Tejaswini Prakash: ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ತೇಜಸ್ವಿನಿ ಪ್ರಕಾಶ್
ಕಿರುತೆರೆಯಲ್ಲಿ ಹಾಗೂ ಹಿರಿತೆರೆಯಲ್ಲಿ ಮಿಂಚಿದ ನಟಿ ತೇಜಸ್ವಿನಿ ಪ್ರಕಾಶ್, ಅನೇಕ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾದ್ದಾರೆ. ಇವರಿಗೆ ಸಾಕಷ್ಟು ಅಭಿಮಾನಿಗಳು ಇದ್ದು ಇವರ ನಟನೆಗೆ ಫಿದಾ ಆಗಿದ್ದಾರೆ. ಅಷ್ಟರ ಮಟ್ಟಿಗೆ ನಟಿ ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಕಳೆದ ವರುಷ ಮದುವೆ ಆಗಿದ್ದ ತೇಜಸ್ವಿನಿ ಪ್ರಕಾಶ್, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು, ತಾನು ತಾಯಿ ಆಗುತ್ತಾ ಇರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ತೇಜಸ್ವಿನಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಇವರು 2022ರ ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಫಣಿ ವರ್ಮ ಎಂಬವರನ್ನು ಅದ್ದೂರಿಯಾಗಿ ಮದುವೆ ಆಗಿದ್ದರು.

ಮದುವೆಗೆ ನಟ ದರ್ಶನ್, ಪ್ರೇಮ್ ಮುಂತಾದ ಕಲಾವಿದರ ದಂಡೆ ಹರಿದು ಬಂದಿತ್ತು. ಇದೀಗ ತೇಜಸ್ವಿನಿ ಪ್ರಕಾಶ್ ತಾಯಿ ಆಗುತ್ತಾ ಇರುವುದನ್ನು ತಿಳಿದ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇನ್ನೂ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಂದ ಹಾರೈಕೆಯ ಮಹಾ ಪೂರಾ ಹರಿದುಬರುತ್ತಿದೆ.
ಅದ್ಭುತ ಅಭಿನಯದ ಮೂಲಕ ಸಿನಿಮಾರಂಗದಲ್ಲಿ ಮಿಂಚಿದ ನಟಿ
ತೇಜಸ್ವಿನಿ 2008ರಲ್ಲಿ ತೆರೆಕಂಡಿದ್ದ ನಟ ದರ್ಶನ್, ನವ್ಯಾ ನಾಯರ್ ನಟನೆಯ 'ಗಜ' ಚಿತ್ರದಲ್ಲಿ ನಟಿಸಿದ್ದರು. ಡಾ ವಿಷ್ಣುವರ್ಧನ್ ಜೊತೆಗೆ 'ಮಾತಾಡ್ ಮಾತಾಡು ಮಲ್ಲಿಗೆ', 'ಪ್ರೀತಿ ಏಕೆ ಭೂಮಿ ಮೇಲಿದೆ', ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಅರಮನೆ', ನೆನಪಿರಲಿ ಪ್ರೇಮ್ ಜೊತೆ ಸವಿ ಸವಿ ನೆನಪು ಸೇರಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವುಗಳ ಜೊತೆಗೆ ನನ್ನರಸಿ ರಾಧೆ ಎಂಬ ಧಾರಾವಾಹಿಯಲ್ಲಿ ಖಡಕ್ ವಿಲನ್ ರೋಲ್ ಮಾಡಿದ್ದರು.

ವಿಲನ್ ಪಾತ್ರದಲ್ಲಿ ಚಮಕ್ ಕೊಟ್ಟ ನಟಿ
'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಲಾವಣ್ಯಾ ಪಾತ್ರಧಾರಿಯಾಗಿ ನಟಿಸಿದ್ದರು. ಹಾಗೆಯೇ ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಶೋನಲ್ಲಿ ಕೂಡ ಇವರು ಭಾಗವಹಿಸಿದ್ದಾರೆ. ಈ ರಿಯಾಲಿಟಿ ಶೋ ನೋಡಿದ ಅನೇಕ ಜನರು ಇವರನ್ನು ಇಷ್ಟಪಟ್ಟಿದ್ದರು. ತೇಜಸ್ವಿನಿ ಪ್ರಕಾಶ್ ಬಿಗ್ ಬಾಸ್ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು.
ತೇಜಸ್ವಿನಿಗೆ ಶುಭಾಶಯ ತಿಳಿಸಿದ ಅಭಿಮಾನಿಗಳು
ಬಿಗ್ ಬಾಸ್ ಮನೆಯಲ್ಲಿ ತೇಜಸ್ವಿನಿ, ಆಶಿತಾ ಚಂದ್ರಪ್ಪ, ಜಯರಾಮ್ ಕಾರ್ತಿಕ್, ಜಗನ್ ಎಲ್ಲರೂ ಉತ್ತಮ ಸ್ನೇಹಿತರಾಗಿದ್ದರು. ಇನ್ನೂ ನನ್ನರಸಿ ರಾಧೆ ಧಾರಾವಾಹಿ ಬಳಿಕ ಮತ್ತೆ ಯಾವುದೇ ಧಾರಾವಾಹಿಯಲ್ಲಿ ನಟಿ ತೇಜಸ್ವಿನಿ ಕಾಣಿಸಿಕೊಂಡಿಲ್ಲ. ತಾನು ತಾಯಿಯಾಗುತ್ತಿರುವ ಸುದ್ದಿ ಹಂಚಿಕೊಂಡಿರುವ ಅವರಿಗೆ ಸಿಹಿ ಕಹಿ ಚಂದ್ರು ಶುಭಾಶಯಗಳನ್ನು ತಿಳಿಸಿದ್ದಾರೆ.


Click it and Unblock the Notifications











