For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಶೋಗೆ ಉಮಾಶ್ರೀ, ಕಲಾ ಸಾಮ್ರಾಟ್

  By Rajendra
  |

  ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ 'ಬಿಗ್ ಬಾಸ್' ಐದು ವಾರಕ್ಕೆ ಅಡಿಯಿಟ್ಟಿದೆ. ಈಗಾಗಲೆ ಸಖತ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮಕ್ಕೆ ಹಲವಾರು ತಾರೆಗಳು ಆಗಮಿಸಿ ತಮ್ಮ ಸಿಹಿಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

  ಈ ಭಾನುವಾರ (ಆಗಸ್ಟ್ 3) ಇಬ್ಬರು ಸೆಲೆಬ್ರಿಟಿಗಳು ಬಿಗ್ ಬಾಸ್ ಶೋಗೆ ಆಗಮಿಸುತ್ತಿದ್ದಾರೆ. ಅವರಲ್ಲಿ ಪ್ರತಿಭಾನ್ವಿತ ಕಲಾವಿದೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಸಹ ಒಬ್ಬರು. ಸರಿಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಅಭಿನೇತ್ರಿ. ಇನ್ನೊಬ್ಬ ಸೆಲೆಬ್ರಿಟಿ ಜನಪ್ರಿಯ ನಿರ್ದೇಶಕ ಹಾಗೂ ನಟ ಕಲಾ ಸಾಮ್ರಾಟ್ ಎಸ್ ನಾರಾಯಣ್. [ಬಿಗ್ ಬಾಸ್ 'ಸಖತ್ ಸಂಡೆ' ವಿತ್ ಪ್ರೇಮ್, ಅಮೂಲ್ಯಾ]

  ಉಮಾಶ್ರೀ ಅವರು ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಲಿದ್ದು ತಮ್ಮ ವೃತ್ತಿ ಜೀವನದ ಅನುಭವಗಳನ್ನೂ ಕಿರುತೆರೆ ವೀಕ್ಷಕರ ಜೊತೆ ಹಂಚಿಕೊಳ್ಳಲಿದ್ದಾರೆ. [ಬಿಗ್ ಬಾಸ್ ಮನೆಯೊಳಗೆ 'ಟ್ರಬಲ್ ಸ್ಟಾರ್' ಎಂಟ್ರಿ!]

  ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಉಮಾಶ್ರೀ ಅವರು ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು. ಇನ್ನು ಎಸ್ ನಾರಾಯಣ್ ಅವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರಸಾಹಿತಿಯಾಗಿ ಬಹುಮುಖಿ ಪ್ರತಿಭೆಯನ್ನು ತೋರಿದವರು.

  ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ 'ಶಬ್ದವೇದಿ', ವಿಷ್ಣುವರ್ಧನ್ ಅಭಿನಯದ 'ವೀರಪ್ಪ ನಾಯ್ಕ', ಹೊಸತನದದಿಂದ ಭಾರೀ ಯಶಸ್ಸುಗಳಿಸಿದ 'ಚೈತ್ರದ ಪ್ರೇಮಾಂಜಲಿ', 'ಚಂದ್ರ ಚಕೋರಿ' ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೊಂದು ಹೊಸ ಆಯಾಮ ಸೃಷ್ಟಿಸಿದ ಖ್ಯಾತಿ ನಾರಾಯಣ್‌ ಅವರದು. ಈ ಬಾರಿ ಬಿಗ್ ಬಾಸ್ ವೇದಿಕೆ ಮೇಲೆ ಈ ಎರಡು ಪ್ರತಿಭೆಗಳನ್ನು ನೋಡಬಹುದು. (ಒನ್ಇಂಡಿಯಾ ಕನ್ನಡ)
  English summary
  Sandalwood actress and Women and Child Development Minister Umashree and popular director S Narayan will be seen in Bigg Boss Kannda 2 on Sunday (03rd August), both are the celebrity guest of second week. The celebrities share the stage with host Sudeep on 'Sakkat Sunday with Sudeep'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X