Sushmitha: ಸುಶ್ಮಿತಾ ತಾಳಿ ಮೇಲೆ ನೆಟ್ಟಿಗರ ಕಣ್ಣು; ಕಮೆಂಟ್ ಬಾಕ್ಸ್ ನೋಡಿದ್ರೆ ಸುಸ್ತೋ ಸುಸ್ತು!
ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರವಾಗಲೀ ಬಹಳ ಬೇಗ ಹರಡಿ ಬಿಡುತ್ತದೆ. ಅದರಲ್ಲೂ ನೆಗೆಟಿವ್ ಸುದ್ದಿಯಾದರಂತು ಮುಗಿದೇ ಹೋಯ್ತು. ಬಿರುಗಾಳಿಯ ವೇಗದಲ್ಲಿ ಹರಡುತ್ತದೆ. ಈಗ ಸುಶ್ಮಿತಾ ಅವರ ವಿಡಿಯೋಗೆ ಕಮೆಂಟ್ ಕೂಡ ಅಷ್ಟೇ ಜೋರಾಗಿ ಬರುತ್ತಿವೆ. ಅದು ನೆಗೆಟಿವ್ ಕಮೆಂಟ್‌ಗಳೇ ಹೆಚ್ಚು.
ಸುಶ್ಮಿತಾ ಮತ್ತು ಜಗ್ಗಪ್ಪ ಕಿರುತೆರೆಯ ಫೇಮಸ್ ಜೋಡಿ. 'ಮಜಾ ಭಾರತ'ದ ಮೂಲಕ ಜಗ್ಗಪ್ಪ ಖ್ಯಾತಿ ಪಡೆದಿದ್ದರೆ, ಸುಶ್ಮಿತಾ 'ಗಿಚ್ಚಿ ಗಿಲಿಗಿಲಿ' ಮೂಲಕ ಫೇಮಸ್ ಆಗಿದ್ದಾರೆ. ಈ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈಗಲೂ ಕಿರುತೆರೆ ಶೋಗಳ ಮೂಲಕ ಬ್ಯುಸಿ ಲೈಫ್ ಕಳೆಯುತ್ತಿದ್ದಾರೆ. ಆದರೆ ಈ ಬ್ಯುಸಿ ಲೈಫ್ ಮಧ್ಯೆ ಸುಶ್ಮಿತಾ ಅವರ ಒಂದು ವಿಡಿಯೋಗೆ ನೆಟ್ಟಿಗರು ಸಿಕ್ಕಾಪಟ್ಟೆ ಕಮೆಂಟ್ ಹಾಕಿದ್ದಾರೆ.

ಓಡಾಟದ ವಿಡಿಯೋ ವೈರಲ್
'ಗೌರಿ' ಸಿನಿಮಾದ ಪ್ರಚಾರದ ವೇಳೆ ಸುಶ್ಮಿತಾ ಜಗ್ಗಪ್ಪ ತಾವೂ ಗಾಂಧಿ ಬಜಾರ್‌ನಲ್ಲಿ ಓಡಾಡಿದ್ದಾರೆ. ಬಿಳಿ ಬಣ್ಣದ ಕೆಂಪು ಫ್ಲವರ್ ಇರುವ ಮಾಡ್ರನ್ ಡ್ರೆಸ್ ಹಾಕಿರುವ ಸುಶ್ಮಿತಾ ಒಂದು ಸ್ಟೈಲ್ ಆಗಿ ವಾಕ್ ಮಾಡಿದ್ದಾರೆ. ಆ ವಿಡಿಯೋವನ್ನು ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನೆಲ್ ಒಂದು ಅಪ್ಲೋಡ್ ಮಾಡಿದ್ದಾರೆ. ಗಾಂಧಿ ಬಜಾರ್‌ನಲ್ಲಿ ಸುಶ್ಮಿತಾ ಓಡಾಟ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಕೊರಳಲ್ಲಿ ತಾಳಿ ಇಲ್ಲದೇ ಓಡಾಡಿದ ಸುಶ್ಮಿತಾ
ಸುಶ್ಮಿತಾಗೆ ಇತ್ತಿಚೆಗಷ್ಟೇ ಮದುವೆಯಾಗಿದೆ. ಆದರೆ ಈ ವಿಡಿಯೋದಲ್ಲಿ ತಾಳಿ ಕಾಲುಂಗರ ಎರಡು ಇಲ್ಲ. ನೆಟ್ಟಿಗರ ಕಣ್ಣು ನೇರವಾಗಿ ಸುಶ್ಮಿತಾ ಕತ್ತು ಹಾಗೂ ಕಾಲಿನ ಮೇಲೆ ಬಿದ್ದಿದೆ. ಕೊರಳಿನಲ್ಲಿ ತಾಳಿ ಇಲ್ಲದೆ ಇರುವುದನ್ನು ಕಂಡು ತರಹೇವಾರಿ ಕಮೆಂಟ್ ಗಳನ್ನ ಹಾಕಿದ್ದಾರೆ. ಟಿಆರ್‌ಪಿ ಹಿಂದೆ ಓಡುವ ಕುದುರೆಗಳು ಅಲ್ವಾ? ತಾಳಿ ಕಾಲುಂಗರ ಮನೆಯಲ್ಲಿ ತೆಗೆದಿಟ್ಟು ಬಂದಿದ್ದೀರಾ? ಇಂತವರಿಂದಾನೇ ನಮ್ಮ ಸಂಸ್ಕೃತಿ ಹಾಳಾಗುವುದು. ಅಂಬಾನಿ ಸೊಸೆಯನ್ನು ನೋಡಿ ಕಲಿ, ಎಂದೆಲ್ಲಾ ಕಮೆಂಟ್ ಹಾಕಿ ಟ್ರೋಲ್ ಮಾಡುತ್ತಿದ್ದಾರೆ.
ಕಮೆಂಟ್ ಮೂಲಕ ಫುಲ್ ಕ್ಲಾಸ್
ಸಾಲು ಸಾಲು ಕಮೆಂಟ್ ಹಾಕುವ ಮೂಲಕ ನೆಟ್ಟಿಗರು ಸುಶ್ಮಿತಾಗೆ ತಾಳಿಯ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ನಿಮ್ಮ ಗಂಡ ಕಟ್ಟಿದ ತಾಳಿಯನ್ನೇ ಬಿಟ್ಟು ಬಂದಿದ್ದೀರಲ್ಲ ಎಂದು ಕಮೆಂಟ್ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಸುಶ್ಮಿತಾ ಮತ್ತು ಜಗ್ಗಪ್ಪ ಹಲವು ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗಲೂ ತಾಳಿಯನ್ನು ಹೆಚ್ಚಾಗಿ ಬಳಸಿರುವುದಿಲ್ಲ. ಆದರೆ ಗಾಂಧಿ ಬಜಾರ್‌ನಲ್ಲಿ ತಾಳಿ ಇಲ್ಲದೆ ಓಡಾಡಿದ ಸುಶ್ಮಿತಾ ನೆಟ್ಟಿಗರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರೊಫೇಷನಲ್ ವಿಚಾರಕ್ಕೆ ತಾಳಿ ಹಾಕಿಲ್ಲ
ಸುಶ್ಮಿತಾ ಮತ್ತು ಜಗ್ಗಪ್ಪ ಮನರಂಜನೆಯ ಕ್ಷೇತ್ರದಲ್ಲಿ ಇದ್ದಾರೆ. ಸುಶ್ಮಿತಾ ಸದ್ಯ 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಹಿತ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಜಗ್ಗಪ್ಪ ರಿಯಾಲಿಟಿ ಶೋನಲ್ಲಿ ಮನರಂಜನೆ ನೀಡುತ್ತಿದ್ದಾರೆ. ಆದರೆ ನಟನಾ ಕ್ಷೇತ್ರದಲ್ಲಿ ಇರುವ ಆಲ್ಮೋಸ್ಟ್ ನಟಿ ಮಣಿಯರು ತಾಳಿ ಕಾಲುಂಗರ ಹಾಕಿರುವುದೇ ವಿರಳ. ಶೂಟಿಂಗ್ ಬ್ಯುಸಿ, ಪಾತ್ರಗಳ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಮಂಗಳ ಸೂತ್ರವನ್ನು ತೆಗೆದು ಇಟ್ಟಿರುತ್ತಾರೆ. ಕೆಲವೊಮ್ಮೆ ಫೋಟೋಶೂಟ್ ಇದ್ದಾಗಲೂ ಹಾಕುವುದಿಲ್ಲ. ಯಾವುದಾದರೂ ಹಬ್ಬ ಹರಿದಿನ, ಮದುವೆ ಕಾರ್ಯಕ್ರಮಗಳೇನಾದರೂ ಇದ್ದರೆ ಅಂಥ ಸಂದರ್ಭದಲ್ಲಿ ತಾಳಿ ಧರಿಸಿರುವ ಉದಾಹರಣೆಗಳು ಇದಾವೆ. ಸುಶ್ಮಿತಾ ಅವರ ಸೋಷಿಯಲ್ ಮೀಡಿಯಾದಲ್ಲೂ ಗಮನಿಸಬಹುದು. ತಾಳಿ ಹಾಕಿರುವ ವಿಡಿಯೋ, ಫೋಟೋಗಳು ಇದಾವೆ. ಆದರೆ ಗಾಂಧಿ ಬಜಾರ್‌ನ ಒಂದು ವಿಡಿಯೋಗ್ಯಾಕೆ ಇಷ್ಟೊಂದು ನೆಗೆಟಿವ್ ಕಮೆಂಟ್ ಬಂತು ಅನ್ನೋದೆ ಅರ್ಥವಾಗುತ್ತಿಲ್ಲ.


Click it and Unblock the Notifications











