ಅಮ್ಮನ ಸೀರೆಯುಟ್ಟ ಸುಧಾರಾಣಿ ಮುಂದೆ ನೆನಪುಗಳ ಬುತ್ತಿ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ

ಯಾವ ಹೆಣ್ಣು ಮಕ್ಕಳಿಗೆ ಆಗಲಿ ಅಮ್ಮಂದಿರ ವಸ್ತುಗಳೆಂದರೆ ಬೆಲೆ ಕಟ್ಟಲಾಗದ ಭಾವನೆಗಳು. ಅದರಲ್ಲೂ ಅವರಿಟ್ಟಿದ ಸೀರೆಗಳ ಮೇಲೆ ಅತಿಯಾದ ಮೋಹ. ಎಷ್ಟೇ ಹಳೆಯದಾದರೂ ಅದರ ಫೀಲ್ ಹೊಸದು. ಈಗ ಸುಧಾರಾಣಿ ಕೂಡ ತನ್ನ ತಾಯಿಯ ನೆನೆಪಿಗೆ ಜಾರಿದ್ದಾರೆ.

ಸುಧಾರಾಣಿ ಸಿನಿಮಾ, ಸೀರಿಯಲ್ ನಲ್ಲಿಯೂ ಬ್ಯುಸಿಯಾಗಿದ್ದಾರೆ. ತುಳಸಿಯಾಗಿ ಜೀ ಕನ್ನಡ ವೀಕ್ಷಕರ ಗಮನ ಸೆಳೆದಿದ್ದಾರೆ. ಜೀ ಕನ್ನಡದ ಕಾರ್ಯಕ್ರಮಕ್ಕೆ ಅಮ್ಮನ ಸೀರೆಯುಟ್ಟು ಬಂದು, ಇನ್ನಷ್ಟು ಮೆರಗು ತುಂಬಿದ್ದಾರೆ.

Actress Sudharani shares why she wore her mother s Saree

ಅಮ್ಮನ ನೆನಪಿಗೆ ಜಾರಿದ ಸುಧಾರಾಣಿ

ಮೊನ್ನೆ ಜೀ ಟಿವಿಯ ಸರಿಗಮಪ ಕಾರ್ಯಕ್ರಮಕ್ಕೆ ಹೋಗೋದಕ್ಕೆ ಯಾವ ಸೀರೆ ಉಟ್ಟೋಳ್ಳೋದು ಅಂತ ಹುಡುಕ್ತಾ ಇದ್ದಾಗ ಕಬೋರ್ಡ್‌ನಲ್ಲಿ ಅಮ್ಮನ ಈ ಸೀರೆ ಕಣ್ಣಿಗೆ ಬಿತ್ತು. ಈ ಸೀರೆ ನೋಡಿದ ತಕ್ಷಣ ನೆನಪಿನ ಹೂಗುಚ್ಛ ನನ್ನ ಕಣ್ಮುಂದೆ ಬರೋದಕ್ಕೆ ಶುರುವಾಯ್ತು. ತುಂಬಾ ವರ್ಷಗಳ ಹಿಂದೆ ಅಮ್ಮನ ಜೊತೆ ಸೀರೆ ಶಾಪಿಂಗ್‌ಗೆ ಅಂತ ಹೋಗಿದ್ದಿರಬಹುದು, ಆಗ ಅಕುಲ್ ಬಾಲಾಜಿ ಅವರ ತಂದೆಯ ಅಂಗಡಿಯಲ್ಲಿ ಈ ಸೀರೆ ತಗೊಂಡಿದ್ದಿರಬಹುದು, ಅಮ್ಮ ಈ ಸೀರೆನ ತುಂಬಾ ಇಷ್ಟಪಟ್ಟು ಈ ಕಾಂಬಿನೇಷನ್ ಚೆನ್ನಾಗಿದೆ ಅಂತ ಮೊದಲು ಈ ಸೀರೆನ ಆಯ್ಕೆ ಮಾಡಿಡ್ಕೊಂಡಿದ್ದರಬಹುದು, ಇದು ಅವಳ ಫೇವರಿಟ್ ಸೀರೆ ಆಗಿದ್ರಿಂದ ಸುಮಾರು ಬೇರೆ ಬೇರೆ ಸಮಾರಂಭಗಳಲ್ಲಿ ಈ ಸೀರೆ ಉಟ್ಟಿದ್ದಿರಬಹುದು, ಹೀಗೆ ಎಲ್ಲಾ ನೆನೆಪುಗಳು ಮರುಕಳಿಸ್ತು.

ತಾಯಿ ಕಡೆ ಸಲ ಉಟ್ಟಿದ್ದ ಸೀರೆ

ಆಗಲೇ ಡಿಸೈಡ್ ಮಾಡ್ಡೆ, ಕಾರ್ಯಕ್ರಮಕ್ಕೆ ಈ ಸೀರೆನೇ ಉಡೋದು ಅಂತ. ಆ ಲೈಟ್ಸ್‌ಗಳ ಮಧ್ಯ, ಸೀರಿ ಸಿಂಪಲ್ ಆಗಿ ಕಾಣಬಹುದು ಅನ್ನೋ ಒಂದು ಯೋಚನೆ ಕೂಡ ಮನಸ್ಸಿಗೆ ಬಂತು, ಆದ್ರು ಪರ್ವಾಗಿಲ್ಲ ಈ ಸೀರೆನೇ ಉಡಬೇಕು ಅಂತ ನಿರ್ಧಾರ ಮಾಡ್ಲಿಟ್ಟೆ.. ಯಾಕಂದ್ರೆ.. ಗೊತ್ತಿಲ್ಲ... ಅಮ್ಮ ಕಡೇ ಬಾರಿ ಈ ಸೀರೆ ಉಟ್ಟು ಹಾಗೆ ಇಟ್ಟಿಟ್ಟಿದ್ದು ಅನ್ಸತ್ತೆ.. ಈ ಸೀರೆ ಉಟ್ಟಾಗ ಅವಳು ಬಳಸುತ್ತಾ ಇದ್ದಂಥ ಟಾಲ್ಕಮ್ ಪೌಡರ್, ಅವಳ ಪರ್ಫ್ಯೂಮ್ ಅದೆಲ್ಲ ಇದ್ದು ಇಲ್ಲದ ಹಾಗೆ, ಆ ಸುವಾಸನೆ ಅಮ್ಮನ ಸೀರೆಯಲ್ಲಿ ಇನ್ನೂ ಇತ್ತು. ಈ ಸೀರೆ ನೋಡಿದರೆ ಗೊತ್ತಾಗತ್ತೆ.

ಸೀರೆಯೊಂದಿಗೆ ಅಮ್ಮನ ಗುಣಗಾನ

ಬಹಳಷ್ಟು ಸಾರಿ ಅವಳು ಈ ಸೀರೆ ಉಟ್ಟಿದ್ದರೂ ರೇಷ್ಮೆಯಲ್ಲಿ ಒಂದು ಮೃದುತನ ಇದೆ. ಅದರ ಜೊತೆಗೆ ಅಷ್ಟು ಸಾರಿ ಉಪಯೋಗಿಸಿದ್ರೂ ರೇಷ್ಮೆಯಲ್ಲಿರೋ ಆ ಗಟ್ಟಿತನ ಕೂಡ ಮಾಸಿಲ್ಲ. ಇದೆಲ್ಲವೂ ಸೀರೆಯ ಗುಣವಲ್ಲ, ಅವಳ ಗುಣವನ್ನ ಸೀರೆಯ ಮೂಲಕ ತೋರಿಸ್ತಾ ಇದೆ ಅನ್ನೋ ಹಾಗಿದೆ. ಅವಳಲ್ಲಿದ್ದ ಆ ಮೃದುತನ, ಗಟ್ಟಿತನ ಸೀರೆಯ ಮೂಲಕ ಎದ್ದು ಕಾಣಿರೋ ಹಾಗಿತ್ತು. ಸೀರೆ ಮೇಲೆ ಅಷ್ಟೊಂದು ಲೈಟ್ಸ್‌ ಬಿದ್ದಾಗ ಆ ರೇಷ್ಮೆಯ ಮೇಲೊಂದು ಕಾಂತಿ, ತೇಜಸ್ಸು ಇತ್ತು. ಇದೆಲ್ಲ ಅಮ್ಮನ ಕಾಂತಿ, ಅವಳ ಮುಖದ ತೇಜಸ್ಸು ಹೊಳಪನ್ನ ತೋರಿಸ್ತಿತ್ತು.

ಅಮ್ಮ ಸೀರೆ ಬಗ್ಗೆ ಭಾವನಾತ್ಮಕ ಸಾಲು

ಅವಳು ಜೀವನದಲ್ಲಿ ನೋಡಿದಂಥ ಏಳುಬೀಳುಗಳು,ಸುಖ ದುಃಖಗಳು, ನೋವು ನಲಿವುಗಳು ಎಲ್ಲವೂ ಈ ಸೀರೆಯಲ್ಲಿ ಕಾಣಿತ್ತು. ಅದೇ ರೀತಿ, ಅದೆಲ್ಲವನ್ನೂ ಮೀರಿ, ಕಷ್ಟಗಳನ್ನು ಗೆದ್ದು, ಅವಳು ಧೈರ್ಯವಾಗಿ ನಡೆದುಬಂದ ಪ್ರಯಾಣದ ಹಾದಿ ಕಾಣಿಸ್ತಾ ಇತ್ತು. "ಇದನ್ನೆಲ್ಲ ನೀನು ಜಯಿಸಿದ್ದೀಯಾ, ನಿನಗೆ ದೃಷ್ಟಿ ಬೀಳದೇ ಇರಲಿ" ಅಂತ ಈ ಸೃಷ್ಟಿ ಅಮ್ಮನಿಗೆ ಹೇಳ್ತಿರೋ ಸಂಕೇತವೇ ಈ ಸೀರೆಯಲ್ಲಿರೋ ಕಪ್ಪು ಬಣ್ಣದ ಸೆರಗು, ಕಪ್ಪು ಅಂಚು ಅನ್ನಿಸ್ತಾ ಇತ್ತು. ಈ ಸೀರೆ ಉಟ್ಟಾಗ ಅವಳೇ ನನ್ನನ್ನ ಅಪ್ಪಿಹಿಡಿದು ಮಡಿಲಲ್ಲಿ ಕೂರಿಸಿಕೊಂಡು ಅವಳ ಬದುಕಿನ ಅನುಭವದ ಪಾಠವನ್ನ ನನಗೆ ಕಲಿಸುತ್ತಿರೋ ಹಾಗೆ ಭಾಸವಾಯ್ತು. ಇಂಥದ್ದೊಂದು ವಿಶೇಷವಾದ ಸೀರೆ ಉಟ್ಟಾಗ ನನಗೆ ಅನ್ನಿಸಿದ್ದು ಒಂದೇ.. ಅಮ್ಮನ ಪ್ರೀತಿಯ ಮುಂದೆ, ಆ ಭಾವನೆಗಳ ಮುಂದೆ ಬೇರೆ ಯಾವುದೇ ಹೊಸ ಡಿಸೈನರ್ ಸೀರೆ ಆಗ್ಲಿ, ಬ್ರ್ಯಾಂಡೆಡ್ ಬಟ್ಟೆ ಆಗ್ಲಿ ಸರಿಸಮವಲ್ಲ.. ಅಮ್ಮನ ಅಪ್ಪುಗೆಯ ಅನುಭವ ಕೊಡೋ ಸೀರೆ ಎದುರು ಇನ್ಯಾವುದು ನಿಲ್ಲೋದಿಲ್ಲ, ಬೆಲೆ ಬಾಳೋದಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.

More from Filmibeat

English summary
Actress Sudharani Wears Mom's Saree; Recalls Fond Memories.
Read more about: sudharani kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X