For Quick Alerts
  ALLOW NOTIFICATIONS  
  For Daily Alerts

  ತಂದೆಯ ವಿರುದ್ಧವೇ ಹತ್ಯೆ ಯತ್ನದ ದೂರು ದಾಖಲಿಸಿದ ಧಾರಾವಾಹಿ ನಟಿ

  |

  ನನ್ನ ತಂದೆ ನನ್ನನ್ನು ಕೊಲ್ಲುವ ಯತ್ನ ಮಾಡಿದ್ದಾರೆ ಎಂದು ಹಿಂದಿ ಧಾರಾವಾಹಿಯ ನಟಿ ತೃಪ್ತಿ ಶಂಖಧರ್ ಪೊಲೀಸರಿಗೆ ದೂರು ನೀಡಿದ್ದಾರೆ.

  ಇನ್‌ಸ್ಟಾಗ್ರಾಂನಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿರುವ ನಟಿ ತೃಪ್ತಿ ಶಂಖಧರ್, 'ನನ್ನ ತಂದೆ ನನಗೆ ವಿಪರೀತ ಕಿರುಕುಳ ನೀಡುತ್ತಿದ್ದಾರೆ. ಹಾಗೂ ನನ್ನನ್ನು ಕೊಲ್ಲುವ ಯತ್ನ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

  ತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡ ಖ್ಯಾತ ಗಾಯಕ ಬಾದ್‌ಶಾತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡ ಖ್ಯಾತ ಗಾಯಕ ಬಾದ್‌ಶಾ

  ಪ್ರಸ್ತುತ ಬರೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನಟಿ, ಪೊಲೀಸರಿಂದ ಭದ್ರತೆಯನ್ನು ಸಹ ಕೇಳಿದ್ದಾರೆ. ಅಂತೆಯೇ ನಟಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

  ನಟಿ ಮಾತ್ರವಲ್ಲದೆ ಆಕೆಯ ತಾಯಿ, ತಂಗಿ, ಸಹೋದರ ಎಲ್ಲರೂ ಸಹ ಆರೋಪ ಮಾಡಿದ್ದು, ಎಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದೇವೆ, ನಮ್ಮ ಜೀವ ಅಪಾಯದಲ್ಲಿರುವ ಕಾರಣ ಹೀಗೆ ಮಾಡಿದ್ದೇವೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

  ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾ ನಂಟು: ಡ್ರಗ್ ಮಾರಾಟದಲ್ಲಿ ರಿಯಾ ಭಾಗಿ?ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾ ನಂಟು: ಡ್ರಗ್ ಮಾರಾಟದಲ್ಲಿ ರಿಯಾ ಭಾಗಿ?

  ಕುಂಕುಮ ಭಾಗ್ಯ ಧಾರಾವಾಹಿ ನಟಿ

  ಕುಂಕುಮ ಭಾಗ್ಯ ಧಾರಾವಾಹಿ ನಟಿ

  ಝೀ ಚಾನೆಲ್‌ನಲ್ಲಿ ಪ್ರಸಾರವಾಗುವ ಹಿಂದಿ ಧಾರಾವಾಹಿ ಕುಂಕುಮ ಭಾಗ್ಯದಲ್ಲಿ ನಟಿ ತೃಪ್ತಿ ಶಂಖಧರ್ ನಟಿಸುತ್ತಿದ್ದಾರೆ. ಅವರು ಒಂದು ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದೀಗ ಆಕೆ ತಂದೆಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.

  'ಕತ್ತಿಯಿಂದ ಕತ್ತರಿಸುವ ಯತ್ನ ಮಾಡಿದ್ದಾರೆ'

  'ಕತ್ತಿಯಿಂದ ಕತ್ತರಿಸುವ ಯತ್ನ ಮಾಡಿದ್ದಾರೆ'

  ತಂದೆಯ ಕುರಿತು ಐದು ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ನಟಿ ತೃಪ್ತಿ, 'ನನ್ನ ತಂದೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಕತ್ತಿಯಿಂದ ಕತ್ತರಿಸಲು ಸಹ ಯತ್ನಿಸಿದರು' ಎಂದಿರುವ ನಟಿ ಕೈ ಮೇಲೆ ಆಗಿರುವ ಗಾಯದ ಗುರುತು ಸಹ ವಿಡಿಯೋದಲ್ಲಿ ತೋರಿಸಿದ್ದಾರೆ.

  ಮದುವೆ ಆಗುವಂತೆ ಪೀಡಿಸುತ್ತಿದ್ದಾರೆ: ತೃಪ್ತಿ ಶಂಖಧರ್

  ಮದುವೆ ಆಗುವಂತೆ ಪೀಡಿಸುತ್ತಿದ್ದಾರೆ: ತೃಪ್ತಿ ಶಂಖಧರ್

  ಯಾವುದೋ ಹುಡುಗನೊಂದಿಗೆ ಮದುವೆ ಆಗುವಂತೆ ನನ್ನನ್ನು ಪೀಡಿಸುತ್ತಿದ್ದಾರೆ. ನನಗಿನ್ನೂ ಹತ್ತೊಂಬತ್ತು ವರ್ಷ ವಯಸ್ಸು. ನನಗೆ ಆ ವ್ಯಕ್ತಿಯೊಂದಿಗೆ ಮದುವೆ ಆಗಲು ಇಷ್ಟವಿಲ್ಲ. ಆದರೆ ಅಪ್ಪ ನನ್ನನ್ನು ಬಿಡುತ್ತಿಲ್ಲ. ನನಗೆ ಯಾರಾದರೂ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ ನಟಿ.

  ಹಣ ವಾಪಸ್ ಕೇಳುತ್ತಿದ್ದಾರೆ: ತೃಪ್ತಿ

  ಹಣ ವಾಪಸ್ ಕೇಳುತ್ತಿದ್ದಾರೆ: ತೃಪ್ತಿ

  ನನ್ನನ್ನು ನಟಿ ಆಗುವಂತೆ ಮುಂಬೈ ಗೆ ಕಳಿಸಿದ್ದರು. ನನ್ನ ಒಂದು ಸಿನಮಾ ಈಗಷ್ಟೆ ಬಿಡುಗಡೆ ಆಗಿದೆ. ನಟಿಯಾಗಲು ಖರ್ಚು ಮಾಡಿದ್ದ ಹಣವನ್ನೆಲ್ಲಾ ವಾಪಸ್ ಕೊಡು ಎಂದು ನನ್ನನ್ನು ಪೀಡಿಸುತ್ತಿದ್ದಾರೆ. ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿಲ್ಲ ಎಂದಿದ್ದಾರೆ ನಟಿ.

  ನಟಿಯ ತಾಯಿ-ಸಹೋದರಿರಿಂದಲೂ ಆರೋಪ

  ನಟಿಯ ತಾಯಿ-ಸಹೋದರಿರಿಂದಲೂ ಆರೋಪ

  ನಟಿಯ ತಾಯಿಯೂ ಸಹ ವಿಡಿಯೋದಲ್ಲಿ ಮಾತನಾಡಿದ್ದು, ಆತ ಬಹಳ ಅನುಮಾನದ ಪ್ರಾಣಿ. ಮನೆಯಲ್ಲಿ ಎಲ್ಲರಿಗೂ ಕಷ್ಟಗಳನ್ನು ಕೊಡುತ್ತಿದ್ದಾರೆ. ಮೊದಲಿನಿಂದಲೂ ಆತ ಹೀಗೆಯೇ ಇದ್ದ. ಆತನದ್ದು ಹಿಂಸಾತ್ಮಕ ಪ್ರವೃತ್ತಿ ಎಂದಿದ್ದಾರೆ. ನಟಿಯೂ ತನ್ನ ತಾಯಿ, ತಂಗಿ, ತಮ್ಮನನ್ನು ಕರೆದುಕೊಂಡು ಮನೆ ಬಿಟ್ಟು ಹೊರಗೆ ಹೋಗಿಬಿಟ್ಟಿದ್ದಾರೆ. ತಾವು ಸ್ವಿಚ್ಛೆಯಿಂದಲೇ ಮನೆ ಬಿಟ್ಟು ಬಂದಿದ್ದೇವೆ ಎಂದು ವಿಡಿಯೋ ಮಾಡಿ ಹೇಳಿದ್ದಾರೆ.

  English summary
  Actress Tripti Shankadhar lodged police complaint on her own father. She said he tries to kill her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X