ವೈಷ್ಣವಿ ಗೌಡ ಏನ್ ಚೆಂದ ಬೆಲ್ಲಿ ಡಾನ್ಸ್ ಮಾಡಿದ್ರು ಗೊತ್ತಾ? ವಿಡಿಯೋ ನೋಡಿ!
ಕನ್ನಡ ಕಿರುತೆರೆಯಲ್ಲಿ ಮನೆ ಮಗಳು ಎಂದೇ ಖ್ಯಾತಿ ಪಡೆದಿರುವ ನಟಿ ವೈಷ್ಣವಿ. ಅಗ್ನಿಸಾಕ್ಷಿಯ ಸನ್ನಿಧಿ ಪಾತ್ರ ಮೂಲಕ ವೈಷ್ಣವಿ ಇನ್ನೂ ಕೂಡ ಜನರ ಮನಸಲ್ಲಿ ಹಾಗೆ ಉಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿರುವ ನಟಿ ವೈಷ್ಣವಿ ಗೌಡ.
ನಾನ ಬಗೆಯ ರೀಲ್ಸ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಹಲವು ಸಿನಿಮಾಗಳ ಹಾಡುಗಳಿಗೂ ನಟಿ ವೈಷ್ಣವಿ ಆಗಾಗ ಸೊಂಕ ಬಳುಕಿಸುತ್ತಾರೆ. ಇತ್ತೀಚಿಗೆ ನಟ ಸುದೀಪ್, ಜಾಕ್ವೆಲಿನ್ ಡಾನ್ಸ್ ಮಾಡುವ ಇದಂತಹ 'ರಾ.. ರಾ.. ರಕ್ಕಮ್ಮ' ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು. ದಿಲ್ ಖುಷ್ ಆಗುವಂತೆ ಸ್ಟೆಪ್ ಹಾಕಿದ್ದರು.
ಹೀಗೆ ಒಂದಲ್ಲ ಒಂದು ವಿಡಿಯೋಗಳ ಮೂಲಕ ನಟಿ ವೈಷ್ಣವಿ ಕಿಚ್ಚು ಹಚ್ಚುತ್ತಾರೆ. ಇದೀಗ ಮತ್ತೊಮ್ಮೆ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಕಣ್ಣು ಕುಕ್ಕಿದ್ದಾರೆ. ತಮಿಳಿನ 'ಬೀಸ್ಟ್' ಚಿತ್ರದ ಹಾಡಿನ ಸಂಗೀತಕ್ಕೆ ವೈಷ್ಣವಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಂನಲ್ಲಿ ಒಡವೆ ತೊಟ್ಟು ಅಲಂಕಾರ ಮಾಡಿಕೊಂಡು, ಬೆಲ್ಲಿ ಡ್ಯಾನ್ಸ್ ಮಾಡಿ ಬೀಗಿದ್ದಾರೆ.

ಆರಂಭದಲ್ಲಿ ಕೇವಲ ಧಾರವಾಹಿ ಮೂಲಕ ಎಲ್ಲರ ಮನೆಮಾತಾಗಿದ್ದ ವೈಷ್ಣವಿ ಗೌಡ ಅವರು ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಅಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.ಆದರೆ ಬೆಳ್ಳಿ ಪರದೆ ಮೇಲೆ ನಟಿಯಾಗಿ ಮುಂದುಯುವ ಅದೃಷ್ಟ ಮಾತ್ರ ಇನ್ನೂ ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಆ್ಯಕ್ಟಿವ್ ಆಗಿ ಇದ್ದು ತಮ್ಮ ಅಭಿಮಾನಿಗಳಿಗೆ ಸದಾ ಹತ್ತಿರವಾಗಿ ಇರುತ್ತಾರೆ.

ಇನ್ನು ನಿವೇದಿತಾ ಗೌಡ ಜೊತೆಗೂ ಸೋಷಿಯಲ್ ಮೀಡಿಯಾದಲ್ಲೊ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಇತ್ತೀಚಿಗೆ ಯುಟ್ಯೂಬ್ ಚಾನೆಲ್ ಕೂಡ ತೆರೆದಿದ್ದಾರೆ. ಈ ಯು ಟ್ಯೂಬ್ ಚಾನೆಲ್ ನಲ್ಲಿ ವೈಷ್ಣವಿ ಹತ್ತಾರು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಸದ್ಯ ಅವರು ಮಾಡಿರುವ ಬೆಳ್ಳಿ ಡಾನ್ಸ್ ವಿಡಿಯೋ ವೈರಲ್ ಲಿಸ್ಡ್ ಸೇರಿದೆ. ವೈಷ್ಣವಿ ನೃತ್ಯ ಕಲೆಗೆ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











