ಮೊದಲ ಅಂತರಾಷ್ಟ್ರೀಯ ಪ್ರವಾಸದಲ್ಲಿ 'ಅಂತರಪಟ' ನಟಿ; ಯಾವುದು ಈ ಸ್ಥಳ ಗೊತ್ತೇ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ. ನಟರಾದ ತನ್ವಿ ಬಾಲರಾಜ್, ಚಂದನ್, ಮಂಜು ಪಾವಗಡ ಸೇರಿದಂತೆ ಬಹಳ ಒಳ್ಳೆಯ ತಾರಾಗಣವನ್ನು ಹೊಂದಿರುವ ಈ ಧಾರಾವಾಹಿ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಲೇ ಇದೆ.

ಇದೀಗ ಈ ಧಾರಾವಾಹಿಯಲ್ಲಿ ನಾಯಕ ನಟಿಯಾಗಿರುವ ತನ್ವಿ ಬಾಲರಾಜ್ ಅವರು ಮೊದಲ ಅಂತರಾಷ್ಟ್ರೀಯ ಟ್ರಿಪ್‌ಗೆ ಹೋಗಿದ್ದಾರೆ. ಥೈಲ್ಯಾಂಡ್‌ಗೆ ತೆರಳಿರುವ ನಟಿ ತನ್ವಿ ಬಾಲರಾಜ್, ಇದು ತಮ್ಮ ಮೊದಲ ಅಂತರಾಷ್ಟ್ರೀಯ ಟ್ರಿಪ್ ಎಂದು ಸಂಭ್ರಮಿಸಿದ್ದಾರೆ. ಹಲವಾರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಟ್ರಿಪ್ ಬಗ್ಗೆ ನೆಟ್ಟಿಗರು ಹಾಗೂ ಫಾಲೋವರ್ಸ್ ಜೊತೆಗೆ ಹಂಚಿಕೊಂಡಿದ್ದಾರೆ.

Actress Tanvi Balraj on her first international trip to Thailand went viral

ಅಂದಹಾಗೆ ನಟಿ ತನ್ವಿ ಬಾಲರಾಜ್ ಅವರು ಕೆಲ ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ನಾನಾ ರೀತಿಯ ಶೋಗಳಲ್ಲಿ ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿದ್ದವರು. ಇದೀಗ ಒಂದು ಧಾರಾವಾಹಿಯ ನಟಿಯಾಗಿ ಈ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ. ಒಂದು ಕಾಲದಲ್ಲಿ 'ಗಿಣಿರಾಮ' ಸೀರಿಯಲ್ ಸಂತೆಯಲ್ಲಿ ಬ್ಯಾಕ್ ಸ್ಟೇಜ್ ಡ್ಯಾನ್ಸರ್ ಆಗಿದ್ದ ತನ್ವಿ, ಇದೀಗ ಒಂದು ಧಾರಾವಾಹಿಯ ನಾಯಕ ನಟಿಯಾಗಿರುವುದು ಸಣ್ಣ ಮಾತೇನಲ್ಲ.

ನಟಿ ತನ್ವಿ ಈ ರೀತಿ ಡ್ಯಾನ್ಸ್ ಮಾಡುತ್ತಾರೆ ಎಂಬುದರ ಬಗ್ಗೆ ಅವರ ತಂದೆ ತಾಯಿಗೆ ಅಸಮಾಧಾನವಿತ್ತಂತೆ. ಪ್ರತಿದಿನ ರಾತ್ರಿ ತಡವಾಗಿ ಬರುತ್ತೀಯಾ ಎಂದು ಬೈಯುತ್ತಿದ್ದರಂತೆ. ಆದರೆ ಈಗ ತನ್ವಿ ನಾಯಕಿಯಾಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಅವರ ತಂದೆ ತಾಯಿಗೆ ಬಹಳ ಸಂತೋಷವಿದೆಯಂತೆ. ಅಂದಹಾಗೆ ತನ್ವಿಯವರ ತಂದೆ ಕಂಟ್ರಾಕ್ಟರ್ ಆಗಿದ್ದು, ತಾಯಿ ಹೂ ಮಾರುವವರು. ಮನೆಯಲ್ಲಿ ಸಾಕಷ್ಟು ಬಡತನವಿದ್ದರೂ ಸಹ ತನ್ವಿಯವರು ಛಲ ಬಿಡದೆ ಈ ಕ್ಷೇತ್ರದಲ್ಲಿ ಮುಂದೆ ಬಂದು ಇದೀಗ ಒಂದು ಧಾರಾವಾಹಿಯಲ್ಲಿ ನಾಯಕಿ ಆಗಿರುವುದು ಅವರ ಕುಟುಂಬಕ್ಕೆ ಬಹಳ ಹೆಮ್ಮೆ ಹಾಗೂ ಸಂಭ್ರಮ ತಂದಿರುವ ವಿಚಾರ.

ಪೈಲ್ವಾನ್ ಕೃಷ್ಣ ಹಾಗೂ ಸ್ವಪ್ನ ಕೃಷ್ಣ ಅವರ ನಿರ್ಮಾಣದ ಆರ್ ಆರ್ ಪ್ರೊಡಕ್ಷನ್ ವತಿಯಿಂದ 'ಅಂತರಪಟ' ಎಂಬ ಧಾರಾವಾಹಿಗೆ ನಟಿ ತನ್ವಿ ಬಾಲರಾಜ್ ನಾಯಕ ನಟಿಯಾಗಿ ಆಯ್ಕೆಯಾಗಿ ಇದೀಗ ಬಹಳ ತಿಂಗಳುಗಳು ಕಳೆದಿವೆ. ಒಳ್ಳೆಯ ನಟನೆಯ ಮೂಲಕ ಜನಮನ ಗೆದ್ದಿರುವ ನಟಿ ತನ್ವಿ ನಟನಾ ಕ್ಷೇತ್ರದಲ್ಲಿ ಹೆಚ್ಚಿನ ಹೆಸರು ಮಾಡುವ ಕನಸು ಕಾಣುತ್ತಿದ್ದಾರೆ. ಸದ್ಯಕ್ಕೆ ಗೆಳೆಯರೊಂದಿಗೆ ಥೈಲ್ಯಾಂಡ್ ಹೋಗಿರುವ ಇವರು ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

More from Filmibeat

English summary
Tv actress Tanvi Balraj shared her happiness in Thailand trip:
Read more about: actress anitha banari ನಟಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X