ನೆಗೆಟಿವ್ ರೋಲ್‌ನಲ್ಲಿ ಜನಪ್ರಿಯ ನಟಿ ಸಿರಿಜಾ
'ಮದುಮಗಳು' ಧಾರಾವಾಹಿಯಲ್ಲಿ ನಟಿ ಸಿರಿಜಾ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ಸುಂದರ್ ವೀಣಾ, ಭವೀಶ್, ರಕ್ಷಿತಾ ನಟಿಸುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ 'ಮದುಮಗಳು' ಎಂಬ ಹೊಸ ಕಥೆ ಬರಲು ಸಜ್ಜಾಗುತ್ತಿದೆ. ಈಗಾಗಲೇ 'ಕಾವ್ಯಾಂಜಲಿ' ಧಾರಾವಾಹಿ ಅಂತ್ಯವಾಗುತ್ತಿದೆ. ಈ ತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಹೊಸದಾಗಿ ಮೂಡಿಬರುತ್ತಿರುವ. 'ಮದುಮಗಳು' ಧಾರಾವಾಹಿಯಲ್ಲಿ ವಿಭಿನ್ನ ಕಥಾಹಂದರವಿದೆ.
ತನ್ನ ಮನೆಗೆ ಮಗಳಾಗುವ ಬದಲು ಸೊಸೆಯಾಗಿ ಮನೆ ಸೇರುವಂತಹ ಕಥೆಯೇ ಈ ಮದುಮಗಳು. ದೊಡ್ಡ ಮನೆತನದ, ಜವಾಬ್ದಾರಿಯುತ, ದಿಟ್ಟ ಸೊಸೆ ಈ ಕಥೆಯ ಮದುವಂತಿ. ಇವಳು ಹೆಣ್ಣು ಮಗುವಿಗೆ ಜನ್ಮ ಕೊಟ್ಟು, ಆ ಮಗುವಿನ ಬದಲಿಗೆ, ಕಾರಣಾಂತರಗಳಿಂದ ಬೇರೆಯವರ ಗಂಡು ಮಗುವನ್ನು ತನ್ನ ಮಡಿಲಿನಲ್ಲಿ ಬೆಳೆಸುತ್ತಾಳೆ. ತಾನು ಜನ್ಮ ಕೊಟ್ಟ ಹೆಣ್ಣು ಮಗು ವರ್ಷಗಳ ನಂತರ ಎದುರಾದಾಗ, ತನ್ನ ಎಲ್ಲಾ ಗುಣಗಳನ್ನು ಅವಳಲ್ಲಿ ಕಂಡು ಆಶ್ಚರ್ಯಚಕಿತಳಾಗುತ್ತಾಳೆ.
ತಪ್ಪನ್ನು ಎತ್ತಿ ತೋರಿಸುವ ನಮ್ಮ ಕಥಾನಾಯಕಿ ಗ್ರೀಷ್ಮಾ, ತನ್ನ ತಾಯಿ ಎಂಬ ಅರಿವಿಲ್ಲದೆ ಮದುವಂತಿಯನ್ನು ತರಾಟೆ ತೆಗೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ. ಮದುವಂತಿಯ ಮಡಿಲಲ್ಲಿ ಬೆಳೆದ ಕಥೆಯ ನಾಯಕ ಶಿಶಿರ್, ತನಗೆ ಆಡಂಬರದ ಜೀವನ ಇಷ್ಟವಿಲ್ಲದಿದ್ದರೂ ತನ್ನಮ್ಮನ ಘನತೆಗೆ ತಕ್ಕಂತೆ ಬೆಳೆದಿರುತ್ತಾನೆ. ಹಾಗೆಯೇ ಮದುವಂತಿ ಕೂಡ ತನ್ನ ಮಗನ ಆಸೆಗೆ ಭಂಗ ಬರದಂತೆ ಪೋಷಿಸಿರುತ್ತಾಳೆ. ಈ ಕಥೆಯಲ್ಲಿ ಅಮ್ಮ ಮಗನ ಬಾಂಧವ್ಯ ಅನಾವರಣಗೊಳ್ಳಲಿದೆ. ಕ್ರಮೇಣ ನಮ್ಮ ನಾಯಕಿ ಹಾಗೂ ನಾಯಕ ಪ್ರೇಮ ಬಂಧಕ್ಕೆ ಸಿಲುಕುತ್ತಾರೆ. ನಾಯಕಿಯನ್ನು ದ್ವೇಷಿಸೊ ನಮ್ಮ ಮದುವಂತಿಯನ್ನು ಎದುರಿಸಿ ತನ್ನ ಮನೆಗೆ ಹೇಗೆ ಸೊಸೆಯಾಗಿ ನೆಲೆವೂರುತ್ತಾಳೆ ಎಂಬುದು ಈ ಧಾರಾವಾಹಿಯ ಕಥಾಹಂದರ.

ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ
ಈ ಧಾರಾವಾಹಿ ಬಳಗದಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ ಅವರು ಜವಾಬ್ದಾರಿಯುತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿ ತನ್ನ ವಿಶಿಷ್ಟ ಪಾತ್ರಗಳಿಂದ ಛಾಪು ಮೂಡಿಸಿದ ಸುಂದರ್ ವೀಣಾ ಅವರು ಈ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆ ಧಾರಾವಾಹಿಯ ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ ಅವರು ಕಾಣಿಸಿಕೊಳ್ಳಲಿದ್ದಾರೆ. ಹೊಸ ಪರಿಚಯ ಭವೀಶ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಈ ಧಾರಾವಾಹಿಯಲ್ಲಿ ಚಿರಪರಿಚಿತ ತಾರಾ ಬಳಗವಿದೆ.

ಹಲವು ವರ್ಷಗಳ ಬಳಿಕ ಕಿರುತೆರೆಗೆ ಮರಳಿದ್ದಾರೆ
ಮನೆಯೊಂದು ಮೂರು ಬಾಗಿಲು', 'ಸಂಬಂಧ', 'ರಂಗೋಲಿ', 'ಬದುಕು' ಧಾರಾವಾಹಿ ಸೇರಿದಂತೆ ಕನ್ನಡದ ಅನೇಕ ಮೆಗಾ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ನಟಿ ಸಿರಿಜಾ ಅವರು ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಹೊಸದಾಗಿ ಮೂಡಿ ಬರುತ್ತಿರುವ 'ರಾಮಾಚಾರಿ' ಧಾರಾವಾಹಿಯಲ್ಲಿ ಸಿರಿಜಾ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ
ಅಂಬಿಕಾ' ದಿಂದ ಇಡಿದು , 'ನನ್ನವಳು ನನ್ನವಳು' , 'ಮನೆಯೊಂದು ಮೂರು ಬಾಗಿಲು' , 'ಬಂದೇ ಬರತಾವ ಕಾಲ', 'ರಂಗೋಲಿ', 'ಸಂಬಂಧ' , 'ಕೋಗಿಲೆ , 'ಈ ಬಂಧನ', 'ಬದುಕು', 'ಗೀತಾಂಜಲಿ', 'ಜೋಡಿಹಕ್ಕಿ' , 'ಅಂಜಲಿ' ಸೇರಿದಂತೆ ಇನ್ನೂ ಸಾಕಷ್ಟು ಹಿಟ್ ಧಾರವಾಹಿಗಳಲ್ಲಿ ಸಿರಿಜಾ ನಟಿಸಿದ್ದಾರೆ. ಚಿಕ್ಕ ವಯಸ್ಸಿಗೆ ಸಿರಿಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಕನ್ನಡ ಸೇರಿ ಪರಭಾಷೆಯಲ್ಲಿಯೂ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಂಗೋಲಿ' ಧಾರಾವಾಹಿಯಲ್ಲಿ ಅಭಿ ಪಾತ್ರದ ಮೂಲಕ ಸಿರಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು. ಇನ್ನು 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಯಲ್ಲಿ ಅಶ್ವಿನಿ ಪಾತ್ರದಲ್ಲಿ ಸಿರಿಜಾ ನಟಿಸಿದ್ದರು. ಈ ಸೀರಿಯಲ್ ಅನೇಕ ವರ್ಷಗಳ ಕಾಲ ಪ್ರಸಾರವಾಗಿತ್ತು.

ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ
'ಅಂಬಿಕಾ' ಧಾರಾವಾಹಿ ನಂತರದಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿ ಅವರು ನಾಲ್ಕು ಸಿನಿಮಾಗಳು ಮಾಡಿದ್ದರು. ಉಷಾ ಕಿರಣ್ ಬ್ಯಾನರ್‌ನಡಿ ಜ್ಯೂನಿಯರ್ ಎನ್‌ಟಿಆರ್ ಅವರ 'ನಿನ್ನೆ ಚೂಡಾಲನಿ' ಸಿನಿಮಾದಲ್ಲಿಯೂ ಸಿರಿ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿಯೂ ಸಿರಿ ಅವರು 'ಸಿಂಹಾದ್ರಿಯ ಸಿಂಹ', 'ಚಂದು' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ 30ಕ್ಕೂ ಅಧಿಕ ಧಾರಾವಾಹಿಗಳಲ್ಲಿ ಸಿರಿ ನಟಿಸಿದ್ದಾರೆ. ಏಕಕಾಲಕ್ಕೆ 3-4 ಧಾರಾವಾಹಿಗಳಲ್ಲಿ ಬ್ಯುಸಿಯಿರುತ್ತಿದ್ದ ನಟಿ ಸಿರಿ. ಇಂದು ಕೂಡ ಜನರು ಸಿರಿ ಅವರನ್ನು 'ರಂಗೋಲಿ', 'ಸಂಬಂಧ', 'ಮನೆಯೊಂದು ಮೂರು ಬಾಗಿಲು' ಧಾರಾವಾಹಿಗಳ ಪಾತ್ರಗಳ ಹೆಸರಿನಲ್ಲಿ ಕರೆಯುವುದುಂಟು. ತಮಿಳು, ತೆಲುಗು, ಕನ್ನಡದ ಕಿರುತೆರೆ, ಬೆಳ್ಳಿತೆರೆಯಲ್ಲಿ ಸಿರಿ ಕೆಲಸ ಮಾಡಿದ್ದಾರೆ.


Click it and Unblock the Notifications











