Tejaswini Prakash; ಒಂದು ವರ್ಷದ ನಂತರ ಮಗಳ ಫೋಟೊ ಹಂಚಿಕೊಂಡ ತೇಜಸ್ವಿನಿ ಪ್ರಕಾಶ್..!

By ಪ್ರಿಯಾ ದೊರೆ

ನಟಿ ತೇಜಸ್ವಿನಿ ಪ್ರಕಾಶ್ ಅವರು ಕಿರುತೆರೆಯಿಂದ ದೂರ ಸರಿದು ಅದಾಗಲೇ ಎರಡು ವರ್ಷಗಳು ಕಳೆದಿವೆ. ಯಾವಾಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ತೇಜಸ್ವಿನಿ ಅವರು ತಮ್ಮ ಫ್ಯಾಮಿಲಿ ಹೆಚ್ಚು ಸಮಯವನ್ನು ಕೊಡುತ್ತಿದ್ದು, ಬ್ಯುಸಿಯಾಗಿರುತ್ತಾರೆ. ತಮ್ಮ ಮೊದಲ ಮಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ಕಳೆದ ವರ್ಷ ತೇಜಸ್ವಿನಿ ಅವರು ತಮ್ಮ ಚೊಚ್ಚಲ ಮಗುವಿಗೆ ಜನ್ಮ ನೀಡಿದರು. ಮಗಳ ಮುಖವನ್ನು ಇದೀಗ ರಿವೀಲ್ ಮಾಡಿರುವ ತೇಜಸ್ವಿನಿ ಅವರು ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಮಗಳ ಮುಖ ರಿವೀಲ್ ಮಾಡಿದ ನಟಿ

ಕಳೆದ ಒಂದು ವರ್ಷದಿಂದ ಮಗಳ ಜೊತೆಗೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದರೂ ಕೂಡ ಎಂದಿಗೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇಂದು ತಮ್ಮ ಮಗಳು ಅನ್ವಿಕಾ ವರ್ಮಾಳ ಮೊದಲ ಹುಟ್ಟುಹಬ್ಬ. ಹೀಗಾಗಿ ಮಗಳ ಮುದ್ದಾದ ಫೋಟೋವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ, ಮಗಳ ಮೊದಲ ಹುಟ್ಟುಹಬ್ಬಕ್ಕೆ ತೇಜಸ್ವಿನಿ ಅವರು ಶುಭ ಹಾರೈಸಿದ್ದಾರೆ.

actress tejaswini prakash reveals her daughter photo

ತೇಜಸ್ವಿನಿ ಬಣ್ಣದ ಲೋಕದ ಪಯಣ

ಕನ್ನಡದ ನಟಿ ತೇಜಸ್ವಿನಿ ಪ್ರಕಾಶ್ ಸದ್ಯ ಕನ್ನಡದ ಬೆಳ್ಳಿತೆರೆ ಹಾಗೂ ಕಿರುತೆರೆಯಿಂದ ದೂರ ಸರಿದಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹಲವು ಕಾಲ ನಟಿಸಿರುವ ನಟಿ ತೇಜಸ್ವಿನಿ ಅವರು ಮದುವೆಯಾದ ಬಳಿಕ ಕ್ಯಾಮರಾದಿಂದ ದೂರ ಉಳಿದಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿದ್ದ ತೇಜಸ್ವಿನಿ ಅವರು ಹಲವು ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. 2008ರಲ್ಲಿ ತೆರೆಕಂಡ ದರ್ಶನ್ ಅಭಿನಯದ ಗಜ ಚಿತ್ರದ ಮೂಲಕ ತೇಜಸ್ವಿನಿ ಪ್ರಕಾಶ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು. ಬಳಿಕ ವಿಷ್ಣುವರ್ಧನ್ ಅಭಿನಯದ ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಬಂಧು ಬಳಗ, ನಿತ್ಯ ಜತೆ ಸತ್ಯ, ಅರಮನೆ ಮೊದಲಾದ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಬರ್ಟ್ ಚಿತ್ರದಲ್ಲಿ ಚಾಲೇಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಟಿಸಿದ್ದಾರೆ. ಇನ್ನು ಕನ್ನಡ, ತೆಲುಗು ಸೇರಿದಂತೆ ಇದುವರೆಗೂ 22 ಚಿತ್ರಗಳಲ್ಲಿ ತೇಜಸ್ವಿನಿ ಅವರು ನಟಿಸಿದ್ದಾರೆ.


ಬಿಗ್ ಬಾಸ್ ಸ್ಫರ್ಧಿಯಾಗಿದ್ದ ನಟಿ

ಕಳೆದ ಕೆಲ ವರ್ಷಗಳ ಹಿಂದೆ ಕಿರುತೆರೆಗೂ ಎಂಟ್ರಿ ಕೊಟ್ಟ ತೇಜಸ್ವಿನಿ ಪ್ರಕಾಶ್ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ನಿಹಾರಿಕಾ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಬಳಿಕ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೂ ಮುನ್ನ ತೇಜಸ್ವಿನಿ ಅವರು ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ತೇಜಸ್ವಿನಿ ಅವರ ಜೊತೆಗೆ ನಟ ಜಯರಾಮ್ ಕಾರ್ತಿಕ್, ನಟಿ ಕಾರುಣ್ಯ ರಾಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮಗಳ ಜೊತೆಗೆ ತೇಜು ಬ್ಯುಸಿ

2022ರಲ್ಲಿ ತೇಜಸ್ವಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಬಾಲ್ಯದ ಸ್ನೇಹಿತನಾದ ಫಣಿ ವರ್ಮ ನದೀಮ್ಪಳ್ಳಿ ಎಂಬುವರೊಂದಿಗೆ ಹಸೆಮಣೆ ಏರಿದ ತೇಜಸ್ವಿನಿ ಅವರು ಬಣ್ಣದ ಲೋಕದಿಂದ ಬ್ರೇಕ್ ಪಡೆದರು. ತದ ನಂತರ ತೇಜಸ್ವಿನಿ ಪ್ರಕಾಶ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿರುತ್ತಾರೆ. ವರ್ಕೌಟ್, ರೀಲ್ಸ್ ಗಳನ್ನು ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಅದರಲ್ಲೂ ಹೆಚ್ಚಾಗಿ ತಮ್ಮ ಮಗಳೊಂದಿಗೆ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X