Bharjari Bachelor:ನವಾಜ್ ಜೋಡಿಯಾಗಿದ್ದ ನಟಿ ಸುಕೃತಾ 'ಭರ್ಜರಿ ಬ್ಯಾಚುಲರ್ಸ್' ಬಿಟ್ಟಿದ್ದೇಕೆ?
ಜೀ ಕನ್ನಡದಲ್ಲಿ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋ ಎಲ್ಲರ ಗಮನ ಸೆಳೆಯುತ್ತಿದೆ. ಈ ಶೋನಲ್ಲಿ ಹುಡುಗರು -ಹುಡುಗಿಯರ ಟೀಂ ಇದೆ. ಜೋಡಿಗಳನ್ನಾಗಿ ಮಾಡಲಾಗಿದೆ. ಇದು ರಿಯಾಲಿಟಿ ಶೋಗಾಗಿ ಮಾತ್ರ.
ಈ ರಿಯಾಲಿಟಿ ಶೋನಲ್ಲಿ ಒಂದೊಂದು ವಾರ ಒಂದೊಂದು ಟಾಸ್ಕ್ ಅನ್ನು ನೀಡಲಾಗುತ್ತಿದೆ. ಈ ಟಾಸ್ಕ್‌ನಲ್ಲಿ ಯಾವ ಜೋಡಿ ಗೆಲುವು ಸಾಧಿಸುತ್ತೆ ಎನ್ನುವುದಕ್ಕಿಂತ ಮನರಂಜನೆಯ ಮಹಾಪೂರವೇ ಅಡಗಿದೆ.

ಮೊದಲಿಗೆ ಪ್ರೊಮೋದ ಮೂಲಕವೇ ಈ ರಿಯಾಲಿಟಿ ಶೋ ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ ಎಂಬುದನ್ನು ತೋರಿಸಿತ್ತು. ಇದನ್ನೆಲ್ಲಾ ನೋಡ್ಮೇಲೆ ಭರ್ಜರಿ ಬ್ಯಾಚುಲರ್ಸ್ ಎಂಟರ್ಟೈನ್ಮೆಂಟ್ ನೀಡೋದ್ರಲ್ಲಿ ಡೌಟೇ ಇಲ್ಲ ಅನ್ನೋದು ಸಾಬೀತಾಗಿತ್ತು. ಆದರೆ, ಇದೀಗ ಆ ಶೋನಿಂದ ಸುಕೃತಾ ನಾಗ್ ಹೊರ ಬಂದಿದ್ದಾರೆ.
ನವಾಜ್ ಜೋಡಿಯಾಗಿದ್ದ ಸುಕೃತಾ
ಚೆಂದದ ಪ್ರೋಮೋ ಮೂಲಕ 'ಭರ್ಜರಿ ಬ್ಯಾಚುಲರ್ಸ್ ಶೋ ಶುರುವಾಗಿತ್ತು. ಮೊದ ಮೊದಲಿಗೆ ಬ್ಯಾಚುಲರ್‌ಗಳ ಪ್ರೋಮೋ ಬಿಡಲಾಗಿತ್ತು. ಬಳಿಕ ಚಂದದ ತಾರೆಯರ ಎಂಟ್ರಿ ಸಖತ್ತಾಗಿಯೇ ಇತ್ತು. ಬ್ಯಾಚುಲರ್ಸ್ ಎಂದಾಕ್ಷಣಾ ಹಾಗೆಲ್ಲ ಬರೀ ಹುಡುಗರನ್ನೇ ಇಟ್ಟುಕೊಂಡು ಶೋ ಮಾಡೋದಲ್ಲ. ನಟಿ ಮಣಿಯರನ್ನು ಬಿಟ್ಟು ಬ್ಯಾಚುಲರ್ಸ್ ಡಿಸ್ಟರ್ಬ್ ಮಾಡುವುದು. ಇದರಲ್ಲಿ ಸುಕೃತಾ ನಾಗ್ ಕಾಣಿಸಿಕೊಂಡಿದ್ದರು. ಎಂಟ್ರಿಗೆ ಒಂದೊಳ್ಳೆ ಡ್ಯಾನ್ಸ್ ಪ್ರೋಗ್ರಾಂ ನೀಡಿ, ನವಾಜ್ ಅನ್ನು ಜೋಡಿಯಾಗಿ ಆಯ್ಕೆ ಮಾಡಿಕೊಂಡಿದ್ದರು.

ಸುಕೃತಾ ಜಾಗಕ್ಕೆ ಬಂದ ಅಮೂಲ್ಯ
ಆದರೆ, ಈ ವಾರ 'ಭರ್ಜರಿ ಬ್ಯಾಚುಲರ್ಸ್' ನೋಡಿದವರಿಗೆ ಸುಕೃತಾ ಎಲ್ಲಿ ಎಂಬ ಪ್ರಶ್ನೆ ಕಾಡಿತ್ತು. ಅಮೂಲ್ಯ ಹೊಸ ಎಂಟ್ರಿ ಅಂತಾನೂ ಅನ್ನಿಸಿತ್ತು. ಆದರೆ ಶೋ ನೋಡುವ ವೇಳೆ ಎಂಟ್ರಿ, ಎಕ್ಸಿಟ್ ಬಗ್ಗೆ ಹೆಚ್ಚು ಗಮನ ಹೋಗಿಲ್ಲ. ಶನಿವಾರ, ಭಾನುವಾರ ಸುಕೃತಾ ನಾಗ್ ಇಲ್ಲದೆ ಭರ್ಜರಿ ಬ್ಯಾಚುಲರ್ಸ್ ಮುಗಿದಿದೆ. ಅದು ತಮ್ಮ ತಮ್ಮ ಜೋಡಿಗಳನ್ನು ಪಾರ್ಲರ್‌ಗೆ ಕರೆದುಕೊಂಡು ಹೋಗಿದ್ದ ಎಪಿಸೋಡ್. ಅಲ್ಲಿ ನವಾಜ್‌ಗೆ ಅಮೂಲ್ಯ ಜೊತೆಯಾಗಿದ್ದರು.
ಸುಕೃತಾ ನಾಗ್ ಶೋ ಬಿಡಲು ಕಾರಣವೇನು?
ಸುಕೃತಾ ನಾಗ್ ಒಂದೇ ವಾರ ಭರ್ಜರಿ ಬ್ಯಾಚುಲರ್ಸ್ ತಂಡದಲ್ಲಿದ್ದರು ಎಂದು ಕಾಣುತ್ತೆ. ಹೆಚ್ಚು ಸಮಯ ಕಾಣಿಸಿಕೊಳ್ಳಲೇ ಇಲ್ಲ. ಇದು ಜೀ ಕನ್ನಡ ನಡೆಸಿಕೊಡುವ ಶೋ ಆಗಿದ್ದರಿಂದ ಸುಕೃತಾ ನಾಗ್ ಗೆ ಸಮಯ ಒದಗಿಸಿಕೊಳ್ಳಲು ಕಷ್ಟವಾಗಿದೆ. ಮಾಹಿತಿಗಳ ಪ್ರಕಾರ, ಜೀ ಕನ್ನಡದ ಭರ್ಜರಿ ಬ್ಯಾಚುಲರ್ ಶೋನಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುಕೃತಾ ನಾಗ್ ಕಲರ್ಸ್ ಕನ್ನಡದಲ್ಲಿ ಅನುಮತಿ ಕೇಳಿದ್ದರಂತೆ. ಡೇಟ್ ಸಮಸ್ಯೆ ಆಗದಂತೆ ಮ್ಯಾನೇಜ್ ಮಾಡಿಕೊಳ್ಳಿ ಎಂದು ಕಲರ್ಸ್ ವಾಹಿನಿ ಕೂಡ ಹೇಳಿತ್ತು ಎನ್ನಲಾಗಿದೆ. ಆದರೆ, ದಿನ ಕಳೆದಂತೆ ಡೇಟ್ಸ್ ಸಮಸ್ಯೆ ಆಗಿ ಸುಕೃತಾ ಭರ್ಜರಿ ಬ್ಯಾಚುಲರ್ಸ್‌ನಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ.
'ನಕ್ಷತ್ರಾ'ದಲ್ಲಿ ಲೀಡ್ ರೋಲ್
ಸದ್ಯ ಕಲರ್ಸ್ ಕನ್ನಡದಲ್ಲಿ 'ನಕ್ಷತ್ರಾ' ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ ತನ್ನದೇ ಆದಂತ ಫ್ಯಾನ್ ಫಾಲೋವರ್ಸ್ ನ ಹೊಂದಿದೆ. ಇದರಲ್ಲಿ ಸುಕೃತಾ ನೆಗೆಟಿವ್ ರೋಲ್ ಪ್ಲೇ ಮಾಡ್ತಿದ್ದಾರೆ. ನಕ್ಷತ್ರಾಗೆ ತೊಂದರೆ ಕೊಡುವ ಕ್ಯಾರೆಕ್ಟರ್. ಸದ್ಯ ಸುಕೃತಾ ಪಾತ್ರ ಕೂಡ ಪ್ರಾಮುಖ್ಯತೆ ವಹಿಸಿದೆ. ಹೀಗಾಗಿ ಲೀಡ್ ರೋಲ್ ಬಿಟ್ಟು ಕೊಡಲಾಗದೆ 'ಭರ್ಜರಿ ಬ್ಯಾಚುಲರ್ಸ್' ತಂಡವನ್ನೇ ಬಿಟ್ಟು ಬಂದಿದ್ದಾರೆ. ಮುಂದಿನ ದಿನಗಳಲ್ಲಿ 'ನಕ್ಷತ್ರ' ಧಾರಾವಾಹಿ ಬೇರೆ ರೀತಿಯಾಗಿಯೇ ಸಾಗಲಿದೆ. ಅದರಲ್ಲಿ ಸುಕೃತಾ ಬಹಳ ಮುಖ್ಯ ಆಗಲಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











