For Quick Alerts
  ALLOW NOTIFICATIONS  
  For Daily Alerts

  ಮೊದಲ ಪತಿ ದೌರ್ಜನ್ಯ ನಡೆಸಿದ್ದಾನೆ, ಎರಡನೇ ಪತಿ ನನ್ನನ್ನು ಹಿಂಸಿಸಿದ್ದಾನೆ: ಬಿಗ್ ಬಾಸ್ ಸ್ಪರ್ಧಿ

  By ರವೀಂದ್ರ ಕೊಟಕಿ
  |

  ಹಲವು ಭಾಷೆಗಳಲ್ಲಿ ಹೀಗಾಗಲೇ ಈ ಬಾರಿಯ ಬಿಗ್ ಬಾಸ್ ಸ್ಪರ್ಧೆ ಮುಗಿದಿದೆ. ಮತ್ತೆ ಕೆಲವು ಭಾಷೆಗಳಲ್ಲಿ ಇನ್ನೂ ಬಿಗ್ ಬಾಸ್ ಸ್ಪರ್ಧೆ ನಡೆಯುತ್ತಿದೆ. ಬಿಗ್ ಬಾಸ್ ಎಲ್ಲಾ ಕಡೆಯೂ ಅತ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಾಧಿಸುವುದರ ಜೊತೆಗೆ ಅಷ್ಟೇ ಮಟ್ಟದಲ್ಲಿ ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದೆ.

  ಇತ್ತೀಚೆಗೆ ಆಂಧ್ರಪ್ರದೇಶದ ಸಿಪಿಎ ಕಾರ್ಯದರ್ಶಿ ಎ.ನಾರಾಯಣ ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ, ಆರೋಗ್ಯಪೂರ್ಣ ಸಮಾಜದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿರುವ ಬಿಗ್ ಬಾಸ್ ಸ್ಪರ್ಧೆಯನ್ನು ತಕ್ಷಣ ರದ್ದು ಮಾಡುವಂತೆ ಆಗ್ರಹಿಸಿದ್ದರು. ಇದಕ್ಕೆ ದೊಡ್ಡ ಮಟ್ಟದಲ್ಲೇ ಸಂಘ-ಸಂಸ್ಥೆಗಳು ಬೆಂಬಲವನ್ನು ಕೂಡ ವ್ಯಕ್ತಪಡಿಸಿವೆ. ಪರ-ವಿರೋಧ ಏನೇ ಇರಲಿ ಜನರಿಗೆ ಬಿಗ್ ಬಾಸ್ ಒಳ್ಳೆ ಮನೊರಂಜನೆ ಕೊಡುತ್ತಾ ಇದೆ. ಜೊತೆಗೆ ಒಂದಷ್ಟು ಆಸಕ್ತಿದಾಯಕ ಸ್ಪರ್ಧಿಗಳ ಖಾಸಗಿ ವಿಷಯಗಳು ಕೂಡ ಅವರ ಬಾಯಿಂದಲೇ ಹೊರಬರುತ್ತಿದೆ. ಅದು ಸ್ಪರ್ಧೆ ನಡೆಯುವಾಗ ಅಥವಾ ಮುಗಿದ ಮೇಲೂ ಕೂಡ ಒಟ್ಟಲ್ಲಿ ನಿರಂತರವಾಗಿ ಬಿಗ್ ಬಾಸ್ ಸ್ಪರ್ಧಿಗಳ ಖಾಸಗಿ ವಿಷಯಗಳ ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ.

  ಈಗ ಇಂತಹದೇ ಒಂದು ಸುದ್ದಿ ಹೊರಬಂದಿರುವುದು ಮರಾಠಿ ಬಿಗ್ ಬಾಸ್ ಸ್ಪರ್ಧಿಯ ಖಾಸಗಿ ಜೀವನದ ವಿಷಯ. ಅದು ಕೂಡ ಸ್ಪರ್ಧೆಗೆ ಹೊರಡುವ ಸಮಯದಲ್ಲಿ.

  ಅವರಿಬ್ಬರೂ ಬಿಗ್ ಬಾಸ್ ಮನೆಯ ಪ್ರಮುಖ ಆಕರ್ಷಣೆ

  ಅವರಿಬ್ಬರೂ ಬಿಗ್ ಬಾಸ್ ಮನೆಯ ಪ್ರಮುಖ ಆಕರ್ಷಣೆ

  ಮಹೇಶ್ ಮಂಜ್ರೇಕರ್ ನಿರೂಪಿಸುತ್ತಿರುವ ಕಲರ್ಸ್ ಮರಾಠಿ ಯಲ್ಲಿ ಪ್ರಸಾರವಾಗುತ್ತಿರುವ ಮರಾಠಿ ಬಿಗ್ ಬಾಸ್ ಸೀಸನ್ 3 ಸೆಪ್ಟೆಂಬರ್ 19ರಿಂದ (ಕಳೆದ ಭಾನುವಾರ) ಅದ್ದೂರಿಯಾಗಿ ಆರಂಭ ಪಡೆದಿದೆ.

  ಬಿಗ್ ಬಾಸ್ ಮರಾಠಿಯ ಮೂರನೇ ಸೀಸನ್‌ನಲ್ಲಿ ಭಾಗವಹಿಸಿದವರಲ್ಲಿ, ನಟಿ ಸ್ನೇಹಾ ವಾಘ್ ಮತ್ತು ನಟ ಅವಿಷ್ಕರ್ ದಾರ್ವೇಕರ್ ವಿಶೇಷ ಆಕರ್ಷಣೆ ಯಾಗಿದ್ದಾರೆ. ಕಾರಣ ಅವರಿಬ್ಬರೂ ಒಂದು ಕಾಲದಲ್ಲಿ ಗಂಡ ಹೆಂಡತಿ ಯಾಗಿದ್ದರು. ಸ್ನೇಹಾ ಅವರು 19 ನೇ ವಯಸ್ಸಿನಲ್ಲಿ ಅವಿಷ್ಕಾರ್ ದಾರ್ವೇಕರ್ ಅವರನ್ನು ವಿವಾಹವಾದರು. ಆದರೆ ಅವರ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಪತಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆಕೆ ಆತನಿಗೆ ವಿಚ್ಛೇದನ ನೀಡಿದಳು. ಈಗ ಇವರಿಬ್ಬರೂ

  ಮರಾಠಿ ಬಿಗ್ ಬಾಸ್ ಸೀಸನ್ 3 ಮೂಲಕ ಮುಖಾಮುಖಿಯಾಗಿದ್ದಾರೆ. ಹೀಗಾಗಿ ಈ ಸೀಸನ್ ಸಂಪೂರ್ಣವಾಗಿ ಇವರೇ ಆವರಿಸಿಕೊಳ್ಳಲಿದ್ದಾರೆ ಅಂತ ಭಾವಿಸಲಾಗುತ್ತಿದೆ. ಬಿಗ್ ಬಾಸ್ ಶೋ ಅಭಿಮಾನಿಗಳು ಇವರಿಬ್ಬರ ನಡುವಿನ ಸ್ಪರ್ಧೆಯನ್ನು ನೋಡಲು ಹೆಚ್ಚು ಕಾತರರಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಕೂಡ ಇವರ ಬಗ್ಗೆ ಹೆಚ್ಚು ಚರ್ಚೆಗಳು ಆರಂಭವಾಗಿದೆ.

  ಮಾಜಿ ಪತಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಾಗ

  ಮಾಜಿ ಪತಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಾಗ

  ಅವನ ಎಂಟ್ರಿಗೆ ಇವಳು ಕೊಟ್ಟ ಎಕ್ಸ್ಪ್ರೆಶನ್ ಸಿಕ್ಕಾಪಟ್ಟೆ ವೈರಲ್ ಕಳೆದ ಭಾನುವಾರ ಆರಂಭವಾದ ಬಿಗ್ ಬಾಸ್ ಮೂರನೇ ಸೀಸನ್‌ನಲ್ಲಿ ಜ್ಯೋತಿ, 'ಚಂದ್ರಗುಪ್ತ ಮೌರ್ಯ' ಧಾರಾವಾಹಿಗಳ ಮೂಲಕ ಜನಪ್ರಿಯತೆಯನ್ನು ಪಡೆದ ಈ ಮರಾಠಿ ಬೆಡಗಿ ಮೂರನೆಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದಳು. ಏಳನೆಯ ಸ್ಪರ್ಧಿಯಾಗಿ ಈಕೆಯ ಮಾಜಿ ಪತ್ನಿ, ನಟ ಅವಿಷ್ಕಾರ್ ದಾರ್ವೇಕರ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಾಗ ಇವಳು ಕೊಟ್ಟ ಎಕ್ಸ್ಪ್ರೆಶನ್ ನೋಡಿದವರೆಲ್ಲಾ ಈ ಬಾರಿಯ ಬಿಗ್ ಬಾಸ್ ಸಕ್ಕತ್ತು ಥ್ರಿಲ್ ಕೊಡುತ್ತೆ ಅಂತ ಭಾವಿಸಲು ಆರಂಭಿಸಿದ್ದಾರೆ ಇದರ ಬಗ್ಗೆ ಕೆಲವರು ಟ್ವೀಟ್ ಕೂಡ ಮಾಡಿದ್ದಾರೆ. ಒಟ್ಟಾರೆ ಇವರಿಬ್ಬರ ಸ್ಪರ್ಧೆಯಿಂದ ಬಿಗ್ ಬಾಸ್ ಸೀಸನ್ 3 ಕುತೂಹಲದ ಕೇಂದ್ರಬಿಂದುವಾಗಿದೆ.

  ಎರಡನೇ ಪತಿಗೋ ವಿಚ್ಛೇದನ!

  ಎರಡನೇ ಪತಿಗೋ ವಿಚ್ಛೇದನ!

  ಇನ್ನು ಸ್ನೇಹಾಳ ಖಾಸಗಿ ಜೀವನಕ್ಕೆ ಬರುವುದಾದರೆ ಮೊದಲ ಪತಿ ಅವಿಷ್ಕಾರ್ ದಾರ್ವೇಕರ್ ಇಂದ ವಿಚ್ಛೇದನ ಪಡೆದ ನಂತರ 2015 ರಲ್ಲಿ ಇಂಟೀರಿಯರ್ ಡಿಸೈನರ್ ಅನುರಾಗ್ ಸೋಲಂಕಿ ಅವರನ್ನು ವಿವಾಹವಾದರು, ಆದರೆ ಮದುವೆಯಾದ ಎಂಟು ತಿಂಗಳ ನಂತರ ಆತನಿಗೆ ವಿಚ್ಛೇದನ ನೀಡಿದರು. ಸ್ನೇಹಾ ತನ್ನ ಎರಡು ಮದುವೆಗಳ ಬಗ್ಗೆ ಮಾತನಾಡಿದ ಒಂದು ಸಂದರ್ಶನವು ವೈರಲ್ ಆಗಿದೆ. ಮೊದಲ ಪತಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾನೆ ಮತ್ತು ಎರಡನೇ ಪತಿ ನನ್ನನ್ನು ಹಿಂಸಿಸಿದ್ದಾನೆ ಎಂದು ಸಂದರ್ಶನದಲ್ಲಿ ಆರೋಪಿಸಿದ್ದಾರೆ ಈ ನಟಿ.

  ಕಾಮ್ಯಾ ಪಂಜಾಬಿ ತಿರುಗೇಟು

  ಕಾಮ್ಯಾ ಪಂಜಾಬಿ ತಿರುಗೇಟು

  ನಟಿ ಕಾಮ್ಯಾ ಪಂಜಾಬಿ ಅವರು ಸ್ನೇಹಾಳ ಈ ಆರೋಪಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. 'ನೀವು ನಿಜವಾಗಿಯೂ ಏನು ಯೋಚಿಸುತ್ತೀರಿ? ನಿಮ್ಮ ಇಬ್ಬರು ಮಾಜಿ ಗಂಡಂದಿರು ಬಿಗ್‌ಬಾಸ್‌ಗೆ ಪ್ರವೇಶಿಸಲು ನೋಡುತ್ತಿದ್ದಾರೆಯೇ? ತುಂಬಾ ಚೆನ್ನಾಗಿದೆ. ಆದರೆ ನೀವು ಯಾಕೆ ಸಂತ್ರಸ್ತೆಯ ಕಾರ್ಡ್ ಆಡುತ್ತಿದ್ದೀರಿ? ನಿಮ್ಮ ಮೊದಲ ಮದುವೆಯ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಎರಡನೇ ಮದುವೆಯ ಬಗ್ಗೆ ಅಂತಹ ಕಥೆಗಳನ್ನು ಹೇಳಲು ಪ್ರಯತ್ನಿಸಬೇಡಿ. ನಾನು ಸತ್ಯಗಳನ್ನು ಹೊರಗೆ ತರಬಲ್ಲೆ ಎಂದು ನಿನಗೆ ಚೆನ್ನಾಗಿ ತಿಳಿದಿದೆ. ಶುಭವಾಗಲಿ, ಆದರೆ ಕೆಟ್ಟದಾಗಿ ಆಟ ಆಡಬೇಡಿ 'ಎಂದು ಅವರು ಟ್ವೀಟ್ ಮಾಡಿದ್ದಾರೆ. ತನಗೆ ಬೆಂಬಲ ನೀಡಿದ ಕಾಮ್ಯಾಗೆ ಅನುರಾಗ್ ಧನ್ಯವಾದ ಅರ್ಪಿಸಿದ್ದು. ಆತ ತಾನು ಚಿತ್ರಹಿಂಸೆ ನೀಡಿರುವುದನ್ನು ಸಾಬೀತುಪಡಿಸುವಂತೆ ಸ್ನೇಹಾಗೆ ಸವಾಲು ಹಾಕಿದ್ದಾನೆ. ಪ್ರಸ್ತುತ ಬಿಗ್ ಬಾಸ್ ಮನೆಯಲ್ಲಿರುವ ಸ್ನೇಹಾ ಮುಂದೆ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಅಂತ ಕಾದುನೋಡಬೇಕಿದೆ.

  English summary
  Actress Sneha Vagh and her first husband Avishkar Darvekar enters Bigg Boss Marathi. In past she alleged her first husband physically tortured her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X