'ಸೆಕ್ಸ್ ವರ್ಕರ್' ಆಗಿ ಮೋಡಿ ಮಾಡಲು ಹೊರಟ ಸಿರಿ; ಆದ್ರೆ ಟೈಟಲ್ 'ಬಿಸಿಬಿಸಿ ಐಸ್‌ಕ್ರೀಮ್' ಯಾಕೆ?

By ಅನಿತಾ ಬನಾರಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'. ಕನ್ನಡ ಕೋಗಿಲೆಯ ನಿರೂಪಕಿಯಾಗಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ವೀಕ್ಷಕರ ಮನ ಸೆಳೆದ ನಿರೂಪಕಿ ಬೇರಾರೂ ಸಲ್ಲ ಸಿರಿ ರವಿಕುಮಾರ್. ಮೂಲತಃ ಆರ್ ಜೆ ಆಗಿ ತಮ್ಮ ಸುಮಧುರ ಮಾತಿನ ಮೂಲಕ ಶೋತೃಗಳ ಮನಕ್ಕೆ ಲಗ್ಗೆ ಇಟ್ಟಿದ್ದರು ಸಿರಿ. ತದ ನಂತರ ಕನ್ನಡ ಕೋಗಿಲೆ ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಯಲ್ಲಿ ಮಿಂಚಿದ ಸಿರಿ ಮುಂದೆ ನಟಿಯಾಗಿ ಭಡ್ತಿ ಪಡೆದಿದ್ದರು.

'ಕವಲುದಾರಿ' ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ ಸಿರಿ ರವಿಕುಮಾರ್ ಮತ್ತೆ ಹಿಂದಿರುಗಿ ನೋಡಿದ್ದಿಲ್ಲ. 'ಕವಲುದಾರಿ' ಸಿನಿಮಾದಲ್ಲಿ ಮನೋಜ್ಞವಾಗಿ ನಟಿಸಿದ ಈಕೆ ನಂತರ 'ಬೈ ಮಿಸ್ಟೇಕ್' ಎನ್ನುವ ಸಿನಿಮಾದಲ್ಲಿ ಅಭಿನಯಿಸಿದರು. ಕಳೆದ ವರ್ಷ ಬಿಡುಗಡೆಯಾದ 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾದಲ್ಲಿ ನಾಯಕಿ ಪ್ರೇರಣಾ ಆಗಿ ನಟಿಸಿರುವ ಈಕೆ ಅಲ್ಲೂ ಕೂಡಾ ಸಿನಿಪ್ರಿಯರ ಮನ ಸೆಳೆದು ಬಿಟ್ಟಿದ್ದರು.

Actress Siri Ravikumar will be charming as a call girl in Bisi bis Ice Cream movie

'ಸ್ವಾತಿ ಮುತ್ತಿನ ಮಳೆಹನಿಯೇ' ಇತ್ತೀಚೆಗಷ್ಟೇ ಓಟಿಟಿಯಲ್ಲಿ ರಿಲೀಸ್ ಆಗಿದ್ದು ಸಿನಿಮಾವನ್ನು ಅದರಲ್ಲೂ ಸಿರಿ ರವಿಕುಮಾರ್ ಅವರ ಪಾತ್ರವು ಸಿನಿಮಾ ವೀಕ್ಷಕರಿಗೆ ಮೋಡಿ ಮಾಡಿದ್ದಂತೂ ನಿಜ. ಅವರ ನಟನೆ, ಪಾತ್ರ ಇನ್ನು ಕೂಡಾ ವೀಕ್ಷಕರ ಮನದಲ್ಲಿ ಹಸಿರಾಗಿ ಇರುವಾಗಲೇ ಈಕೆ ಮಗದೊಂದು ಸಿನಿಮಾಗೆ ಒಪ್ಪಿಕೊಂಡಿರುವ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಹೌದು, 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾದಲ್ಲಿ ಸಿರಿ ರವಿಕುಮಾರ್ ಅವರು ಕೌನ್ಸಿಲರ್ ಆಗಿ ನಟಿಸಿದ್ದರು. ಅದು ಕೂಡಾ ಪ್ರೌಢಿಮೆಯುಳ್ಳ ಕೌನ್ಸಿಲರ್ ಆಗಿ. ಅರವಿಂದ್ ಶಾಸ್ತ್ರಿ ನಿರ್ದೇಶನದ 'ಬಿಸಿ ಬಿಸಿ ಐಸ್ ಕ್ರೀಂ' ಎನ್ನುವ ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿ ಸಿರಿ ರವಿಕುಮಾರ್ ಮಿಂಚಲಿದ್ದಾರೆ. ಮುಖ್ಯವಾದ ವಿಚಾರವೆಂದರೆ ಈ ಸಿನಿಮಾದಲ್ಲಿ ಆಕೆ ಸೆಕ್ಸ್ ವರ್ಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಇಂತಹ ಪಾತ್ರವೊಂದರಲ್ಲಿ ನಟಿಸುತ್ತಿರುವ ಸಿರಿ ಅಭಿನಯಕ್ಕೆ ಅವಕಾಶ ಇರುವಂತಹ ಪಾತ್ರದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. ಇಂತಹ ಚಾಲೆಂಜಿಗ್ ಪಾತ್ರಗಳು ಸಿಗುವುದೇ ಕಷ್ಟ. ಅಂತಹದ್ದರಲ್ಲಿ ನನಗೆ ದೊರಕಿರುವುದು ಅದೃಷ್ಟವೇ ಸರಿ" ಎಂದು ಹೇಳಿದ್ದಾರೆ.

ಬದುಕಿನಲ್ಲಿ ಆಸಕ್ತಿ ಕಳೆದುಕೊಂಡಿರುವ ಕ್ಯಾಬ್‌ ಡ್ರೈವರ್ ಜೀವನದಲ್ಲಿ ಒಬ್ಬ ಸೆಕ್ಸ್‌ ವರ್ಕರ್‌ ಬರುತ್ತಾಳೆ. ಆ ಸೆಕ್ಸ್ ವರ್ಕರ್‌ನ ಆಗಮನದಿಂದಾಗಿ ಕ್ಯಾಬ್ ಡ್ರೈವರ್‌ನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದು ಈ ಸಿನಿಮಾದ ಸಂಕ್ಷಿಪ್ತ ಸಾರಾಂಶ. ಇನ್ನು ಕ್ಯಾಬ್ ಡ್ರೈವರ್ ಆಗಿ ಅರವಿಂದ ಅಯ್ಯರ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

Actress Siri Ravikumar will be charming as a call girl in Bisi bis Ice Cream movie

ಆರ್ ಜೆ, ನಿರೂಪಕಿಯಾಗಿ ತಮ್ಮ ಮಾತುಗಳಿಂದ ಕೇಳುಗರ ಮನಕ್ಕೆ ಲಗ್ಗೆ ಹಾಕುತ್ತಿದ್ದ ಸಿರಿ ಈಗ ನಟನೆಯ ಮೂಲಕ ನೋಡುಗರ ಮನ ಸೂರೆಗೊಳ್ಳುವಂತೆ ಮಾಡಿದ್ದಾರೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿರುವ ಈಕೆ ಮುಂದೊಂದು ದಿನ ಸೀರಿಯಲ್ ಗೆ ಕಾಲಿಟ್ಟರೆ ಆಶ್ಚರ್ಯವಿಲ್ಲ.

More from Filmibeat

English summary
RJ Siri Ravikumar is a presenter who is charming in cinema as an actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X