"ದೇವತೆಗಳು ಮಕ್ಕಳ ರೂಪದಲ್ಲಿ ಸೇರುತ್ತಾರೆ" ಎನ್ನುತ್ತಾ ಮಗಳ ಹೆಸರು ಹೇಳಿದ ತೇಜಸ್ವಿನಿ ಪ್ರಕಾಶ್

By ಅನಿತಾ ಬನಾರಿ

ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಾಯಿಯಾಗಿದ್ದು ಇದೀಗ ನಾಮಕರಣದ ಸಂಭ್ರಮಾಚರಣೆಯಲ್ಲಿ ಇದ್ದಾರೆ. ಸಿನಿಮಾ ಮೂಲಕ ನಟನೆಗೆ ಕಾಲಿಟ್ಟು ಕಿರುತೆರೆಯಲ್ಲಿ ಮಿಂಚಿದ ನಟಿಯರ ಪೈಕಿ ತೇಜಸ್ವಿನಿ ಪ್ರಕಾಶ್ ಕೂಡಾ ಒಬ್ಬರು.

ನಟಿ ತೇಜಸ್ವಿನಿ ಪ್ರಕಾಶ್, ಫಣಿ ವರ್ಮ ಎಂಬುವವರ ಜೊತೆ ಸಪ್ತಪದಿ ತಿಳಿದಿದ್ದರು. ಇದೀಗ ತಮ್ಮ ಜೀವನದ ಬಹಳ ಸಂತೋಷದ ಸಂದರ್ಭವನ್ನು ಎಂಜಾಯ್ ಮಾಡುತ್ತಿದ್ದಾರೆ. ದಾಂಪತ್ಯ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ.

Actress Tejaswini Prakash revealed her daughter name

ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ತೇಜಸ್ವಿನಿ ಪ್ರಕಾಶ್ ಅವರು ಇದೀಗ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಹೌದು, ನಟಿ ತೇಜಸ್ಬಿನಿ ಪ್ರಕಾಶ್ ಅವರು ತಮ್ಮ ಮಗಳಿಗೆ ಅನ್ವಿಕಾ ವರ್ಮ ಎಂಬ ಹೆಸರಿಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಂತೂ ಬಹಳಷ್ಟು ಆ್ಯಕ್ಟಿವ್ ಇರುವ ನಟಿ ತೇಜಸ್ವಿನಿ ಪ್ರಕಾಶ್ "ದೇವತೆಗಳು ಮಕ್ಕಳ ರೂಪದಲ್ಲಿ ನಮ್ಮನ್ನು ಸೇರುತ್ತಾರೆ" ಎಂದು ಬರೆದುಕೊಂಡಿದ್ದಾರೆ. ಇನ್ನು ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ನಟಿ ತೇಜಸ್ವಿನಿ ಪ್ರಕಾಶ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ. ಬಣ್ಣದ ಲೋಕದ ನಂಟು ಬೆಳೆಸಿಕೊಳ್ಳುತ್ತಾರೆ ಅನ್ನೋದು ಕಿರುತೆರೆ ವೀಕ್ಷಕರ ಸದ್ಯದ ಕುತೂಹಲ.

ಇನ್ನು ನಿಹಾರಿಕಾ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ನಟಿ ತೇಜಸ್ವಿನಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಿಹಾರಿಕಾ' ಧಾರಾವಾಹಿಯಲ್ಲಿ ನಾಯಕಿ ನಿಹಾರಿಕಾಳಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ನಟಿ ತೇಜಸ್ವಿನಿ. ಮುಂದೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಈಕೆ 28ನೇ ದಿನಕ್ಕೆ ಎಲಿಮಿನೇಟ್ ಆಗಿ ಮನೆಯಿಂದ ಹೊರಬಿದ್ದರು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕ ಅಗಸ್ತ್ಯನ ಅತ್ತೆ ಮಗಳು ಲಾವಣ್ಯ ಆಗಿ ಅಭಿ‌ನಯಿಸಿದ್ದ ಈಕೆ ಮೊದಲ ಬಾರಿಗೆ ಖಳನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡರು. ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ತೇಜಸ್ವಿನಿ ಅವರ ನಟನಾ ಪಯಣ ಶುರುವಾಗಿದ್ದು 'ಮಸಣದ ಮಕ್ಕಳು' ಸಿನಿಮಾದ ಮೂಲಕ.

'ಗಜ', 'ಈ ಪ್ರೀತಿ ಏಕೆ ಭೂಮಿ ಮೇಲಿದೆ', 'ಮಾತಾಡ್ ಮಾತಾಡ್ ಮಲ್ಲಿಗೆ', 'ಸವಿ ಸವಿ ನೆನಪು', 'ಬಂಧು ಬಳಗ', 'ಅರಮನೆ', 'ಜೊತೆಯಾಗಿ ಹಿತವಾಗಿ', 'ತರಂಗಿಣಿ', 'ಪ್ರೀತಿ ನೀ ಹೀಗೇಕೆ', 'ಕಿಲಾಡಿ ಕೃಷ್ಣ', 'ನಂದಗೋಕುಲ', 'ಕಲ್ಯಾಣಮಸ್ತು', 'ಮಿ.ಪ್ರೇಮಿ', 'ಗೂಳಿಹಟ್ಟಿ', 'ನಿತ್ಯಾ ಜೊತೆ ಸತ್ಯಾ' ಹಾಗೂ 'ಡಯಾನಾ ಹೌಸ್' ಸಿನಿಮಾದಲ್ಲಿ ನಟಿಸಿದ್ದಾರೆ. 'ಗೂಳಿಹಟ್ಟಿ'ಯ ಪಾತ್ರಕ್ಕೆ ಸೈಮಾ ಅವಾರ್ಡ್ ಕೊಡ ಮಾಡುವ ಬೆಸ್ಟ್ ಸಪೋರ್ಟಿಂಗ್ ನಟಿ ಪ್ರಶಸ್ತಿಯನ್ನು ಈಕೆ ಪಡೆದುಕೊಂಡಿದ್ದಾರೆ.

More from Filmibeat

English summary
TV actress Tejaswini Prakash says that angels join us in the form of children
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X