ನಂತರ ಅದು ನಾಲ್ಕಾಯ್ತು. ಮೊದಲನೇಯದು ಸೀತಾ ಮಗಳು ಸಿಹಿಯದ್ದು, ಎರಡನೇಯದ್ದು ರಾಮ್ ಹಳೆಯ ಪ್ರೇಮ ಕಥೆ. ನಂತರ ಈಗ ರಾಮ್ ತಂದೆ-ತಾಯಿಯ ಸಾವಿನ ರಹಸ್ಯ ಮತ್ತು ಸುಬ್ಬಿಯ ಕಥೆ ಇದೆ. ಅದರಲ್ಲಿ ಸುಬ್ಬಿಯ ಕಥೆ ಅರ್ಧ ರಿವೀಲ್ ಆಗಿದೆ. ಇನ್ನು ಶ್ರೀರಾಮ್ ದೇಸಾಯಿ ತಂದೆ-ತಾಯಿ ಸಾವಿನ ಕಥೆ ರಿವೀಲ್ ಆಗಬೇಕಿದೆ. ಆ ಹೊಸ ಕಥೆಗಾಗಿ ಶ್ರೀರಾಮ್ ಬದಲಾಗಬೇಕಿದೆ ಅಷ್ಟೇ.

ಶ್ರೀರಾಮ್ ದೇಸಾಯಿಯ ಹಳೆಯ ಕಥೆ ಶುರು
ಅಂದರೆ ಯಾರೂ ಕನ್ಫೂಸ್ ಆಗಬೇಡಿ. ಶ್ರೀರಾಮ್ ದೇಸಾಯಿ ಬಾಲಕನಿದ್ದಾಗ ನಡೆದ ಘಟನೆಗಳನ್ನು ತೋರಿಸಬೇಕಿದೆ. ಇದಕ್ಕಾಗಿ ಬಾಲ ನಟನ ಎಂಟ್ರಿಯಾಗಿದೆ. ಇದನ್ನೇ ಎಲ್ಲರೂ ಶ್ರೀರಾಮ್ ಪಾತ್ರಧಾರಿ ನಟ ಗಗನ್ ಚಿನ್ನಪ್ಪ ಬದಲಾಗುತ್ತಿದ್ದಾರೆ ಎಂದುಕೊಂಡಿದ್ದಾರೆ. ಆದರೆ, ನಟನ ಬದಲಾವಣೆ ಆಗಿಲ್ಲ. ಬದಲಿಗೆ ಕಥೆಗಾಗಿ ಹೊಸ ಎಂಟ್ರಿಯಾಗಿದೆ. ಈಗ ಚಿಕ್ಕವಯಸ್ಸಿನಲ್ಲಿ ಶ್ರೀರಾಮ್ ಇದ್ದ ಕಥೆಯನ್ನು ತೋರಿಸಿಕೊಡಲು ಹೊಸ ನಟನ ಎಂಟ್ರಿಯಾಗಿದೆ. ಅದು ಬೇರೆ ಯಾರೂ ಅಲ್ಲ ನಟಿ ಸಿಂಧು ರಾವ್ ಪುತ್ರ ಅಗಸ್ತ್ಯ ಅಥವಾ ಅಥರ್ವ್ ಇಬ್ಬರಲ್ಲಿ ಒಬ್ಬರು ಶ್ರೀರಾಮ್ ದೇಸಾಯಿ ಪಾತ್ರವನ್ನು ಮಾಡಲಿದ್ದಾರೆ.
ಸಿಂಧು ರಾವ್ ಮಗ ಈಗ ಚೋಟಾ ಶ್ರೀರಾಮ್
ನಟಿ ಸಿಂಧು ರಾವ್ ಅವರು ಕೂಡ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಒಂದಷ್ಟು ಸಿನಿಮಾಗಳ ಬಳಿಕ ಓದು ಮುಗಿಸಿ ಮಾಂಗಲ್ಯ ಹಾಗೂ ರಂಗೋಲಿ ಅಂತಹ ಹಿಟ್ ಸೀರಿಯಲ್‌ಗಳಲ್ಲಿ ನಟಿಸಿದರು. ತದನಂತರ ಮದುವೆ ಮಕ್ಕಳು ಎಂದು ಬ್ರೇಕ್ ಪಡೆದು ಇದೀಗ ಸೀತಾರಾಮ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಅನ್ನು ಶುರು ಮಾಡಿದ್ದಾರೆ. ಇದೇ ಧಾರಾವಾಹಿ ಮೂಲಕವೇ ತಮ್ಮ ಮಗನ್ನೂ ಬಣ್ಣದ ಲೋಕಕ್ಕೆ ಕರೆ ತಂದಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಇದರಲ್ಲಿ ಯಾರು ಆಕ್ಟಿಂಗ್ ಮಾಡುತ್ತಿದ್ದಾರೆ ಎಂಬುದು ಮುಂದಿನ ದಿನಗಳಲ್ಲಷ್ಟೇ ತಿಳಿದು ಬರಬೇಕಿದೆ.


Click it and Unblock the Notifications











