'ಅಂತರಪಟ' ಧಾರಾವಾಹಿಯ ನಾಯಕ ನಟಿ ಯಾರು? ಆಕೆಯ ಹಿನ್ನೆಲೆ ಏನು?

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಎಷ್ಟು ಕಲಾವಿದರು ಇದ್ದರೂ ಅದು ಕಡಿಮೆನೇ. ಒಂದೊಂದು ಪಾತ್ರದಲ್ಲಿ ಒಬ್ಬೊಬ್ಬರು ನಟಿಸುವಂತಾಗಿದೆ. ಮೊದಲು ಕಲಾವಿದರ ಸಂಖ್ಯೆ ತುಂಬಾ ಕಡಿಮೆ ಇತ್ತು. ಹೀಗಾಗಿ ಒಂದು ಧಾರಾವಾಹಿಯಲ್ಲಿ ತಾಯಿ ಪಾತ್ರ, ಮತ್ತೊಂದರಲ್ಲಿ ಅತ್ತೆಯ ಪಾತ್ರ. ಹೀಗೆ ಒಬ್ಬರೇ ಪುನರಾವರ್ತನೆ ಆಗುತ್ತಿದ್ದರು. ನಾಯಕ, ನಾಯಕಿಯರು ಬಿಟ್ಟು ಬೇರೆಲ್ಲರೂ ವಿವಿಧ ಪಾತ್ರಗಳನ್ನು ಮಾಡುತ್ತಿದ್ದರು.

ಈಗ ಹೀಗೆ ಒಬ್ಬರೇ ಕಲಾವಿದರು ಬೇರೆ ಬೇರೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿದೆ. ಆದರೆ, ಕನ್ನಡ ಮತ್ತು ಪರಭಾಷೆಗಳಲ್ಲಿ ಒಟ್ಟಿಗೆ ನಟಿಸುವುದನ್ನು ನೋಡಬಹುದಷ್ಟೇ. ಹಾಗಾಗಿ ಪ್ರತಿ ಬಾರಿ ಹೊಸ ಧಾರಾವಾಹಿ ಶುರುವಾಗಬೇಕು ಎಂದರೆ, ಹೊಸ ನಟ ಹಾಗೂ ನಟಿಯರು ಬೇಕೆ ಬೇಕು. ಅದರಲ್ಲೂ ಪ್ರಮುಖ ಪಾತ್ರಗಳಿಗೆ ಬಹಳ ಎಚ್ಚರಿಕೆಯಿಂದ ಪಾತ್ರಧಾರಿಗಳನ್ನು ಆರಿಸಬೇಕಾಗುತ್ತದೆ. ಯಾಕೆಂದರೆ, ಈಗ ಮೂಡಿ ಬರುವ ಧಾರಾವಾಹಿಗಳೆಲ್ಲವೂ 3ರಿಂದ 4 ವರ್ಷಗಳ ಕಾಲ ಪ್ರಸಾರ ಆಗುತ್ತವೆ. ಇದರಿಂದ ಪ್ರಮುಖ ಪಾತ್ರಗಳು ಒಂದೇ ಧಾರಾವಾಹಿಯಲ್ಲಿ ನಟಿಸುವುದು ಸಾಮಾನ್ಯವಾಗಿಬಿಟ್ಟಿದೆ.

Actress Thanviya Balaraj Debuts With colors kannada TV Serial Antharapata

ಇದರಿಂದ ಕಲಾವಿದರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಹಲವು ಹೊಸ ಧಾರಾವಾಹಿಗಳು ಕನ್ನಡ ಕಿರುತೆರೆಯಲ್ಲಿ ಪ್ರಾರಂಭವಾಗಿದ್ದು, ಇವುಗಳಲ್ಲಿ ಹೆಚ್ಚು ಹೊಸ ಕಲಾವಿದರೇ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿಯಲ್ಲಿ ಶುರುವಾದ 'ಭಾಗ್ಯಲಕ್ಷ್ಮೀ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿರುವ ಭೂಮಿಕಾ ಹೊಸ ಕಲಾವಿದೆ. 'ಒಲವಿನ ನಿಲ್ದಾಣ' ಧಾರಾವಾಹಿಯ ನಾಯಕಿ ನಟಿ ಅಮಿತಾ ಕುಲಾಲ್ ಕೂಡ ಹೊಸ ಪ್ರತಿಭೆಯೇ.

ಹೀಗೆ ಹೇಳುತ್ತಾ ಹೋದರೆ, ಹೊಸ ಧಾರಾವಾಹಿಯಲ್ಲಿ ಸಾಕಷ್ಟು ನಟ-ನಟಿಯರು ಹೊಸಬರೇ ಇದ್ದಾರೆ. ಇದೀಗ ಕಲರ್ಸ್ ಕನ್ನಡದಲ್ಲಿ ಮೂಡಿ ಬರಲಿರುವ ಮತ್ತೊಂದು ಹೊಚ್ಚ ಹೊಸ ಧಾರಾವಾಹಿಯಲ್ಲೂ ನಾಯಕ ನಟಿ ಹೊಸ ಕಲಾವಿದೆಯೇ. ಹಾಗಾದರೆ, ಯಾರು ಆಕೆ ಎಂದು ನೋಡೋಣ ಬನ್ನಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಅಂತರಪಟ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ಇದರ ಪ್ರೋಮೋವನ್ನು ಈಗಾಗಲೇ ವಾಹಿನಿ ಪ್ರಸಾರ ಮಾಡಿದ್ದು, ಇನ್ ಸ್ಟಾಗ್ರಾಂ ಪೇಜ್ ನಲ್ಲೂ ಹಂಚಿಕೊಂಡಿದೆ.

Actress Thanviya Balaraj Debuts With colors kannada TV Serial Antharapata

'ಅಂತರಪಟ' ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ನಟಿಸಿದ್ದಾರೆ. ಮಲ ತಂದೆಯ ನೆರಳಲ್ಲಿ ಬೆಳೆಯುವ ನಾಯಕಿ, ತನ್ನ ಅಪ್ಪನ ಕನಸನ್ನು ನನಸು ಮಾಡಲು ಮುಂದಾಗಿದ್ದಾಳೆ. ತನ್ನದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಿ, ನೂರಾರು ಜನರ ಬಾಳಿಗೆ ಬೆಳಕಾಗುವ ನಾಯಕಿಯ ಕಥೆಯನ್ನು 'ಅಂತರ ಪಟ' ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಧಾರಾವಾಹಿಯ ನಾಯಕಿ ಆರಾಧನಾ ಪಾತ್ರಕ್ಕೆ ಹೊಸ ಪ್ರತಿಭೆಯನ್ನು ತಂಡ ಹುಡುಕಿದೆ.

ಧಾರಾವಾಹಿಯಲ್ಲಿ ಆರಾಧನಾ ಪಾತ್ರ ಮಾಡುತ್ತಿರುವ ನಟಿಯ ನಿಜವಾದ ಹೆಸರು ತನ್ವಿಯಾ ಬಾಲರಾಜ್. ಮಂಡ್ಯ ಮೂಲದ ತನ್ವಿಯಾ ಚಿಕ್ಕ ವಯಸ್ಸಿನಿಂದಲೂ ನಟಿಯಾಗಬೇಕು ಎಂದು ಆಸೆ ಪಟ್ಟಿದ್ದರಂತೆ. ಇದೀಗ ಅವರ ಕನಸು ನನಸಾಗಿದೆ. ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಆಕೆಗೆ ಈಗಾಗಲೇ 4,728 ಮಂದಿಯ ಫಾಲೋವರ್ಸ್ ಇದ್ದಾರೆ. ಡ್ಯಾನ್ಸರ್ ಆಗಿರುವ ತನ್ವಿಯಾ ಅವರು, ಸಿಕ್ಕಾಪಟ್ಟೆ ರೀಲ್ಸ್‌ಗಳನ್ನು ಮಾಡಿದ್ದಾರೆ. ಇನ್ನು ತನ್ವಿಯಾ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಆಕೆಯ ಸ್ನೇಹಿತರೆಲ್ಲಾ ಈಗಾಗಲೇ ವಿಶ್ ಮಾಡಿದ್ದಾರೆ.

Actress Thanviya Balaraj Debuts With colors kannada TV Serial Antharapata

ವಿಭಿನ್ನ ಕಥೆಯನ್ನು ಹೊತ್ತು 'ಅಂತರಪಟ' ಧಾರಾವಾಹಿ ಮೂಡಿಬರಲಿದ್ದು, ಆದರೆ, ಯಾವಾಗ ಪ್ರಸಾರವಾಗುತ್ತೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕಲರ್ಸ್ ಕನ್ನಡ ವಾಹಿನಿ ನೀಡಿಲ್ಲ. ಪ್ರೋಮೋ ನೋಡಿಯೇ ಪ್ರೇಕ್ಷಕರು ಧಾರಾವಾಹಿಯನ್ನು ನೋಡಲು ಕಾತುರರಾಗಿದ್ದಾರೆ.

More from Filmibeat

English summary
Actress Thanviya Balaraj Debuts With colors kannada TV Serial Antharapata. Here is Thanviya Balaraj Biography. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X