ಬೀನ್ ಬ್ಯಾಗ್ ಮೇಲೆ ವರ್ತೂರು ಸಂತೋಷ್-ತಾರಾ: ಯಾರ ಬಗ್ಗೆ? ಏನೆಲ್ಲಾ ಮಾತನಾಡಿದ್ರು ಗೊತ್ತಾ..?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್- 10ರ ಶೋ ಈಗ ನೆನೆಸಿಕೊಂಡರು ಒಂದಷ್ಟು ಪಾತ್ರಗಳು ಕಣ್ಣ ಮುಂದೆ ಬರುತ್ತವೆ. ಅದರಲ್ಲೂ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಹೆಚ್ಚು ನೆನಪಲ್ಲಿ ಉಳಿಯುತ್ತಾರೆ. ಭಾರೀ ಕಿತಾಪತಿ ಮಾಡುತ್ತಿದ್ದ ತುಕಾಲಿ ಸಂತೋಷ್ ಬಹಳ ಬೇಗನೆ ತಮ್ಮ ಜರ್ನಿ ಮುಗಿಸುತ್ತಾರೆ ಅಂತಾನೇ ಹಲವರು ಅಂದುಕೊಂಡಿದ್ದರು. ಆದರೆ ಫಿನಾಲೆ ತನಕ ಬಂದಿದ್ದರು.

ಬಿಗ್ ಬಾಸ್ ಮನೆಯಲ್ಲಿ ಸಂತು-ಪಂತು ಆಗಿ ಗುರುತಿಸಿಕೊಂಡವರು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು. ಇಬ್ಬರಿಗೂ ಒಳ್ಳೆ ಸಮಯ ಕಳೆಯುವುದಕ್ಕೆ ತುಂಬಾ ಸಪೋರ್ಟ್ ಮಾಡಿದ್ದು, ಬೀನ್ ಬ್ಯಾಗ್. ಈ ಬೀನ್ ಬ್ಯಾಗ್ ಮೇಲೆ ಕುಳಿತುಕೊಂಡರೆ ಮನೆಯಲ್ಲಿರುವ ಎಲ್ಲಾ ಸದಸ್ಯರ ಬಗ್ಗೆಯೂ ಮಾತುಗಳು ಬಂದು ಹೋಗುತ್ತಿದ್ದವು.

Actress Tara anuradha and varthur santhosh chitchat in Nannamma superstar- 3 Stage

ವೀಕೆಂಡ್‌ನಲ್ಲಿ ಸುದೀಪ್ ಪಂಚಾಯ್ತಿಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗಿದ್ದು ಇದೆ. ಇಡೀ ಜರ್ನಿಯಲ್ಲಿ ಬೀನ್ ಬ್ಯಾಗ್ ಮೇಲೆ ಕುಳಿತು, ಈಗ ಬಿಗ್ ಬಾಸ್ ಮುಗಿದ ಮೇಲೂ ಅದೇ ಫ್ರೆಂಡ್ಶಿಪ್ ಉಳಿಸಿಕೊಂಡಿದ್ದಾರೆ. ಆದರೆ ಈಗ ಆ ಬೀನ್ ಬ್ಯಾಗ್ ಮೇಲೆ ತುಕಾಲಿ ಸಂತೋಷ್ ಬದಲಿಗೆ ನಟಿ ತಾರಾ ಅನುರಾಧ ಕುಳಿತಿದ್ದಾರೆ.

ಬೀನ್ ಬ್ಯಾಗ್ ಮೇಲೆ ತಾರಾ-ವರ್ತೂರು ಟಾಕ್

ಬಿಗ್ ಬಾಸ್ ಮನೆಯಲ್ಲಿ ಬಾಲ್ಕನಿಯಲ್ಲಿ ಬೀನ್ ಬ್ಯಾಗ್ ಹಾಕಲಾಗಿತ್ತು. ಎರಡು ಬೀನ್ ಬ್ಯಾಗ್‌ಗಳು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್‌ಗೆ ಮೀಸಲಾಗಿ ಇಟ್ಟಂತೆ ಇತ್ತು. ಬಿಗ್ ಬಾಸ್ ಮುಗಿಯುವ ತನಕ ಹೆಚ್ಚು ಬಳಕೆ ಮಾಡಿಕೊಂಡಿದ್ದೆ ಈ ಇಬ್ಬರು. ಇದೀಗ ಆ ಬೀನ್ ಬ್ಯಾಗ್ ನನ್ನಮ್ಮ ಸೂಪರ್ ಸ್ಟಾರ್ ಸೆಟ್‌ಗೆ ಬಂದಿವೆ.

ತನಿಷಾ ಬಗ್ಗೆ ವರ್ತೂರು ಮಾತು

ಈ ಬೀನ್ ಬ್ಯಾಗ್ ತರಿಸಿದ ತಾರಾ ಒಂದು ಕಡೆ ತಾವು ಕುಳಿತು ಮತ್ತೊಂದು ಕಡೆ ವರ್ತೂರು ಸಂತೋಷ್‌ರನ್ನು ಕೂರಿಸಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಮೊದಲೇ ಬೆಂಕಿ ಹಾಗೂ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಕ್ಲೋಸ್ ಆಗಿಬಿಟ್ಟಿದ್ದರು. ಇದೀಗ ಬೆಂಕಿಯ ವಿಚಾರವನ್ನು ತಾರಾ ಕೇಳಿದ್ದೆ ತಡ, ವರ್ತೂರು ನಾಚಿ ನೀರಾಗಿ ಚೆನ್ನಾಗಿದ್ದಾಳೆ ಅಕ್ಕ ಎಂದಿದ್ದಾರೆ.

Actress Tara anuradha and varthur santhosh chitchat in Nannamma superstar- 3 Stage

ನಮ್ರತಾ ಬಗ್ಗೆ ಹೇಳಿದ್ದೇನು..?

ಇನ್ನು ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ನಮ್ರತಾ ಕಣ್ಣು ಬಿಟ್ಟಿದ್ದಕ್ಕೆ ಹೆದರಿದ್ದರು. ಸಂಗೀತಾ ಹೌದು ಹೌದು ಎಂಬುದಕ್ಕೆ ದೂರವಿದ್ದರು. ಅದೇ ಪ್ರಶ್ನೆಯನ್ನು ಇಲ್ಲಿ ತಾರಾ ಕೇಳಿದ್ದು, ನಮ್ರತಾ ಕಣ್ಣು ಎಷ್ಟು ದೊಡ್ಡ ದೊಡ್ಡದಾಗಿ ಬಿಡುತ್ತಾರೆ ಎಂಬುದನ್ನು ನೋಡಬೇಕು ಅಕ್ಕ ಎಂದಿದ್ದಾರೆ. ಜೊತೆಗೆ ಸಂಗೀತಾ ವಿಚಾರ ಬಂದಾಗ ಬೇಡ ಅಕ್ಕ ಎಂದು ಕೈಮುಗಿದಿದ್ದಾರೆ.

ಕಪ್ ಬಗ್ಗೆ ಹೇಳಿ ಕಾಲೆಳೆದ ತಾರಾ

ತಾರಾ ಅನುರಾಧ ಶೋ ಉದ್ದಕ್ಕೂ ಮಾತಿನಲ್ಲೇ ವರ್ತೂರು ಸಂತೋಷ್ ಕಾಲೆಳೆದಿದ್ದಾರೆ. ಫಿನಾಲೆ ತನಕ ಬಂದು ನೀನು ಕಪ್ ತೆಗೆದುಕೊಂಡು ಹೋಗಲಿಲ್ಲ ಕಣೊ. ಆದರೂ ಕಪ್ ನಿಂಗೆ ಬರಬೇಕಿತ್ತು ಎಂದು ಸಿಕ್ಕಾಪಟ್ಟೆ ಕಾಡಿಸಿದ್ದಾರೆ. ಆಗ ವರ್ತೂರು ಸಂತೋಷ್ ನಂಗೆ ಇವತ್ತು ನಿದ್ದೆ ಮಾಡೋದಕ್ಕೆ ಬಿಡಲ್ಲ ಅನ್ಸುತ್ತೆ. ಕಪ್ ಅಂತ ಹೇಳಿ ಹೇಳಿ ಅದರ ಬಗ್ಗೆನೆ ಯೋಚನೆ ಮಾಡುವಂತೆ ಮಾಡ್ತೀರ ಎಂದಿದ್ದಾರೆ. ಒಂದಷ್ಟು ವಿಚಾರಗಳನ್ನು ಮನರಂಜನೆಯ ಮೂಲಕವೇ ಹೊರ ಹಾಕಿಸಿದ್ದಾರೆ ತಾರಾ ಅನುರಾಧ.

More from Filmibeat

English summary
colors kannada reality show Nannamma superstar season 3 Written Update on February 24th episode. Here is the details about Varthur Santhosh with Tara on Bean Bag;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X