'ಘೋಸ್ಟ್ ದಿ ದೆವ್ವ' ಕಿರುಚಿತ್ರಕ್ಕಾಗಿ ಸುಧಾರಾಣಿ ಹೊಸ ಜವಾಬ್ದಾರಿ

By ಪ್ರಿಯಾ ದೊರೆ

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಬಂದ ನಟಿ ಸುಧಾರಾಣಿ ಅಣ್ಣಾವ್ರ ಕುಟುಂಬದ ಮೂರು ತಲೆಮಾರಿನವರೊಂದಿಗೂ ನಟಿಸಿದ್ದು, ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ. ದಶಕಗಳಿಂದ ಕೇವಲ ನಟಿಯಾಗಿದ್ದ ಸುಧಾರಾಣಿ ಅವರು ಮೊದಲ ಬಾರಿಗೆ ಸಿನಿ ಲೋಕದಲ್ಲಿ ಹೊಸ ಹೆಜ್ಜೆ ಹಾಕಿದ್ದಾರೆ. ನಿರ್ಮಾಪಕಿಯಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ದೆವ್ವದ ಲೋಕಕ್ಕೆ ಕಾಲಿಟ್ಟಿರುವ ಸುಧಾರಾಣಿ ಅವರ ಸಿನಿಮಾದ ವೀಡಿಯೋ ನೋಡಿದ ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ. ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

Actress Sudharani turns producer with horror Short film ghost the devva

ಸಾಮಾನ್ಯವಾಗಿ ಎಲ್ಲರೂ ದೆವ್ವದ ಸಿನಿಮಾ, ಧಾರಾವಾಹಿ ಅಥವಾ ವೆಬ್‌ ಸಿರೀಸ್‌ ಯಾವುದೇ ಇರಲಿ. ಅದು ದೆವ್ವ ಇದೆ. ಥ್ರಿಲ್ಲಿಂಗ್‌ ಆಗಿದೆ ಎಂದರೆ ಇಷ್ಟ ಪಡುತ್ತಾರೆ.

ನಿರ್ಮಾಪಕಿಯಾದ ನಟಿ ಸುಧಾರಾಣಿ

ಇನ್ನು ನಟಿ ಸುಧಾರಾಣಿ ಅವರೇ ನಿರ್ಮಾಣ ಮಾಡುತ್ತಿರುವುದು ಎಂದರೆ ಅಭಿಮಾನಿಗಳು ಸುಮ್ಮನಿರಲು ಸಾಧ್ಯವೇ ಇಲ್ಲ. 'ಘೋಸ್ಟ್ ದಿ ದೆವ್ವ' ಸಿನಿಮಾ ವೀಡಿಯೋವನ್ನು ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಟಿ ಸುಧಾರಾಣಿ ಅವರು ಕಾಣಿಸಿಕೊಂಡಿದ್ದಾರೆ. ವೀಡಿಯೋದಲ್ಲಿ ಇಲ್ಲೊಂದು ದೆವ್ವದ ಮನೆ ಇದೆಯಂತೆ ಗೊತ್ತಾ ಎಂದು ಸುಧಾರಾಣಿ ಅವರು ಆ ಬಂಗಲೆಯೊಳಗೆ ತೆರಳುತ್ತಾರೆ. ತಕ್ಷಣವೇ ಧ್ವನಿಯೊಂದು ಪ್ರಶ್ನೆ ಮಾಡಿದೆ ಏನು ಮೇಡಮ್ ಜರ್ನಲಿಸ್ಟ್ ಆಗಿ ಇದನ್ನೆಲ್ಲಾ ನಂಬ್ತೀರಾ ಎಂದು ಪ್ರಶ್ನೆ ಮಾಡಲಾಗಿದೆ. ಅಷ್ಟರಲ್ಲಿ ಸುಧಾರಾಣಿ ಅವರು ಗಾಬರಿಯಾಗಿದ್ದಾರೆ. ಪಕ್ಕದಲ್ಲೇ ಸುಧಾರಾಣಿ ಅವರ ಫೋಟೋಗೆ ಹಾರ ಹಾಕಲಾಗಿರುತ್ತದೆ. ಗೋಡೆ ಮೇಲಿನ ಫೋಟೋ ನೋಡಿ ಸುಧಾರಾಣಿ ಅವರು ಹೆದರಿಕೊಂಡಿದ್ದಾರೆ. ಈ ಸಿನಿಮಾ ನಿಜವಾದ ಕಥೆಯನ್ನು ಆಧರಿಸಿದ್ದು ಎಂದು ಕೂಡ ಹೇಳಲಾಗಿದೆ.

ಜರ್ನಲಿಸ್ಟ್‌ ಪಾತ್ರದಲ್ಲಿ ನಟಿ

ಇನ್ನು ಈ ಚಿತ್ರದಲ್ಲಿ ನಟಿ ಸುಧಾರಾಣಿ ಅವರು ಜರ್ನಲಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿಕ್ಕವಳಿದ್ದಾಗ ಯಾವುದೋ ಒಂದು ದೆವ್ವದ ಶಾರ್ಟ್‌ ಸಿನಿಮಾದಲ್ಲಿ ನಟಿಸಿದ್ದೆ. ಅದು ಬಿಟ್ಟರೆ ಈಗ ಇದೇ ಮೊದಲ ಬಾರಿಗೆ ಹಾರರ್‌ ಸಿನಿಮಾದಲ್ಲಿ ನಟಿಸಿರುವುದು ಎಂದು ಸುಧಾರಾಣಿ ಅವರು ಹೇಳಿಕೊಂಡಿದ್ದಾರೆ. ಇನ್ನು ಈ ವೀಡಿಯೋವನ್ನು ಹೆಡ್ಫೋನ್ ಹಾಕಿಕೊಂಡು ಕೇಳಿ ಎಂದೂ ನಟಿ ಹೇಳಿದ್ದಾರೆ. ಈಗಾಗಲೇ ಇಂಗ್ಲೆಂಡ್ನಲ್ಲಿ ಈ ಸಿನಿಮಾದ ಪ್ರೀಮಿಯರ್ ಇದೆ. ಸುಧಾರಾಣಿ ಅವರ ಈ ಸಿನಿಮಾದ ವೀಡಿಯೋಗೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದ್ದು, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಕೂಡ ವಿಶ್‌ ಮಾಡಿದ್ದಾರೆ.

ಸುಧಾರಾಣಿ ಬಣ್ಣದ ಪಯಣ

ಇನ್ನು ನಟಿ ಸುಧಾರಾಣಿ ಅವರು 1978ರಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಮೊದಲು ಆಡ್ ಒಂದರಲ್ಲಿ ನಟಿಸಿದ್ದರಂತೆ. ಬಳಿಕ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಭಾಗ್ಯವಂತ, ರಂಗನಾಯಕಿ, ಬಾಡದ ಹೂ, ಅನುಪಮ ಸೇರಿದಂತೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತದನಂತರ 1986ರಲ್ಲಿ ತೆರೆಕಂಡ ಆನಂದ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೋಡಿಯಾಗಿ ಕಾಣಸಿಕೊಂಡರು. ಅಲ್ಲಿಂದ ಹಿಂದಿರುಗಿ ನೋಡಲಿಲ್ಲ.

ಜನಪ್ರಿಯ ಚಿತ್ರಗಳು

ಸುಧಾರಾಣಿ ಅವರು 'ಮನ ಮೆಚ್ಚಿದ ಹುಡುಗಿ', 'ಆಸೆಗೊಬ್ಬ ಮೀಸೆಗೊಬ್ಬ', 'ಮನೆದೇವ್ರು', 'ಸಪ್ತಪದಿ', 'ಮಣ್ಣಿನ ದೋಣಿ', 'ಅಣ್ಣ-ತಂಗಿ', 'ಮಿಡಿದ ಶೃತಿ' ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ಧಾರೆ. 1996ರಲ್ಲಿ ಮದುವೆಯಾದ ಸುಧಾರಾಣಿ ಅವರು ನಾಲ್ಕು ವರ್ಷಗಳ ಬಳಿಕ. ಅಂದರೆ 2000ರಲ್ಲಿ 'ಸ್ಪರ್ಶ' ಸಿನಿಮಾ ಮೂಲಕ ಮತ್ತೆ ಸೆಕೆಂಡ್‌ ಇನ್ನಿಂಗ್ಸ್‌ ಪ್ರಾರಂಭಿಸಿದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Sudharani ghost the devva shortfilm producer;
Read more about: sudharani sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X