ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸುಷ್ಮಿತಾ ಗೌಡ; ಸಿಂಪಲ್ ಆಗಿ ಸೀಮಂತ

By ಪ್ರಿಯಾ ದೊರೆ

'ಲವ್ ಮಾಕ್ಟೇಲ್-2' ಚಿತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದ ನಟಿ ಸುಷ್ಮಿತಾ ಗೌಡ ಮತ್ತೆ ಸಿನಿರಂಗದಲ್ಲಾಗಲೀ ಕಿರುತೆರೆಯಲ್ಲಾಗಲೀ ಕಾಣಿಸಲೇ ಇಲ್ಲ. ಆದರೂ ಕೂಡ ಇಂದಿಗೂ ಸುಷ್ಮಿತಾ ಅವರ ನಟನೆ ಮತ್ತು ಅವರ ಡೈಲಾಗ್ ಅನ್ನು ಅಭಿಮಾನಿಗಳು ನೆನಪಿನಲ್ಲಿಟ್ಟುಕೊಂಡಿದ್ದಾರೆ.

ಸುಷ್ಮಿತಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಹಲವರು ಫಾಲೋ ಮಾಡುತ್ತಾರೆ. ಇದೀಗ ನಟಿ ಸುಷ್ಮಿತಾ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ನಟಿ ಸುಷ್ಮಿತಾ ಅವರು ತಮ್ಮ ಪ್ರೆಗ್ನೆನ್ಸಿಯನ್ನು ಅನೌನ್ಸ್ ಮಾಡಿದ್ದರು. ಇದೀಗ ಸಿಂಪಲ್ ಆಗಿ ಸೀಮಂತವನ್ನು ಮಾಡಿಸಿಕೊಂಡಿದ್ದಾರೆ.

Actress Sushmitha Gowda Baby Shower Photos

ಕುಟುಂಬಸ್ಥರು ಮಾತ್ರವೇ ನಟಿ ಸುಷ್ಮಿತಾ ಅವರ ಸೀಮಂತದಲ್ಲಿ ಭಾಗಿಯಾಗಿದ್ದು, ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದೇ ಸಿನಿಮಾದಲ್ಲಿ ನಟಿಸಿದ್ದರೂ ಕೂಡ ಸುಷ್ಮಿತಾ ಅವರ ಫಾಲೋವರ್ಸ್ ಸಂಖ್ಯೆ ಕಡಿಮೆಯೇನು ಇಲ್ಲ.

ಲವ್ ಮಾಕ್ಟೇಲ್-2 ಬೆಡಗಿ

2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನನು ಹೊಂದಿರುವ ನಟಿ ಸುಷ್ಮಿತಾ ಗೌಡ ಅವರು ಕಂಟೆಂಟ್ ಕ್ರಿಯೇಟರ್ ಕೂಡ ಹೌದು. ನಿತ್ಯ ಒಂದಲ್ಲ ಒಂದು ವೀಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇನ್ನು ನಟಿ ಒಂದಲ್ಲ.. ಎರಡಲ್ಲ.. ಮೂರು ಮೂರು ಬಿಸಿನೆಸ್ ಅನ್ನು ಮ್ಯಾನೇಜ್ ಮಾಡುತ್ತಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನವೇ ನಟಿ ಸುಷ್ಮಿತಾ ಅವರು ಬಿಸಿನೆಸ್ ವುಮೆನ್ ಆಗಿದ್ದರು. ತಮ್ಮದೇ ಆದ ಎರಡು ಬಿಸಿನೆಸ್ ಗಳನ್ನು ನಡೆಸುತ್ತಿದ್ದರು. 'ಲವ್ ಮಾಕ್ಟೇಲ್-2' ಸಿನಿಮಾದಲ್ಲಿ ನಟಿಸಿದ ಬಳಿಕ ಸುಷ್ಮಿತಾ ಅವರು ಪ್ರಿಯಕರನ ಜೊತೆಗೆ ಮದುವೆಯಾದರು.

ಪ್ರಿಯಕರನೊಂದಿಗೆ ವಿವಾಹ

ನಟಿ ಸುಷ್ಮಿತಾ ಅವರಿಗೆ ಪಿಯುಸಿಯಲ್ಲೇ ಫಸ್ಟ್ ಲವ್ ಆಗಿತ್ತು. ಕಾರಾಣಾಂತರಗಳಿಂದ ಬ್ರೇಕಪ್ ಆಗಿ ಏಳು ವರ್ಷಗಳ ಗ್ಯಾಪ್ ಇತ್ತು. ಮತ್ತದೇ ಹುಡುಗನಿಗಾಗಿ ನಟಿ ಸುಷ್ಮಿತಾ ಅವರು ಕಾದು ವಿವಾಹವಾದರು. ಮದುವೆಯಾದಾಗ ನಟಿ ಸುಷ್ಮಿತಾ ಅವರ ವೆಡ್ಡಿಂಗ್ ಫೋಟೋಗಳು ವೈರಲ್ ಆಗಿದ್ದವು. ಮದುವೆಯಲ್ಲಿ ಸುಷ್ಮಿತಾ ಮತ್ತು ಅವರ ಪತಿ ಧರಿಸಿದ್ದ ಉಡುಗೆಗಳು ಎಲ್ಲರನ್ನು ಅಟ್ರ್ಯಾಕ್ಟ್ ಮಾಡಿತ್ತು. ಇನ್ನು ಪ್ರಗ್ನೆನ್ಸಿಯನ್ನು ಕೂಡ ನಟಿ ಸುಷ್ಮಿತಾ ಅವರು ಡಿಫರೆಂಟ್ ಆಗಿ ರಿವೀಲ್ ಮಾಡಿದ್ದರು. ಯಕ್ಷಗಾನದ ಹಾಡು ಹಾಗೂ ಯಕ್ಷಗಾನ ವೇಷದಲ್ಲಿದ್ದವರೊಂದಿಗೆ ವೀಡಿಯೋ ಮಾಡಿ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು.

ಮೂರು.. ಮೂರು ಬಿಸಿನೆಸ್

ನಟಿ ಸುಷ್ಮಿತಾ ಗೌಡ ಅವರು ಮೊದಲು ಹೇರ್ ಕೇರ್ ಪ್ರಾಡಕ್ಟ್ ಮೂಲಕ ಬಿಸಿನೆಸ್ ಆರಂಭಿಸಿದರು. ತಮ್ಮ ಉದ್ದ ಕೂದಲೇ ಇದಕ್ಕೆ ಸ್ಪೂರ್ತಿ ಎಂದು ಕೂಡ ಹೇಳಿಕೊಂಡಿದ್ದಾರೆ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿ ಸುಷ್ಮಿತಾ ಅವರು ಟರ್ಮಿನೇಟ್ ಆದಾಗ ಅವರಿಗೆ ಬಿಸಿನೆಸ್ ಮಾಡುವ ಐಡಿಯಾ ಹೊಳೆದಿತ್ತಂತೆ. ಹಾಗಾಗಿ ಹೇರ್ ಕೇರ್ ಮತ್ತು ಸ್ಕಿನ್ ಕೇರ್ ಬಿಸಿನೆಸ್ ಪ್ರಾರಂಭಿಸಿದರಂತೆ. ಇದು ಸಕ್ಸಸ್ ಆದ ಬಳಿಕ ತಮ್ಮ ಮೂಗುತಿಯ ಬಿಸಿನೆಸ್ ಕೂಡ ಆರಂಭಿಸಿದರು. ತಾವೇ ಡಿಸೈನ್ ಮಾಡಿ ಮೂಗುತಿಯನ್ನು ಸಿದ್ಧಪಡಿಸುತ್ತಾರಂತೆ. ಇದೂ ಕೂಡ ಸಕ್ಸಸ್ ಕಂಡಿದ್ದು, ಇನ್ನು ಬೆಂಗಳೂರಿನಲ್ಲಿ ತಮ್ಮದೇ ಆದ ಸಲೂನ್ ಅನ್ನು ಕೂಡ ಹೊಂದಿದ್ದಾರೆ.

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟಿ

ಸದ್ಯ ನಟಿ ಸುಷ್ಮಿತಾ ಗೌಡ ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದರು. ಸೀಮಂತಕ್ಕೆ ಸಿಂಪಲ್ ಆಗಿ ರೆಡಿಯಾಗಿದ್ದಾರೆ. ಪರ್ಪಲ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹೆಚ್ಚು ಫೋಟೋಶೂಟ್ ಮಾಡಿಸದ ನಟಿ ಸುಷ್ಮಿತಾ ಅವರು ಡಿಜಿಟಲ್ ಕ್ರೀಯೇಟರ್ ಕೆಲಸದಲ್ಲೇ ಹೆಚ್ಚು ಬ್ಯುಸಿಯಾಗಿರುತ್ತಾರೆ ಎಂದರೆ ತಪ್ಪಾಗಲಾರದು.

More from Filmibeat

English summary
Love Mocktail 2 Actress sushmitha gowda baby shower and other details;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X