ನವ ಯುವತಿಯಂತೆ ಮಿಂಚಿದ ನಟಿ ಶ್ವೇತಾ ಚಂಗಪ್ಪ; "ನಿಮ್ಮ ಬ್ಯೂಟಿ ಹಿಂದಿನ ಸೀಕ್ರೆಟ್ ಹೇಳಿ ಮೇಡಂ" ಅಂದ್ರು ನೆಟ್ಟಿಗರು
ನಟಿ ಶ್ವೇತಾ ಚೆಂಗಪ್ಪ ಕಿರುತೆರೆ ಪ್ರೇಕ್ಷಕರಿಗೆ ಬಹಳಷ್ಟು ಹಳೆಯ ಪರಿಚಯ. ಸುಮಾರು 20 ವರ್ಷಗಳಿಂದಲೂ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಶ್ವೇತಾ ಚಂಗಪ್ಪ, ನಡೆದು ಬಂದ ಹಾದಿ ಬಹಳಷ್ಟು ದೊಡ್ಡದು. ಎಸ್. ನಾರಾಯಣ್ ನಿರ್ದೇಶನದ 'ಸುಮತಿ' ಧಾರಾವಾಹಿಯಲ್ಲಿ ನಾಯಕಿ ಸುಮತಿ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ನಂತರ ಬದಲಾದುದು ಕಾದಂಬರಿಯಾಗಿ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾದಂಬರಿ ಧಾರಾವಾಹಿಯಲ್ಲಿ ಕಾದಂಬರಿ ಆಗಿ ಅಭಿನಯಿಸಿದ ಈಕೆ ರೋಬ್ಬರಿ ನಾಲ್ಕು ವರ್ಷಗಳ ಕಾಲ ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಜೊತೆಗೆ ಆ ಧಾರಾವಾಹಿ ಒಳ್ಳೆಯ ಟಿ ಆರ್ ಪಿ ಕೂಡಾ ಕೊಟ್ಟಿತ್ತು. ನಂತರ 'ಸುಕನ್ಯಾ', 'ಅರುಂಧತಿ', 'ಸೌಂದರ್ಯ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದ ಕೊಡಗಿನ ಕುವರಿ ಈ ಎಲ್ಲಾ ಧಾರಾವಾಹಿಗಳಲ್ಲೂ ಟೈಟಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಾಲ್ಕು ಧಾರಾವಾಹಿಗಳ ನಂತರ ಸಣ್ಣ ಬ್ರೇಕ್ ತೆಗೆದುಕೊಂಡ ನಟಿ ಶ್ವೇತಾ ಚಂಗಪ್ಪ ನಿಧಾನಕ್ಕೆ ರಿಯಾಲಿಟಿ ಶೋಗಳ ಕಡೆ ಮುಖ ಮಾಡಿದರು. ಹೌದು, 'ಯಾರಿಗುಂಟು ಯಾರಿಗಿಲ್ಲ' ಎಂಬ ರಿಯಾಲಿಟಿ ಶೋನಲ್ಲಿ ನಿರೂಪಿಸುವ ಮೂಲಕ ನಿರೂಪಕಿಯಾಗಿ ಹೊರಹೊಮ್ಮಿದರು. 'ಡ್ಯಾನ್ಸ್ ಜೂನಿಯರ್ಸ್ ಡ್ಯಾನ್ಸ್', 'ಕುಣಿಯೋಣ ಬಾರ', 'ಮಜಾ ಟಾಕೀಸ್' ಸೇರಿದಂತೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ, ಕಾಮಿಡಿಯನ್ ಆಗಿ ಕಾಣಿಸಿಕೊಂಡರು. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಎರಡರಲ್ಲಿ ಸ್ಪರ್ಧಿಯಾಗಿ ಜನಮನ ಗೆದ್ದರು.
ಮದುವೆಯಾಗಿ ಒಬ್ಬ ಮುದ್ದಾದ ಮಗನಿಗೆ ತಾಯಿಯಾಗಿರುವ ನಟಿ ಶ್ವೇತಾ ಚಂಗಪ್ಪ ಇಂದಿಗೂ ಕಿರುತೆರೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ 'ನಮ್ಮಮ್ಮ ಸೂಪರ್ ಸ್ಟಾರ್', 'ಕಾಮಿಡಿ ಕಿಲಾಡಿಗಳು ರೀಲೋಡೆಡ್' ಮುಂತಾದ ವಿಭಿನ್ನ ರಿಯಾಲಿಟಿ ಶೋ ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ ನಟಿ ಶ್ವೇತಾ ಚೆಂಗಪ್ಪ.

ಈ ಮೂಲಕ ನಟನೆ ಅಷ್ಟೇ ಅಲ್ಲದೆ ನಿರೂಪಣೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಯೌಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದಾರೆ. ತಮ್ಮ ದಿನನಿತ್ಯದ ಜೀವನ ಸೇರಿದಂತೆ ಶಾಪಿಂಗ್ ಸ್ಕಿನ್ ಕೇರ್ ರೂಟೀನ್ ಹಾಗೂ ತಾವು ಕೈಗೊಳ್ಳುವ ಟ್ರಿಪ್ ಗಳ ಬಗ್ಗೆ ಯೌಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋಗಳನ್ನು ಬಿಡುತ್ತಿರುತ್ತಾರೆ. ಒಂದು ತಿಂಗಳ ಹಿಂದಷ್ಟೇ ರಾಪಿಡ್ ರಶ್ಮಿ ಅವರ ಜಸ್ಟ್ ಎಂಬ ಪಾಡ್‌ಕಾಸ್ಟ್‌ನಲ್ಲಿ ಬಹಳಷ್ಟು ವಿಚಾರಗಳನ್ನು ಮುಕ್ತವಾಗಿ ನಟಿ ಶ್ವೇತಾ ಚಂಗಪ್ಪ ಹಂಚಿಕೊಂಡಿದ್ದಾರೆ.
ಜೊತೆಗೆ ಸೋಶಿಯಲ್ ಮೀಡಿಯಾಗಳಾದ ಇನ್‌ಸ್ಟಾಗ್ರಾಂನಲ್ಲಿ ಬಹಳಷ್ಟು ಜನಪ್ರಿಯತೆ ಇರುವ ಈಕೆ ಇತ್ತೀಚೆಗಷ್ಟೇ ಒಂದಷ್ಟು ಪೋಸ್ಟ್‌ಗಳನ್ನು ಮಾಡಿದ್ದು ಈ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ. ಬಿಳಿ ಕ್ರಾಪ್ ಟಾಪಿಗೆ, ಫ್ಲೋರಲ್ ಡಿಸೈನ್ ಇರುವ ಸ್ಕರ್ಟ್ ಹಾಕಿಕೊಂಡು, ಶೇಡ್ಸ್ ಹಾಕಿಕೊಂಡಿರುವ ನಟಿ ಶ್ವೇತಾ ಚಂಗಪ್ಪ ನವ ಯುವತಿಯಂತೆ ಕಂಡಿದ್ದಾರೆ. ಈ ನಟಿಗೆ ವಯಸ್ಸು ಹಿಂದಕ್ಕೆ ಜಾರುತ್ತಿದೆ ಎಂದು ಬಹಳಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಈಗಾಗಲೇ ಸಾವಿರಾರು ಲೈಕ್ ಹಾಗೂ ಕಮೆಂಟ್‌ಗಳು ಬಂದಿದ್ದು ಶ್ವೇತಾ ಚೆಂಗಪ್ಪ ಅವರ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ನಿಮ್ಮ ಬ್ಯೂಟಿ ಹಿಂದಿನ ಸೀಕ್ರೆಟ್ ಹೇಳಿ ಮೇಡಂ ಎಂದು ಹಲವರು ಕಮೆಂಟಿಸಿದರೆ, ಸಿಂಪಲ್ ಹಾಗೂ ಬ್ಯೂಟಿಫುಲ್ ಎಂದು ಮತ್ತೊಂದಷ್ಟು ಅಭಿಮಾನಿಗಳು ನಟಿ ಶ್ವೇತಾ ಅವರನ್ನು ಹೊಗಳಿದ್ದಾರೆ.


Click it and Unblock the Notifications











