ಆಕ್ಸಿಡೆಂಟ್ ಬಳಿಕ ನಟನೆಗೆ ಮರಳಿದ ಸುನೇತ್ರಾ ಪಂಡಿತ್
ಶೂಟಿಂಗ್ ಮುಗಿಸಿ ತೆರಳುತ್ತಿದ್ದಾಗ ಕಿರುತೆರೆ ನಟಿ ಸುನೇತ್ರಾ ಪಂಡಿತ್‌ಗೆ ಅಪಘಾತವಾಗಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಮೇ 7 ರಂದು ಈ ಘಟನೆ ನಡೆದಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನು ನೀಡಲಾಗಿತ್ತು. ಅಪಘಾತದದ ನಂತರ ಸುನೇತ್ರಾ ಪಂಡಿತ್ ಮನೆಯಲ್ಲಿಯೇ ಸುಮಾರು ಎರಡು ತಿಂಗಳು ರೆಸ್ಟ್ ಮಾಡಿದ್ದರು. ಸದ್ಯ ಏನಾಯ್ತು ಅವರಿಗೆ ಎಂದುಕೊಳ್ಳುವಾಗಲೇ ಇದೀಗ ಅವರ ದರ್ಶನವಾಗಿದೆ. ಮರಳಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸುನೇತ್ರಾ ಪಂಡಿತ್ ಸದ್ಯ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಹೂವಿಯ ಅಜ್ಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವಾಗಲೂ ಕಿರಿಕಿರಿ ಮಾಡುವ ಪಾತ್ರವದು. ಹೂವಿ ಎಂದರೆ ಕೆಂಡಕಾರುವ ಪಾತ್ರವದು. ನೆಗೆಟಿವ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಆದರೆ ಅಪಘಾತದ ಬಳಿಕ ಕೊಂಚ ದೂರ ಉಳಿದಿದ್ದರು. ಇದೀಗ ಆರೋಗ್ಯದಲ್ಲಿ ಪೂರ್ಣ ಚೇತರಿಕೆ ಕಂಡಿದ್ದು, ಮರಳಿ ಶೂಟಿಂಗ್‌ಗೆ ಬಂದಿದ್ದಾರೆ.

ಸುನೇತ್ರಾ ಪಂಡಿತ್ ಅಪ್‌ಡೇಟೆಡ್ ಇಲ್ಲಿದೆ
ಸುನೇತ್ರಾ ಪಂಡಿತ್‌ಗೆ ಅಪಘಾತವಾದಾಗ ಎಲ್ಲರೂ ಆತಂಕಗೊಂಡಿದ್ದರು. ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರ ಸ್ಥಿತಿ ಹೇಗಿದೆ ಅನ್ನುವುದು ಅವರಿಗೆ ಗೊತ್ತಿರಲಿಲ್ಲ. ತಮಗೆ ಅಪಘಾತವಾಗಿದ್ದ ವಿಚಾರವನ್ನು ಸುನೇತ್ರಾ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಎಲ್ಲವೂ ಸರಿಯಾಗಿದ್ದು, ತಮ್ಮ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಎರಡು ತಿಂಗಳ ಬಳಿಕ ಮತ್ತೆ ಮರಳಿರುವುದಾಗಿ ಸುನೇತ್ರಾ ತಿಳಿಸಿದ್ದಾರೆ. ಫೋಟೊ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಮಾಡಿದ್ದು, ಎರಡು ತಿಂಗಳ ಬಳಿಕ ಮತ್ತೆ ಮರಳಿ ಬಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಸುನೇತ್ರಾ
ಸದ್ಯ 'ಬೆಟ್ಟದ ಹೂ' ಧಾರಾವಾಹಿ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಹೂವಿಯ ಅಜ್ಜಿ ಪಾತ್ರದಲ್ಲಿ ಸುನೇತ್ರಾ ಅಭಿನಯಿಸಿದ್ದಾರೆ. ಹೂವಿ ಈಕೆಯನ್ನ ಮುಸ್ಲಿ ಎಂದೇ ಕರೆಯುತ್ತಾಳೆ. ಹೂವಿಗೆ ಕೆಟ್ಟದಾದ್ರೆ ಕಾಳಿಗೆ ಸಿಕ್ಕಾಪಟ್ಟೆ ಖುಷಿ. 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಕುತ್ತಿಗೆಗೊಂದು ದಾರ ಕಟ್ಟಿಕೊಂಡು, ಸಿಂಪಲ್ ಸೀರೆ ಉಟ್ಟು, ಪಕ್ಕಾ ಹಳ್ಳಿ ಮಹಿಳೆಯ ರೀತಿ ಕಾಣುವಂತ ಪಾತ್ರ ಮಾಡಿದ್ದಾರೆ. ಇದೀಗ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಫೋಟೊ ನೋಡಿದರೆ ಇದು ಪಕ್ಕಾ 'ಬೆಟ್ಟದ ಹೂ' ಧಾರಾವಾಹಿಯ ಶೂಟಿಂಗ್‌ಗೆ ಇರಬಹುದು ಎಂಬುದು ಅರ್ಥವಾಗಿದೆ. ಮರಳಿ ಶೂಟಿಂಗ್ ಬಂದಿರುವುದಕ್ಕೆ ಅಭಿಮಾನಿಗಳು ಫುಲ್ ಖುಷಿಯಾಗಿದೆ.

ಸುನೇತ್ರಾ ನೋಡಲು ಬಂದ 'ಸಿಲ್ಲಿ ಲಲ್ಲಿ' ಬಳಗ
'ಸಿಲ್ಲಿ ಲಲ್ಲಿ' ಧಾರಾವಾಹಿ ಎಂದರೆ ಈಗಲೂ ಎಲ್ಲರ ಮನಸ್ಸಿಗೆ ನಗು ಮೂಡಿಸುತ್ತೆ. ಕಾಮಿಡಿ ಎಂಟರ್ಟೈನ್ಮೆಂಟ್ ಧಾರಾವಾಹಿಯಾಗಿತ್ತು. ಅದರಲ್ಲಿ ಸಿಕ್ಕಾಪಟ್ಟೆ ಪಾತ್ರಗಳಿದ್ದರು, ಎಲ್ಲಾ ಪಾತ್ರಗಳು ಮುಖ್ಯವಾಗಿತ್ತು. ಅದರಲ್ಲಿ ಸುನೇತ್ರಾ ಪಾತ್ರ ಕೂಡ. ಜೊತೆಗೆ ಮೊದಲ ಧಾರಾವಾಹಿಯ ತಂಡ ಸಂಪೂರ್ಣವಾಗಿ ಕುಟುಂಬದಂತೆಯೇ ಇದೆ. ಸಾಕಷ್ಟು ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಕುಟುಂಬದಂತೆಯೇ ಇದೆ. ಇತ್ತೀಚೆಗೆ ಸುನೇತ್ರಾಗೆ ಅಪಘಾತವಾದಾಗ ಕುಟುಂಬದಂತೆಯೇ ಎಲ್ಲರೂ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ. ಈ ಫೋಟೊಗಳನ್ನು ಸುನೇತ್ರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಧನ್ಯವಾದ ತಿಳಿಸಿದ್ದಾರೆ.
ಸುನೇತ್ರಾಗೆ ಶುಭ ಹಾರೈಕೆ
ಸುನೇತ್ರಾಗೆ ಅಪಘಾತವಾದ ಗಳಿಗೆಯಿಂದ ಅವರ ಕುಟುಂಬಸ್ಥರು ಸಾಕಷ್ಟು ಗಾಬರಿಯಾಗಿದ್ದರು. ಬಳಿಕ ಆಸ್ಪತ್ರೆ ಸಿಬ್ಬಂದಿಗಳ ಕಾಳಜಿಯಿಂದ ಸದ್ಯ ಬೇಗ ಗುಣಮುಖರಾಗಿದ್ದಾರೆ. ಆ ದಿನವೂ ಅಭಿಮಾನಿಗಳು ಕಮೆಂಟ್ ಹಾಕಿದ್ದರು. ಆದಷ್ಟು ಬೇಗ ಹುಷಾರಾಗಿರಿ ಎಂದು ಕಮೆಂಟ್ ಹಾಕಿದ್ದರು. ಇದೀಗ ಶೂಟಿಂಗ್ ಮರಳಿದಾಗಲೂ ಶುಭ ಹಾರೈಕೆಗಳು ಸಿಕ್ಕಿದೆ. ಹೀಗೆ ಆರೋಗ್ಯ ಸಿಗಲಿ ಎಂದಿದ್ದಾರೆ.


Click it and Unblock the Notifications











