'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ನಿರೂಪಕಿ 'ಭಾಗ್ಯಲಕ್ಷ್ಮಿ' ; ಸೂತ್ರಧಾರಿ ಸುಷ್ಮಾ ರಾವ್

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ಸಿಹಿ ಸುದ್ದಿ. ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಮುಗಿದದ್ದೇ, 'ಶ್ರೀಗೌರಿ' ಬಲಗಾಲಿಟ್ಟು ಮನೆಯೊಳಗೆ ಬಂದಳು. ಮಾತ್ರವಲ್ಲದೇ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸತೊಡಗಿದಳು.ಇದರ ಜೊತೆಗೆ ವಾರಾಂತ್ಯದಲ್ಲಿ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಮುದ್ದು ಮಕ್ಕಳು ಬರುತ್ತಿದ್ದಾರೆ. ಅದು ಕೂಡಾ ತಮ್ಮ ಅಮ್ಮಂದಿರೊಡನೆ.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 3 ಶುರುವಾಗಲಿದೆ. ಇದೇ ಶನಿವಾರದಿಂದ ಈ ರಿಯಾಲಿಟಿ ಶೋ ಆರಂಭ ಆಗಲಿದೆ. ಕಳೆದ ಸೀಸನ್‌ನಂತೆ ಈ ಬಾರಿಯೂ ಸೃಜನ್ ಲೋಕೇಶ್, ತಾರಾ ಅನುರಾಧಾ, ಅನುಪ್ರಭಾಕರ್ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಸ್ಪರ್ಧಿಗಳ ಜೊತೆಗೆ ಹೊಸ ಆ್ಯಂಕರ್ ಒಬ್ಬರು ಈ ಶೋವಿನ ಸಾರಥ್ಯ ವಹಿಸಲಿದ್ದಾರೆ. ಅಂದ ಹಾಗೇ ಅವರು ಈ ಶೋವಿಗೆ ಹೊಸಬರು ಹೊರತು ನಿರೂಪಣೆಗಲ್ಲ.

 Actress Sushma Rao said that Nannamma Super Star along with children

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ 'ನನ್ನಮ್ಮ ಸೂಪರ್ ಸ್ಟಾರ್'ನ ನಿರೂಪಕಿಯಾಗಿ ಮೋಡಿ ಮಾಡಲಿದ್ದಾರೆ. ಆ ಮೂಲಕ ಮತ್ತೊಮ್ಮೆ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ.

ಅಂದ ಹಾಗೇ ನಟಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಸುಷ್ಮಾ ರಾವ್ ನಿರೂಪಣಾ ಜರ್ನಿ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಶುರುವಾಗಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತರ್ಲೆ ನನ್ ಮಕ್ಳು' ಶೋ ನಿರೂಪಣೆ ಮಾಡಿದ್ದ ಸುಷ್ಮಾ, ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀನ್ಸ್' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಕಾಣಿಸಿಕೊಂಡರು.

 Actress Sushma Rao said that Nannamma Super Star along with children

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಮನೆ ಮನೆ ಮಹಾಲಕ್ಷ್ಮಿ' ರಿಯಾಲಿಟಿ ಶೋವಿನ ನಿರೂಪಕಿಯಾದ್ದ ಸುಷ್ಮಾ ಮುಂದೆ 'ಸೀರಿಯಲ್ ಸಂತೆ', 'ಅವಾರ್ಡ್ ಕಾರ್ಯಕ್ರಮ', ಹಾಡು ಹರಟೆ' ಕಾರ್ಯಕ್ರಮಗಳ ಸಾರಥ್ಯವನ್ನು ವಹಿಸಿದ್ದರು.

ಇದೀಗ 'ನನ್ನಮ್ಮ ಸೂಪರ್ ಸ್ಟಾರ್'ನ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ಸುಷ್ಮಾ ರಾವ್ ಮೊದಲ ಬಾರಿ ನಟಿಸಿದ್ದು 'ಭಾಗೀರಥಿ' ಧಾರಾವಾಹಿಯಲ್ಲಿ. 'ಭಾಗೀರಥಿ' ಧಾರಾವಾಹಿಯ ನಂತರ 'ಸ್ವಾತಿಮುತ್ತು', 'ಬಿದಿಗೆ ಚಂದ್ರಮ', 'ಯಾವ ಜನ್ಮದ ಮೈತ್ರಿ', 'ಗುಪ್ತಗಾಮಿನಿ', 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಗಳಲ್ಲಿ ಸುಷ್ಮಾ ರಾವ್ ನಟಿಸಿದ್ದಾರೆ.

More from Filmibeat

English summary
Actress Sushma Rao who returned to television as Nannamma Super Star charming as a anchor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X