'ನಾನು ನನ್ನ ಕನಸು' ಧಾರಾವಾಹಿ ನಟಿಯ ಫೋಟೋಶೂಟ್‌ಗೆ ವೀಕ್ಷಕರು 'ದಿಲ್ ಖುಷ್'; ಯಾರೀ ನಟಿ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿ ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನ ಸೆಳೆದಿತ್ತು. ಪ್ರತಿದಿನ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಕಳೆದ ವರ್ಷ ಶುರುವಾಗಿ ಕಳೆದ ವರ್ಷವೇ ಮುಕ್ತಾಯ ಕಂಡಿತ್ತು.
ಯಶಸ್ವಿ ನೂರು ಸಂಚಿಕೆ ಪೂರೈಸಿದ್ದ 'ಗೃಹಪ್ರವೇಶ' ಧಾರಾವಾಹಿಯು ಕಾರಣಾಂತರಗಳಿಂದ ತನ್ನ ಪ್ರಸಾರ ನಿಲ್ಲಿಸಿತ್ತು. ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣ ನಿಲ್ಲಿಸಿತ್ತು. ಬಾಲ್ಯದಿಂದಲೇ ಕಾಣದಿರುವ ತಂದೆಯನ್ನು ಹುಡುಕಿಕೊಂಡು ಹಳ್ಳಿಯಿಂದ ಬೆಂಗಳೂರಿಗೆ ನಾಯಕಿ ಪಲ್ಲವಿ ಹೋಗುತ್ತಾಳೆ. ಅಲ್ಲಿ ಅನಿರೀಕ್ಷಿತವಾಗಿ ತನ್ನ ತಂದೆಯ ಮನೆಗೆ ಆಕೆ ಸೇರುತ್ತಾಳೆ. ಧಾರಾವಾಹಿಯ ಕೊನೆಯಲ್ಲಿ ಅದು ಗೊತ್ತಾಗುತ್ತದೆ. ಹಳ್ಳಿ ಹುಡುಗಿ ಪಲ್ಲವಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದಾರೆ ಸ್ಪಂದನಾ ಸೋಮಣ್ಣ.

ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸ್ಪಂದನಾ ಸೋಮಣ್ಣ ಈಗಲೂ ಪಲ್ಲವಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಸ್ಪಂದನಾ ಸೋಮಣ್ಣ ಅವರು ಇತ್ತೀಚೆಗೆ ಮಾಡಿಕೊಂಡಿರುವ ಫೋಟೋಶೂಟ್ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು, ಈ ಫೋಟೋಶೂಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಆಕೆ ಹಂಚಿಕೊಂಡಿದ್ದು ಬೋಲ್ಡ್ ಅವತಾರದ ಮೂಲಕ ನೆಟ್ಟಿಗರ ಮನ ಸೆಳೆದಿದ್ದಾರೆ.
ಅಂದ ಹಾಗೇ, ಧಾರಾವಾಹಿಯಲ್ಲಿ ಲಂಗ ಧಾವಣಿ ಧರಿಸಿ, ಟಿಪಿಕಲ್ ಹಳ್ಳಿ ಹುಡುಗಿಯಾಗಿ ಮೋಡಿ ಮಾಡಿದ ಸ್ಪಂದನಾ ಅವರ ಹೊಸ ಲುಕ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಫೈರ್ ಬ್ಯಾಕ್ ಗ್ರೌಂಡ್ ಮುಂದೆ ನಿಂತಿರುವ ಸ್ಪಂದನಾ ಬ್ರೌನ್ ಕಲರ್‌ನ ಗೌನ್ ಧರಿಸಿದ್ದಾರೆ. ನೋಡಲು ಸಿಂಪಲ್ ಆಗಿರುವ ಈ ಫೋಟೋ ನೆಟ್ಟಿಗರ ಮನ ಸೆಳೆದಿದ್ದಾರೆ.

'ನಾನು ನನ್ನ ಕನಸು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸ್ಪಂದನಾ ಸೋಮಣ್ಣ ನಾಯಕಿ ಅನು ಪಾತ್ರಕ್ಕೆ ಜೀವ ತುಂಬಿದ್ದರು. ತದ ನಂತರ ತೆಲುಗಿನ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ತೆಲುಗಿನ 'ನಚ್ಚಾವೆ' ಎನ್ನುವ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೇ ಹಿಂದಿಯ 'ಸುನ್ ಲೆ ನಾ' ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.
'ದಿಲ್ ಖುಷ್' ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ ಸ್ಪಂದನಾ ಸೋಮಣ್ಣ. ಇದರ ಜೊತೆಗೆ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ ನಟಿಸಿರುವ ಮರೀಚಿ ಸಿನಿಮಾದಲ್ಲಿಯೂ ಈಕೆ ಅಭಿನಯಿಸಿದ್ದಾರೆ.


Click it and Unblock the Notifications











