ಹೊಸ ಮನೆ ಖರೀದಿಸಿ ಗೃಹ ಪ್ರವೇಶ ಮಾಡಿದ ವೈಷ್ಣವಿ ಗೌಡ!

By ಪ್ರಿಯಾ ದೊರೆ

ಧಾರಾವಾಹಿ ಮೂಲಕ ಅಭಿನಯ ಆರಂಭಿಸಿದ ನಟಿ ವೈಷ್ಣವಿಗೌಡ ಇಂದು ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ತಮ್ಮಿಷ್ಟದ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ನೆರವೇರಿಸಿದ್ದಾರೆ. ಈ ವೇಳೆ ಅವರ ಸೀರಿಯಲ್ ಜರ್ನಿ ಹೇಗಿತ್ತು ಅನ್ನೋದನ್ನು ನೋಡೋಣ ಬನ್ನಿ..

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನಟನೆ ಆರಂಭಿಸಿದ ವೈಷ್ಣವಿ ಗೌಡ ಅವರು ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿ. ವೈಷ್ಣವಿ ಗೌಡ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಮತ್ತೆ ವೈಷ್ಣವಿ ನಟನೆ ಮಾಡಬೇಕು, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.

'ಅಗ್ನಿಸಾಕ್ಷಿ' ಸನ್ನಿಧಿ ಎಂದೇ ಚಿರಪರಿಚಿತರಾದ ವೈಷ್ಣವಿ ಗೌಡ ಅವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಮದುವೆಯಾಗಲು ತುದಿಗಾಲಿನಲ್ಲಿ ನಿಂತಿರುವ ವೈಷ್ಣವಿ ಕೆಲವೇ ತಿಂಗಳಲ್ಲಿ ಮದುವೆ ಕೂಡ ಆಗಲಿದ್ದಾರಂತೆ.

ಕನಸಿನ ಮನೆ ಖರೀದಿಸಿದ ಚೆಲುವೆ ವೈಷ್ಣವಿ ಗೌಡ!

ವೈಷ್ಣವಿ ಗೌಡ ಬಿಗ್ ಬಾಸ್‌ನಲ್ಲಿದ್ದಾಗ ಮನೆ ಖರೀದಿಸುವ ಆಸೆ ಇದೆ ಎಂದು ಹೇಳುತ್ತಿದ್ದರು. ಅದರಂತೆಯೇ ವೈಷ್ಣವಿ ಗೌಡ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾರೆ. ಈ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಮೇ 8 ರಂದು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಸಮಾರಂಭದಲ್ಲಿ ಬಿಗ್ ಬಾಸ್ ಸ್ನೇಹಿತರು ಹಾಗೂ ಅಗ್ನಿ ಸಾಕ್ಷಿ ಬಳಗ ಸೇರಿದಂತೆ ಸೆಲೆಬ್ರೆಟಿಗಳು ಆಗಮಿಸಿ, ವೈಷ್ಣವಿ ಅವರಿಗೆ ಶುಭ ಹಾರೈಸಿದ್ದಾರೆ.

ಅಭಿಮಾನಿಗಳ ಜೊತೆ ವೈಷ್ಣವಿ ಸದಾ ಸಂಪರ್ಕ

ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ವೈಷ್ಣವಿ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ವೈಷ್ಣವಿ ಗೌಡ, ಇತ್ತೀಚೆಗಷ್ಟೇ ಕಲ್ಪನಾ ಹಾಗೂ ಗಂಗೂಭಾಯಿ ಕಾಠಿಯಾವಾಡಿ ಲುಕ್ ರೀ-ಕ್ರಿಯೇಟ್ ಮಾಡಿದ್ದರು. ಅಭಿಮಾನಿಗಳಿಗೆ ಇಷ್ಟವಾಗುವಂತೆ ಇನ್‌ಸ್ಟಾಗ್ರಾಂನಲ್ಲಿ ಆಗಾಗ ರೀಲ್ಸ್ ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ವೈಷ್ಣವಿಗೆ ದೇವರ ಮೇಲೆ ನಂಬಿಕೆ!

ವೈಷ್ಣವಿ ಗೌಡ ಅವರಿಗೆ ದೇವರ ಮೇಲೆ ಅಪಾರವಾದ ನಂಬಿಕೆ ಇದೆ. ಅವರು ಆಗಾಗ ವೃತ ಮಾಡುತ್ತಾರೆ. ದಿನಪೂರ್ತಿ ಉಪವಾಸವನ್ನೂ ಮಾಡುವ ಅಭ್ಯಾಸ ವೈಷ್ಣವಿ ಅವರಿಗಿದೆ. ದೇವಿ ಧಾರಾವಾಹಿಯಲ್ಲಿ ನಟಿಸುವಾಗಲೂ ವೈಷ್ಣವಿ ಅವರು ತುಂಬಾ ಭಕ್ತಿಯಿಂದ ಅಭಿನಯಿಸಿದ್ದರು. ತಾನು ಕೊಂಚ ಟಿಪಿಕಲ್ ಹುಡುಗಿ ಎಂದು ತಮ್ಮ ಯೂಟ್ಯೂಬ್ ಚಾನಲ್‌ ವೀಡಿಯೋ ಒಂದರಲ್ಲಿ ವೈಷ್ಣವಿ ಅವರೇ ಹೇಳಿಕೊಂಡಿದ್ದಾರೆ. ಟಿಪಿಕಲ್ ಹುಡುಗಿ ಆಗಿರುವುದರಿಂದ ತಮಗೆ ಹೊಂದುವಂತಹ ಹುಡುಗ ಬೇಕು ಎಂದೂ ಸಹ ಹೇಳಿದ್ದಾರೆ.

ವೈಷ್ಣವಿ ಸಿನಿಮಾ, ಧಾರಾವಾಹಿಯಲ್ಲಿ ಬ್ಯುಸಿ!

ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ ನಂತರ ವೈಷ್ಣವಿ ಗೌಡ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದಾರೆ. ಇದರಲ್ಲಿ ವೈಷ್ಣವಿ, ತಮ್ಮ ಡೈಲಿ ರೋಟಿನ್, ವರ್ಕೌಟ್, ಯೋಗದ ಬಗ್ಗೆ ವಿಡಿಯೋ ಮಾಡುತ್ತಿರುತ್ತಾರೆ. ಕೆಲ ಸೆಲಬ್ರಿಟಿಗಳ ಜೊತೆಗೂ ವಿಡಿಯೋ ಮಾಡುತ್ತಾರೆ. ಇತ್ತೀಚೆಗಷ್ಟೇ 'ಬಹುಕೃತ ವೇಷಂ' ಸಿನಿಮಾದಲ್ಲಿ ನಟಿಸಿರುವ ವೈಷ್ಣವಿ ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ. ಈಗಾಗಲೇ ಧಾರಾವಾಹಿಯ ಶೂಟಿಂಗ್ ಆರಂಭವಾಗಿದೆಯಂತೆ. ಕೆಎಸ್ ರಾಮ್ ಜೀ ನಿರ್ದೇಶನದ 'ಡಾಕ್ಟರ್ ಕರ್ಣ' ಎಂಬ ಧಾರಾವಾಹಿಯಲ್ಲಿ ವೈಷ್ಣವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

More from Filmibeat

English summary
Actress Vaishnavi Gowda New House Warming Ceremony, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X