"ಕ್ಯಾಪ್ಶನ್ ನೋಡ್ಬೇಡಿ" ಎಂದ ನಟಿ ಸ್ಪಂದನಾ ಸೋಮಣ್ಣ; ಮಜವಾಗಿದೆ ನೆಟ್ಟಿಗರು ಕಾಮೆಂಟ್

By ಅನಿತಾ ಬನಾರಿ

'ಕರಿಮಣಿ' ಧಾರಾವಾಹಿಯಲ್ಲಿ ನಾಯಕಿ ಸಾಹಿತ್ಯಾ ಪಾತ್ರದಲ್ಲಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಸ್ಪಂದನಾ ಸೋಮಣ್ಣ. 'ಕರಿಮಣಿ' ಧಾರಾವಾಹಿಯಲ್ಲಿ ಮಿಡ್ಲ್ ಕ್ಲಾಸ್ ಕುಟುಂಬದ ಹುಡುಗಿಯಾಗಿ ಸ್ಪಂದನಾ ನಟಿಸುತ್ತಿದ್ದಾರೆ. ಅಪ್ಪ ಎಂದರೆ ಬೆಟ್ಟದಷ್ಟು ಪ್ರೀತಿ ಹೊಂದಿರುವ ಸಾಹಿತ್ಯಾ ಅಪ್ಪನಿಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾಳೆ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ಸ್ಪಂದನಾ ರಂಜಿಸುತ್ತಿದ್ದಾರೆ.

ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿರುವ ಸ್ಪಂದನಾ ಅವರು ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್ ಮಾಡಿಸಿಕೊಳ್ಳುವುದು ಅಲ್ಲದೇ ಅದನ್ನು ಶೇರ್ ಮಾಡುತ್ತಿರುತ್ತಾರೆ. ಅಂದ ಹಾಗೇ ಇತ್ತೀಚೆಗಷ್ಟೇ ಹೊಸ ಫೋಟೋಶೂಟ್ ಮಾಡಿಸಿಕೊಂಡಿರುವ ಸ್ಪಂದನಾ ಸೋಮಣ್ಣ ಅದನ್ನು ಶೇರ್ ಮಾಡಿದ್ದಾರೆ.

Actress Spandana Somanna says don t look at the caption look at me after sharing her photoshoot

ಹೌದು, ಮಿನಿ ಬ್ಲ್ಯಾಕ್ ಆಂಡ್ ರೆಡ್ ಡ್ರೆಸ್‌ನಲ್ಲಿ ಈಕೆ ಸ್ಟೈಲಿಶ್ ಮಾತ್ರವಲ್ಲದೇ ತುಂಬಾ ಕ್ಯೂಟಾಗಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಬೋ ರೀತಿಯ ಆಫ್ ಶೋಲ್ಡರ್ ಟಾಪ್ ಜೊತೆ ಕಪ್ಪು ಬಣ್ಣದ ಮಿನಿ ಸ್ಕರ್ಟ್ ಧರಿಸಿರುವ ಈ ಬೆಡಗಿ "ಡೋಂಟ್ ಲುಕ್ ಅಟ್ ದಿ ಕ್ಯಾಪ್ಶನ್.. ಲುಕ್ ಅಟ್ ಮೀ" ಎಂದು ಕ್ಯಾಪ್ಶನ್ ಕೂಡಾ ನೀಡಿದ್ದಾರೆ. ಕಿರುತೆರೆ ನಟಿ ಸ್ಪಂದನಾ ಅವರಿಗೆ ಅನ್ವಿತಾ ಮೇಕಪ್ ಮಾಡಿದ್ದರೆ. ಅರುಣ್ ಕುಮಾರ್ ಈಕೆಯ ಅಂದವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

"ನಿಮ್ಮಂತಹ ಸುಂದರಿ ಇದ್ದರೆ, ಕ್ಯಾಪ್ಶನ್ ಯಾರ್ ನೋಡ್ತಾರೆ?", "ಸಿಝಲಿಂಗ್ ಬ್ಯೂಟಿ", "ಬಾರ್ಬಿ ಡಾಲ್", "ನೀವು ಮತ್ತು ನಿಮ್ಮ ನಗು ಎರಡು ತುಂಬಾನೆ ಆಕರ್ಷಕವಾಗಿವೆ" ಹೀಗೆ ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ. 'ಕರಿಮಣಿ' ಧಾರಾವಾಹಿಯ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಸ್ಪಂದನಾ, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಟಿಸಿದ್ದರು.

'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕಿ ಪಲ್ಲವಿಯಾಗಿ ಈಕೆ ಅಭಿನಯಿಸಿದ್ದರು. ಪ್ರತಿ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಟಿ ಆರ್ ಪಿ ಕಾರಣದಿಂದಾಗಿ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು. ಇನ್ನು ಇತ್ತೀಚೆಗೆ ತೆರೆ ಕಂಡ 'ದಿಲ್ ಖುಷ್' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದು, ಸಿನಿ ಪ್ರಿಯರು ಕೂಡಾ ಮೆಚ್ಚಿಕೊಂಡಿದ್ದರು. 'ನಾನು ನನ್ನ ಕನಸು' ಧಾರಾವಾಹಿಯ ಅನು ಆಗಿ ಕಿರುತೆರೆಗೆ ಕಾಲಿಟ್ಟ ಸ್ಪಂದನಾ ಸೋಮಣ್ಣ ಮರೀಚಿ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.

More from Filmibeat

English summary
Spandana Somanna charmed with a new photoshoot
Read more about: actress anitha banari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X