8 ವರ್ಷಗಳ ಬಳಿಕ ಮತ್ತೆ ಬಂದ 'ಛೋಟಾ ಚಾಂಪಿಯನ್': "ಇನ್ನು ಕಾಯೋಕೆ ಆಗಲ್ಲ" ಎಂದ ಶ್ವೇತಾ ಚೆಂಗಪ್ಪ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹೊಚ್ಚ ಹೊಸ ರಿಯಾಲಿಟಿ ಶೋ 'ಸೂಪರ್ ಕ್ವೀನ್' ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ನಂತರ ಶ್ವೇತಾ ಚಂಗಪ್ಪ ಹೊಸ ಪ್ರಾಜೆಕ್ಟ್‌ನೊಂದಿಗೆ ಕಿರುತೆರೆಗೆ ಮರಳುತ್ತಿದ್ದಾರೆ. ಹೌದು, ಅದೇ ವಾಹಿನಿಯಲ್ಲಿ ಆರಂಭಗೊಳ್ಳಲಿರುವ ಮಕ್ಕಳ ಗೇಮ್ ಶೋ 'ಚೋಟಾ ಚಾಂಪಿಯನ್'.

'ಛೋಟಾ ಚಾಂಪಿಯನ್' ಸೀಸನ್ 3ರ ನಿರೂಪಕಿಯಾಗಿ ಶ್ವೇತಾ ಚೆಂಗಪ್ಪ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಫ್ರೋಮೊ ಹೊರಬಿದ್ದಿದ್ದು ವೀಕ್ಷಕರ ಕುತೂಹಲವನ್ನು ಗರಿಗೆದರಿಸಿದೆ. ಈ ಶೋಗೆ ರಚಿತಾ ರಾಮ್ ಹಾಗೂ ವಿಜಯ್ ರಾಘವೇಂದ್ರ ಮೆರುಗು ನೀಡಲಿದ್ದಾರೆ.

Actress Swetha Changappa returned to television again with Chota Champion

ಮರಳಿ ಬರುತ್ತಿದ್ದೇನೆ ಎಂದ ಶ್ವೇತಾ

'ಛೋಟಾ ಚಾಂಪಿಯನ್'ನ ಮೊದಲ ಪ್ರೋಮೋದೊಂದಿಗೆ ಈ ಸುದ್ದಿಯನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ನಟಿ. "ಹೇ ನನ್ನ ಪ್ರೀತಿಯ ಇನ್‌ಸ್ಟಾ ಕುಟುಂಬದವರೇ. ನನ್ನ ಮುಂದಿನ ಕಾರ್ಯಕ್ರಮದ ಬಗ್ಗೆ ಕೇಳುತ್ತಿದ್ದವರಿಗೆ ಇಲ್ಲಿದೆ ನೋಡಿ ಉತ್ತರ. ನಮ್ಮ ನೆಚ್ಚಿನ ಚಾನೆಲ್‌ನಲ್ಲಿ ಚೋಟಾ ಚಾಂಪಿಯನ್ ಪ್ರಸಾರವಾಗಲಿದೆ. ಇದಕ್ಕಾಗಿ ಇನ್ನೂ ಕಾಯಲು ಸಾಧ್ಯವಿಲ್ಲ" ಎಂದು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಕಾತುರ

ಇಷ್ಟೊಂದು ಖುಷಿಯಿಂದ ಅಭಿಮಾನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿರುವ ನಟಿಗೆ ಅಭಿನಂದನೆಯ ಮಹಾಪೂರವೇ ಬರುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಸಂದೇಶಗಳು ಶ್ವೇತಾರ ಖುಷಿಯನ್ನು ಇಮ್ಮಡಿ ಪಡಿಸುವಂತಿದೆ. ತಮ್ಮ ನೆಚ್ಚಿನ ನಟಿಯನ್ನು ನಿರೂಪಕಿಯಾಗಿ ಮತ್ತೆ ತೆರೆಯ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

Actress Swetha Changappa returned to television again with Chota Champion

ಶ್ವೇತಾಗೆ ಸಾಥ್ ನೀಡಿದ ಕುರಿ ಪ್ರತಾಪ್

ಶ್ವೇತಾ ಚಂಗಪ್ಪರನ್ನು ಹೊರತುಪಡಿಸಿ ತಾರೆಯರಾದ ರಚಿತಾ ರಾಮ್, ವಿಜಯ್ ರಾಘವೇಂದ್ರ ಮತ್ತು ಕುರಿ ಪ್ರತಾಪ್ ಕೂಡ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ, ರಚಿತಾ ರಾಮ್ ಮತ್ತು ವಿಜಯ್ ರಾಘವೇಂದ್ರ ತೀರ್ಪುಗಾರರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಕುರಿ ಪ್ರತಾಪ್, ಶ್ವೇತಾ ಅವರೊಂದಿಗೆ ಸಹ ನಿರೂಪಕರಾಗಿ ಸೇರಿಕೊಳ್ಳಲಿದ್ದಾರೆ.

ಬರೋಬ್ಬರಿ ಎಂಟು ವರ್ಷಗಳ ನಂತರ 'ಛೋಟಾ ಚಾಂಪಿಯನ್' ಶೋ ಕನ್ನಡ ಕಿರುತೆರೆಗೆ ಮರಳುತ್ತಿದೆ. ಈ ಪ್ರದರ್ಶನವು ಅಂಬೆಗಾಲಿಡುವ ಮಕ್ಕಳು ತಮ್ಮ ಪೋಷಕರೊಂದಿಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಸುಂದರ ರಿಯಾಲಿಟಿ ಶೋ ಆಗಿದ್ದು, ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಿದೆ.

More from Filmibeat

English summary
Swetha Changappa answered the viewer's question that when will she return to television again. Shweta is coming to entertain with Chota Champion Show,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X