ಕಂಡಕ್ಟರ್ ಕನಕಳಾಗಿ ಮಿಂಚುತ್ತಿರುವ 'ಲಕುಮಿ' ಸುಷ್ಮಾ

<ul id="pagination-digg"><li class="previous"><a href="/tv/tv-actress-sushma-interview-serial-lakumi-zee-kannada-069589.html">« Previous</a>

Sushma
ನಂತರ ಸುವರ್ಣ ವಾಹಿನಿಯಲ್ಲಿ '500' ಸಂಚಿಕೆಗಳಲ್ಲಿ ಪ್ರಸಾರ ಕಂಡು ಸೂಪರ್ ಹಿಟ್ ದಾಖಲಿಸಿದ 'ಲಕುಮಿ' ನನ್ನ ಕೈಸೇರಿತು. ಅದರಲ್ಲಿ 'ಲಕುಮಿ' ಪಾತ್ರಧಾರಿಯಾದ ನಾನೇ ಧಾರಾವಾಹಿಯ ಕೇಂದ್ರಬಿಂದು. ಕಿರುತೆರೆ ವೀಕ್ಷಕರ ಆಶೀರ್ವಾದದಿಂದ ನನಗೆ ಆ ಧಾರಾವಾಹಿ ಭಾರಿ ಜನಪ್ರಿಯತೆ ತಂದುಕೊಟ್ಟಿತು. ನಂತರ ಓದಿನ ಜೊತೆ ನನ್ನ ಕಲಾವಿದೆ ಜರ್ನಿಯೂ ನಡೆದುಬರುತ್ತಿದೆ.

*ಸದ್ಯ ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ?

ಸದ್ಯಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ 'ಕನಕ' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಈ ಧಾರಾವಾಹಿ, 'ಲಕುಮಿ' ಟೀಮ್ ನದೇ ಆಗಿರುವದರಿಂದ ಸಹಜವಾಗಿ ನನಗೆ ಓದಿನ ಜೊತೆ ನಟನೆಯನ್ನೂ ನಿಭಾಯಿಸಿಕೊಂಡು ಹೋಗಲು ಅನುಕೂಲವಾಗುವಂತೆ ಸಪೋರ್ಟ್ ಹಾಗೂ ಎನ್ ಕರೇಜ್ ಮೆಂಟ್ ಎರಡೂ ಸಿಗುತ್ತಿದೆ. ಇದೀಗ 100 ಸಂಚಿಕೆ ಸಮೀಪ ಬಂದಿರುವ ಕನಕ,' ವೀಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿ ಮುಂದುವರಿಯುತ್ತಿದೆ.

ಈ 'ಕನಕ' ಸೀರಿಯಲ್ ಪಾತ್ರದಲ್ಲಿ ನನ್ನನ್ನು ವೀಕ್ಷಕರು ಮೆಚ್ಚಿದ್ದಾರೆ. ತುಂಬಾ ಮಂದಿ ನನ್ನನ್ನು ನೋಡಿದ ಕೂಡಲೇ 'ಕನಕ' ಅಥವಾ'ಲಕುಮಿ' ಎಂದು ನಾನು ಮಾಡಿದ ಪಾತ್ರಗಳ ಹೆಸರಿನ ಮೂಲಕ ಕರೆಯುತ್ತಾರೆ. ಕಲಾವಿದೆಯಾಗಿರುವ ನನಗೆ ಜನರು ನನ್ನನ್ನು ಪಾತ್ರದ ಮೂಲಕ ಗುರುತಿಸಿ ಕರೆಯುವುದು ತುಂಬಾ ಖುಷಿ ನೀಡುತ್ತದೆ.

*ಜೀವನದಲ್ಲಿ ಮರೆಯಲಾರದ ಘಟನೆ?

ಎರಡು ಘಟನೆಗಳಿವೆ. ಒಂದು ನಾನು ಧಾರಾವಾಹಿಯಲ್ಲಿ ಮೊದಲು ಕ್ಯಾಮೆರಾ ಮುಂದೆ ನಿಂತು ಡೈಲಾಗ್ ಹೇಳಲಾಗದೇ ಒದ್ದಾಡಿದ್ದು. 'ಅವ್ವಾ..., ಅಪ್ಪ ಈ ನಡುವೆ ಈಟೊಂದ್ ಪ್ರೀತಿ ತೋರಿಸ್ತಾ ಇದಾರೆ...' ಎಂಬ ಡೈಲಾಗ್ ನಾನು ನಟನೆ ಜೊತೆ ಹೇಳಬೇಕಿತ್ತು. ಆದರೆ ನನಗೆ ಸಾಧ್ಯವೇ ಆಗುತ್ತಿರಲಿಲ್ಲ. ಏಕೆಂದರೆ ಉತ್ತರ ಕರ್ನಾಟಕದ ಆ ಭಾಷೆಯ ಡೈಲಾಗ್ ನನಗೆ ಹೇಳಲು ಕಷ್ಟವಾಗುತ್ತಿತ್ತು. ಹೇಗೋ ಭಾರೀ ಕಷ್ಟಪಟ್ಟು ಹೇಳಿ ಟೇಕ್ ಓಕೆ ಮಾಡಿದೆ. ಅದನ್ನು ನಾನು ಯಾವತ್ತೂ ಮರೆಯಲಾರೆ.

ಇನ್ನೊಂದು ಘಟನೆ... ನನಗೆ ಹಾವನ್ನು ಕಂಡರೆ ಭಾರಿ ಭಯ. ಧಾರಾವಾಹಿಯೊಂದರ ಶೂಟಿಂಗ್ ವೇಳೆ ನಾನು ಹಾವುಗಳಿರುವ ಜಾಗದಲ್ಲಿ ಹಾವಿನ ಜೊತೆಯೇ ನಟಿಸಬೇಕಿತ್ತು. ಆದರೆ, ನನಗೆ ಭಾರಿ ಭಯವಿರುವುದರಿಂದ ನಾನು ಅದೆಷ್ಟು ಹೆದರಿದ್ದೆ ಎಂದರೆ ಹಾವನ್ನು ಕಂಡ ತಕ್ಷಣ ನಾನು ಗಡಗಡ ನಡುಗಿ ಹೋಗಿದ್ದೆ. ಇವೆರಡು ಘಟನೆಗಳನ್ನು ನಾನು ಎಂದೂ ಮರೆಯಲಾರೆ.

* ಭವಿಷ್ಯದ ಕನಸು...

ನನಗೆ 'ಸಿಎ' ಮಾಡುವ ಮಹತ್ವದ ಕನಸಿದೆ. ಅದನ್ನು ಮಹತ್ವಾಕಾಂಕ್ಷೆ ಎನ್ನವುದೇ ಸರಿ. ನಾನು ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಿದ್ದೇನೆ. ಇದೀಗ ಮೊದಲ ವರ್ಷದ ಪಿಯುಸಿ ಓದುತ್ತಿರುವ ನನ್ನ ಜೀವನದ ಗುರಿಯೇ ಸಿಎ ಓದುವುದು. ನಂತರ ಅದನ್ನೇ ನನ್ನ ವೃತ್ತಿಯಾಗಿಸಿಕೊಳ್ಳುವುದು. ನಟನೆಯನ್ನು ಹವ್ಯಾಸವಾಗಿ ಮುಂದುವರಿಸುವ ಯೋಚನೆಯಂತೂ ಇದ್ದೇ ಇದೆ. ಒಳ್ಳೆಯ ಅವಕಾಶವನ್ನು ಒಪ್ಪಿಕೊಂಡು ನಟನೆಯನ್ನೂ ಮುಂದುವರಿಸಲಿದ್ದೇನೆ. ಸಿಎ ಮಾಡುವುದೇ ನನ್ನ ಗುರಿ...

***

<ul id="pagination-digg"><li class="previous"><a href="/tv/tv-actress-sushma-interview-serial-lakumi-zee-kannada-069589.html">« Previous</a>

More from Filmibeat

English summary
Actress Sushma is the popular name in TV Industry. She acted in many serials like Makkala Loka, Kusumanjali, Lakumi and now acting in Zee Kannada Serial Kanaka. She became famous in Serial 'Lakumi' and now her fame is going high through the serial 'Kanaka'. Here is her Interview to read...&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X