ಕಡಲೆಕಾಯಿ ಪರಿಷೆಯಲ್ಲಿ ಫುಲ್ ಎಂಜಾಯ್ ಮಾಡಿದ ಸೋನು ಗೌಡ, ಸಂಯುಕ್ತ ಹೊರನಾಡು, ಅದಿತಿ ಸಾಗರ್

By Poorva

ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಿದ ನಟಿ ಸೋನು ಗೌಡ. ಇದೀಗ ಮರೀಚಿ ಸಿನಿಮಾದ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ವಿಜಯ ರಾಘವೇಂದ್ರ ಅವರ ಜೊತೆ ಸೋನು ಗೌಡ ಅಭಿನಯ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಬೆನ್ನಲ್ಲೇ ಸೋನು ಗೌಡ ಜಾಲಿ ಮೂಡ್ ನಲ್ಲಿ ಇದ್ದಾರೆ. ಇವರ ಜೊತೆ ಸಂಯುಕ್ತ ಹೊರನಾಡು ಹಾಗೂ ಅದಿತಿ ಸಾಗರ್ ಜಾಯಿನ್ ಆಗಿದ್ದಾರೆ.

ಇವರೆಲ್ಲರೂ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಡಲೆ ಕಾಯಿ ಪರಿಷೆಯನ್ನು ಎಲ್ಲೆಡೆ ಬಹಳ ಅದ್ದೂರಿಯಾಗಿ ಮಾಡಲಾಗುತ್ತಿದೆ. ಡಿಸೆಂಬರ್ ಮೊದಲವಾರದಲ್ಲಿ ಈ ಹಬ್ಬ ಶುರುವಾಗಿ ಬಿಡುತ್ತದೆ.

Actress Sonu Gowda, Samyukta Hornad enjoys Basavanagudi Kadalekai Parishe

ಸಾಕಷ್ಟು ಜನ ಕಡಲೆ ಕಾಯಿ ಪರಿಷೆಗೆ ಭೇಟಿಯನ್ನು ನೀಡುತ್ತಾರೆ. ಕಡಲೆಕಾಯಿ ಪರಿಷೆಗೆ ಸುಮಾರು 500 ವರುಷಗಳ ಇತಿಹಾಸ ಇದೆ. ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಹಳ ಅದ್ದೂರಿಯಾಗಿ ಈ ಜಾತ್ರೆ ನಡೆಯುತ್ತದೆ. ಈ ವಾರ್ಷಿಕ ಜಾತ್ರೆ ಬಸವನಗುಡಿಯಲ್ಲಿ ನಡೆಯುತ್ತದೆ. ಇನ್ನು ಜಾತ್ರೆಗೆ ಸ್ನೇಹಿತರ ಗ್ರೂಪ್‌ನೊಂದಿಗೆ ಸೋನು ಗೌಡ ಬಂದಿದ್ದು, ಸಕತ್ ಎಂಜಾಯ್ ಮಾಡಿದ್ದಾರೆ.

ಕಡಲೆಕಾಯಿ ಪರಿಷೆಯಲ್ಲಿ ಸೋನು ಅಂಡ್ ಗ್ಯಾಂಗ್

ಬ್ಯುಸಿ ಶೆಡ್ಯೂಲ್‌ನಲ್ಲಿ ಕೂಡ ತನ್ನ ಗೆಳೆಯರೊಂದಿಗೆ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿ ಸ್ನೇಹಿತರ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ಸಂಯುಕ್ತಾ ಹೊರನಾಡು ಕಡಲೆ ಕಾಯಿಯನ್ನು ಕೈಯಿಂದ ಕೆಳಗೆ ಹಾಕುವ ರೀತಿಯಲ್ಲಿ ಫೋಟೋ ತೆಗೆಸಿಕೊಂಡು ಇದ್ದಾರೆ. ಅದಿತಿ ಸಾಗರ್ ಕೂಡ ಇವರ ಜೊತೆ ಭಾಗಿ ಆಗಿದ್ದು ಖುಷಿ ಪಟ್ಟಿದ್ದಾರೆ. ಜಾಯಿಂಟ್ ವೀಲ್ ಬಳಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಇನ್ನು ಸೋನು ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕಡಲೆಕಾಯಿ ಪರಿಷೆಯ ಖುಷಿ ಎಂದು ಬರೆದುಕೊಂಡು ಇದ್ದಾರೆ.

Actress Sonu Gowda, Samyukta Hornad enjoys Basavanagudi Kadalekai Parishe

ನೋಡುಗರ ಮನ ಗೆದ್ದ ನಟಿ

ಈ ಫೋಟೋಗಳಿಗೆ ಸಾಕಷ್ಟು ಲೈಕ್ ಕಾಮೆಂಟ್‌ಗಳು ಬರುತ್ತಿದೆ. ಹಾಗೆ ಸೋ ನೈಸ್ ಎನ್ನುವ ಕಾಮೆಂಟ್‌ಗಳನ್ನೂ ಮಾಡಿ ಖುಷಿ ಪಡುತ್ತಾ ಇದ್ದಾರೆ. ಹಾಗೆಯೇ ಕಡಲೆಕಾಯಿ ಪರಿಷೆಗೆ ಬಂದವರಿಗೆ ಕಡಲೆ ಕಾಯಿಯನ್ನು ಪ್ರಸಾದದ ರೂಪವಾಗಿ ನೀಡಲಾಗುತ್ತದೆ. ಇನ್ನು ಸೋನು ಗೌಡ ಇತ್ತೀಚಿನ ದಿನಗಳಲ್ಲಿ ಎರಡನೇ ಮದುವೆಯ ಕುರಿತು ಮಾತನಾಡಿದ್ದರು.

ವಿಚ್ಛೇದನದ ಬಗ್ಗೆ ಮಾತನಾಡಿದ ನಟಿ

ಸಿಂಗಲ್ ರೆಡಿ ಟೂ ಮಿಂಗಲ್ ಎಂದು ಸೋನು ಗೌಡ ಇತ್ತೀಚಿನ ದಿನಗಳಲ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹಾಗೆಯೇ ಮದುವೆ ಆಗುವ ಹುಡುಗ ಹೇಗಿರಬೇಕು ಎಂಬುವುದನ್ನು ಹೇಳಿಕೊಂಡಿದ್ದಾರೆ. ಹಾಗೆಯೇ ನೀವು ಬದುಕಿ ನನ್ನನ್ನು ಬದುಕಲು ಬಿಡಿ ಎಂದು ಸೋನು ಗೌಡ ಮನವಿ ಮಾಡಿದ್ದರು.

More from Filmibeat

English summary
Sonu Gowda, Samyukta Hornad at Basavanagudi Kadalekai Parishe.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X