ಆಕಸ್ಮಿಕವಾಗಿ ನಟನೆಗೆ ಕಾಲಿಟ್ಟ ತೇಜಸ್ವಿನಿ; ಇಂದು ಸೀರಿಯಲ್, ಸಿನಿಮಾದಲ್ಲಿ ಬ್ಯುಸಿ

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಿಕಾ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳಾಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ತೇಜಸ್ವಿನಿ ಶೇಖರ್. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ತೇಜಸ್ವಿನಿ ಶೇಖರ್ ಆರಂಭದಲ್ಲಿ ರಾಧಿಕಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದಲ್ಲ‌‌. ಬದಲಿಗೆ ಅರ್ಧದಲ್ಲಿ ಅವರು ಧಾರಾವಾಹಿಯ ತಂಡ ಸೇರಿದಾಕೆ.

ಹೌದು, 'ರಾಧಿಕಾ' ಧಾರಾವಾಹಿ ಆರಂಭವಾದಾಗ ಕಿರುತೆರೆ ನಟಿ ಕಾವ್ಯ ಶಾಸ್ತ್ರಿ ಅವರು ನಾಯಕಿ ರಾಧಿಕಾಳಾಗಿ ಅಭಿನಯಿಸಿದ್ದರು. ಮುಂದೆ ಕಾರಣಾಂತರಗಳಿಂದ ಕಾವ್ಯ ಶಾಸ್ತ್ರಿ ಅವರು ಧಾರಾವಾಹಿಯಿಂದ, ರಾಧಿಕಾ ಪಾತ್ರದಿಂದ ಹೊರಬಂದಾಗ ಆ ಪಾತ್ರಕ್ಕೆ ತೇಜಸ್ವಿನಿ ಶೇಖರ್ ಆಯ್ಕೆಯಾದರು. ಸದ್ಯ ರಾಧಿಕಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ತೇಜಸ್ವಿನಿ ಶೇಖರ್ ಯಾವತ್ತಿಗೂ ನಟಿಯಾಗಬೇಕು ಎಂದು ಬಯಸಿದವರಲ್ಲ.

Actress Tejaswini Shekar who got into acting by accident now busy in serials and movies

ಬದಲಿಗೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ತೇಜಸ್ವಿನಿ ಶೇಖರ್ ಅವರು ಮೊದಲು ಕಾಣಿಸಿಕೊಂಡಿದ್ದು 'ಸೌಭಾಗ್ಯವತಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೌಭಾಗ್ಯವತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಈಕೆ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.

ನಂತರ 'ಮಧುಬಾಲಾ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡ ತೇಜಸ್ವಿನಿ ಮುಂದೆ 'ಮಹಾನದಿ' ಧಾರಾವಾಹಿಯಲ್ಲಿ ನಾಯಕಿ ಮಧುರಾಳ ಅಕ್ಕ ಮೇಘನಾಳಾಗಿ ಕಾಣಿಸಿಕೊಂಡರು. ಪೋಷಕ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಈಕೆ ನಂತರ ಭಡ್ತಿ ಪಡೆದುದು ಖಳನಾಯಕಿಯಾಗಿ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ 'ನೀಲಿ'ಯಲ್ಲಿ ಖಳನಾಯಕಿಯಾಗಿ ಈಕೆ ನಟಿಸಿದ್ದರು.

Actress Tejaswini Shekar who got into acting by accident now busy in serials and movies

ನಂತರ ಶ್ರುತಿ ನಾಯ್ಡು ನಿರ್ದೇಶನದಡಿಯಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ನಾಯಕಿ ಜಿಲ್ಲಾಧಿಕಾರಿ ಇಂದಿರಾ ಸತ್ಯಮೂರ್ತಿ ಆಗಿ ಅಭಿನಯಿಸಿದ ಈಕೆ ಅಲ್ಲೂ ಮನೋ ನಟನೆಯ ಮೂಲಕ ವೀಕ್ಷಕರ ಮ‌ನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಿರುವ ಭಕ್ತಿಪ್ರಧಾನ ಧಾರಾವಾಹಿ 'ಶ್ರೀ ಉಧೋ ಉಧೋ ರೇಣುಕ ಯಲ್ಲವ್ವ' ದಲ್ಲಿ ರೇಣು ಮಹಾರಾಜನ ಮೂರನೇ ಪತ್ನಿ ಇಂದುಮತಿಯಾಗಿ ಬಣ್ಣ ಹಚ್ಚಿದ ತೇಜಸ್ವಿನಿ ಶೇಖರ್ ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು.

ನಂತರ "ರಾಧಿಕಾ" ಧಾರಾವಾಹಿಯಲ್ಲಿ ರಾಧಿಕಾಳಾಗಿ ನಟಿಸುವ ಅವಕಾಶ ಪಡೆದುಕೊಂಡ ಈಕೆ ಕನ್ನಡ ಕಿರುತೆರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸಿದ್ದಾರೆ. ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ತೇಜಸ್ವಿನಿ ಶೇಖರ್ ಮುಂದೆ ಕಿರುತೆರೆಯಿಂದ ಹಿರಿತೆರೆಗೆ 'ಲಾಂಗ್ ಡ್ರೈವ್' ಹೋದರು.

'ಲಾಂಗ್ ಡ್ರೈವ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ತೇಜಸ್ವಿನಿ ಶೇಖರ್ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಜೋಗ್ 101 ಸಿನಿಮಾದಲ್ಲಿಯೂ ಈಕೆ ನಟಿಸಿದ್ದು ವಿಜಯ್ ರಾಘವೇಂದ್ರ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಯಸದೇ ಕಿರುತೆರೆಗೆ ಕಾಲಿಟ್ಟು ಇಂದು ನಟಿಯಾಗಿ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆಯುತ್ತಿರುವ ನಟಿ ತೇಜಸ್ವಿನಿ ಶೇಖರ್ ಅವರ ನಟನಾ ಜರ್ನಿ ನಿರಂತರವಾಗಿ ಸಾಗಲಿ ಎಂಬುದು ನಮ್ಮ ಹಾರೈಕೆ.

More from Filmibeat

English summary
Actress Tejaswini Shekar who got into acting by accident now busy in serials and movies;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X