ಕೀರ್ತಿ ಪಾತ್ರಕ್ಕೆ ಭಾವಪೂರ್ಣ ಬೀಳ್ಕೊಡುಗೆ ಕೊಟ್ಟ ನಟಿ ತನ್ವಿ ರಾವ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಲಕ್ಷ್ಮೀಬಾರಮ್ಮ' ಧಾರಾವಾಹಿ ಅಂತ್ಯವಾಗಿ ಇನ್ನೂ ಕೆಲವೇ ದಿನಗಳು ಮುಗಿದಿವೆ. ಇದರಲ್ಲಿನ ಪಾತ್ರಗಳನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ 'ಲಕ್ಷ್ಮೀಬಾರಮ್ಮ' ಪಾತ್ರಧಾರಿಗಳ ಪೋಸ್ಟ್ ಹಾಕಿ ನಟನೆ ಬಗ್ಗೆ ಹೊಗಳುತ್ತಲೇ ಇರುತ್ತಾರೆ. ಅಲ್ಲದೇ, ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಕಮೆಂಟ್ ಮಾಡುತ್ತಿರುತ್ತಾರೆ. ಧಾರಾವಾಹಿಯನ್ನು ನೋಡಿದ ವೀಕ್ಷಕರಿಗೆ ಇಷ್ಟು ಕಷ್ಟವಾಗುತ್ತಿದೆ. ಇನ್ನು ಆ ಪಾತ್ರಗಳಲ್ಲಿ ನಟಿಸಿದ ಕಲಾವಿದರ ಪರೀಸ್ಥಿತಿ ಹೇಗಿರಬೇಡ.

ಎರಡು ವರ್ಷಗಳ ಕಾಲ ಪಾತ್ರವನ್ನೇ ತಾವು ಎಂದು ಭಾವಿಸಿದ್ದರು. ನಿತ್ಯ ಬೆಳಗಾದರೆ ಶೂಟಿಂಗ್‌ಗೆ ತೆರಳಿ ಕ್ಯಾಮರಾ ಮುಂದೆ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.
ವೀಕ್ಷಕರ ಮನದಾಳಕ್ಕೆ ಇಳಿದಿದ್ದಾರೆ. ವೀಕ್ಷಕರ ಕಣ್ಣಂಚನ್ನು ಒದ್ದೆಯಾಗಿಸಿದ್ದಾರೆ. ಮೊಗದಲ್ಲಿ ನಗು ಮೂಡಿಸಿದ್ದಾರೆ. ತಮ್ಮ ಭಾವಗಳನ್ನು ವೀಕ್ಷಕರಲ್ಲೂ ಮೂಡಿಸಿದ್ದಾರೆ. ಈಗ ಕಲಾವಿದರೂ ಕೂಡ ತಮ್ಮ ಪಾತ್ರಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಿಲ್ಲ ಕೀರ್ತಿ ರಘುವೀರ್
ಇದಕ್ಕೆ ಸಾಕ್ಷಿ ಎಂಬಂತೆ ನಟಿ ತನ್ವಿ ರಾವ್ ಅವರು ತಮ್ಮ ಪಾತ್ರವಾದ ಕೀರ್ತಿ ರಘುವೀರ್‌ಗೆ ಕೊನೆಯ ಬಾರಿಗೆ ಬಿಳ್ಕೊಡುಗೆ ನೀಡಿದ್ದಾರೆ. ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ವೀಡಿಯೋದಲ್ಲಿ ಕೀರ್ತಿ ಪಾತ್ರದ ಎಮೋಷನಲ್ ವೀಡಿಯೋಗಳನ್ನು ಹಾಕಿದ್ದಾರೆ. ಇದಕ್ಕೆ ಹಿಂದಿ ಆಲ್ಬಂನ ಹಾಡೊಂದನ್ನು ಹಾಕಿದ್ದಾರೆ. ಮೇರಿ ಬಾಡಿ ಮೈ ಸೆನ್ಸೆಷನ್ಸ್ ಹೋತೇ ಹೈ ಎಂಬ ಹಾಡಿಗೆ ಮುದ್ದಾಗಿ ವೀಡಿಯೋ ಎಡಿಟ್ ಮಾಡಿ ಹಾಕಿದ್ದಾರೆ. ಈ ವೀಡಿಯೋದಲ್ಲಿ ಕೀರ್ತಿಯ ಎಲ್ಲಾ ಬಗೆಯ ಎಮೋಷನ್ಸ್‌ನ ಕ್ಲಿಪಿಂಗ್‌ಗಳನ್ನು ಕೂಡ ಸೇರಿಸಲಾಗಿದೆ.
ಮುದ್ದಿನ ಪಾತ್ರಕ್ಕೆ ಬಿಳ್ಕೊಡುಗೆ ಕೊಟ್ಟ ನಟಿ
"ಭಾವನೆಗಳ ರಾಣಿಗೆ ನನ್ನ ಕೊನೆ ವಿದಾಯ.. ಕೀರ್ತಿಯಾಗಿ ನಟಿಸುವುದು ಬಹಳ ಸಂತೋಷವಾಗುತ್ತಿತ್ತು. ಕಳೆದ 3 ವರ್ಷಗಳಿಂದ ನಾನು ಅವಳನ್ನು ಬದುಕಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ. ಈ ಪಯಣ ಚೆನ್ನಾಗಿತ್ತು. ನಿಮ್ಮ ಬೆಂಬಲ ಮತ್ತು ಅವಳ ಮೇಲಿನ ಪ್ರೀತಿಗೆ ಧನ್ಯವಾದಗಳು. ಕೀರ್ತಿಯೊಂದಿಗೆ ಈ ಪ್ರಯಾಣಕ್ಕೆ ನಾನು ಇಂದು ವಿಭಿನ್ನ ವ್ಯಕ್ತಿಯಾಗಿರುವುದಕ್ಕೆ, ಕೀರ್ತಿ ಮತ್ತು ನಿಮ್ಮೆಲ್ಲರಿಗೂ ಧನ್ಯವಾದಗಳು. ನನ್ನ ರೆಕ್ಕೆಗಳನ್ನು ಹಾರಲು ಶಕ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು. ಕೀರ್ತಿ ರಘುವೀರ್ (ಆದಾಗ್ಯೂ ರಘುವೀರ್ ಯಾರೆಂದು ಇನ್ನೂ ತಿಳಿದಿಲ್ಲ) ಎಂದು ತನ್ವಿ ಬರೆದುಕೊಂಡಿದ್ದಾರೆ.
ಅನ್ಯಾಯಕ್ಕೊಳಗಾದ ಕೀರ್ತಿ
ಲಕ್ಷ್ಮೀಬಾರಮ್ಮ ಧಾರಾವಾಹಿಯು ಹ್ಯಾಪಿ ಎಂಡಿಂಗ್ ಅನ್ನು ಕಂಡಿತು. ಆದರೆ, ಅನ್ಯಾಯವಾಗಿದ್ದು ಮಾತ್ರವೇ ಕೀರ್ತಿಗೆ. ಕಾವೇರಿ ತನ್ನ ಸ್ವಾರ್ಥಕ್ಕಾಗಿ ಕೀರ್ತಿಯನ್ನು ಬಳಸಿಕೊಂಡಳು. ಇಡೀ ಧಾರಾವಾಹಿ ನಿಂತಿದ್ದೇ ಕೀರ್ತಿ ಪಾತ್ರದಿಂದ. ಈ ಧಾರಾವಾಹಿಯಲ್ಲಿ ಕೀರ್ತಿಯೇ ಮುಖ್ಯ ನಾಯಕಿ ಎಂದರೂ ತಪ್ಪಾಗುವುದಿಲ್ಲ. ಪ್ರಿಯಕರನಿಗೆ ತೊಂದರೆಯಾಗಬಾರದು ಎಂಬ ಒಂದೇ ಕಾರಣಕ್ಕೆ ಕೀರ್ತಿ ಅತ್ತೆ ಕಾವೇರಿ ಮಾತನ್ನು ಕೇಳಿಕೊಂಡು ಲಕ್ಷ್ಮೀ ಜೊತೆಗೆ ವೈಷ್ಣವ್ ಮದುವೆ ಮಾಡಿಸಿ ಯಾಮಾರಿದಳು. ಅಲ್ಲಿಂದ ಕೀರ್ತಿಯ ಸಂಕಷ್ಟಗಳು ಎದುರಾದವು. ಕೊನೆಗೆ ಲಕ್ಷ್ಮೀ ಮತ್ತು ವೈಷ್ಣವ್ ಸುಖವಾಗಿರಲಿ ಎಂದು ಹೊರದೇಶಕ್ಕೆ ಪ್ರಯಾಣ ಬೆಳೆಸಿದಳು. ಈಗ ತನ್ವಿರಾವ್ ಕೀರ್ತಿ ಪಾತ್ರಕ್ಕೆ ಪ್ರೀತಿಯ ವಿದಾಯ ಹೇಳಿದ್ದಾಳೆ.
ವೈರಲ್ ಆಗಲಿದೆಯಾ ಈ ಹಾಡು
ಇದೇ ರೀತಿಯಲ್ಲಿ ನಟ ಶಮಂತ್ ಬ್ರೋ ಗೌಡ ಅವರೂ ಕೂಡ ವೈಷ್ಣವ್ ಪಾತ್ರದ ಬೇರೆ ಬೇರೆ ಭಾವನೆಗಳ ವೀಡಿಯೋ ಹಾಕಿದ್ದಾರೆ. ನಟಿ ತನ್ವಿ ರಾವ್ ಅವರು ಬಳಸಿರುವ ಹಾಡನ್ನೇ ಹಾಕಿದ್ದು, ಹಾಡು ವೈರಲ್ ಆಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫೋಟೋಗಳು ಕೂಡ ಅಭಿಮಾನಿಯೊಬ್ಬರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಿರುತೆರೆ ನಟ-ನಟಿಯರು ಈ ಹಾಡಿಗೆ ವೀಡಿಯೋ ಹಂಚಿಕೊಳ್ಳುವುದಂತೂ ಪಕ್ಕಾ.


Click it and Unblock the Notifications











