ಶಾಲೆಯ ಯೂನಿಫಾರಂ ತೊಟ್ಟು ಮಿಂಚಿದ ವೈಷ್ಣವಿ ಗೌಡ; 'ಚೆಲುವಿನ ಚಿತ್ತಾರ-2' ಫಿಕ್ಸ್ ಎಂದ ನೆಟ್ಟಿಗರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಸೀತಾರಾಮ' ಕೂಡಾ ಒಂದು. 'ಸೀತಾರಾಮ' ಧಾರಾವಾಹಿಯಲ್ಲಿ ನಾಯಕಿ ಸೀತಾಳಾಗಿ ಅಭಿನಯಿಸುತ್ತಿರುವ ವೈಷ್ಣವಿ ಗೌಡ ನಟನೆಯ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆಡಗಿ. ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 1.4 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ವೈಷ್ಣವಿ ಗೌಡ ಇದೀಗ ಹೊಸ ಫೋಟೋಶೂಟ್ ಮೂಲಕ ಮೋಡಿ ಮಾಡುತ್ತಿದ್ದಾರೆ.
ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿರುವ ವೈಷ್ಣವಿ ಗೌಡ ಸ್ಕೂಲ್ ಹುಡುಗಿಯಾಗಿ ಮೋಡಿ ಮಾಡುತ್ತಿದ್ದಾರೆ. ಹೌದು, ಪಕ್ಕಾ ಸ್ಕೂಲ್ ಹುಡುಗಿಯಂತೆ ಯೂನಿಫಾರ್ಮ್, ಎರಡು ಜಡೆ ಕಟ್ಟಿ ಸಣ್ಣ ಹುಡುಗಿಯಂತೆ ಫೋಟೋಕ್ಕೆ ಪೋಸ್ ಕೊಟ್ಟಿರುವ ವೈ಼ಷ್ಣವಿ ಇದಕ್ಕೆ "ಸ್ಕೂಲ್ ಡೇಸ್ ಆರ್ ದಿ ಬೆಸ್ಟ್" ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ಕೇವಲ ನಾಲ್ಕು ಗಂಟೆಯ ಹಿಂದೆಯಷ್ಟೇ ವೈ಼ಷ್ಣವಿ ಗೌಡ ಅವರು ಇನ್‌ಸ್ಟಾಗ್ರಾಂನಲ್ಲಿ ಇದನ್ನು ಹಂಚಿಕೊಂಡಿದ್ದು 38 ಸಾವಿರಕ್ಕೂ ಅಧಿಕ ಜನ ಲೈಕ್ಸ್ ಕೊಟ್ಟಿದ್ದಾರೆ. ಜೊತೆಗೆ ಈ ಫೋಟೋವನ್ನು 134 ಮಂದಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇದರ ಜೊತೆಗೆ ಬ್ಯೂಟಿಫುಲ್, ಮುದ್ದಾದ ಬೊಂಬೆ ಹುಡುಗಿ, ನನ್ನ ಫೇವರಿಟ್ ನಟಿ, ಐಶೂ.. ಅಲ್ಲ ವೈಶೂ, ಚೆಲುವಿನ ಚಿತ್ತಾರ-2 ಸಿನಿಮಾ ಮಾಡಿದ್ರೆ ವೈಷ್ಣವಿ ಗೌಡನೇ ಹೀರೋಯಿನ್ ಎಂಬಿತ್ಯಾದಿ ಕಾಮೆಂಟ್‌ಗಳು ಈ ಫೋಟೋಕ್ಕೆ ಬಂದಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ಮೋಡಿ ಮಾಡಿದ್ದ ವೈಷ್ಣವಿ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 8' ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದರು.
'ದೇವಿ' ಧಾರಾವಾಹಿಯ ನಾಯಕಿಯಾಗಿ ನಟನೆಯ ನಂಟು ಬೆಳೆಸಿಕೊಂಡಿರುವ ವೈಷ್ಣವಿ ಗೌಡ ಅವರಿಗೆ ಜನಪ್ರಿಯತೆ ನೀಡಿದ್ದು 'ಅಗ್ನಿಸಾಕ್ಷಿ' ಧಾರಾವಾಹಿ. 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿಯಾಗಿ ನಟಿಸಿದ ಈಕೆ ಇಂದಿಗೂ ಆ ಪಾತ್ರದ ಮೂಲ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ಬರೋಬ್ಬರಿ ಆರು ವರ್ಷಗಳ ಕಾಲ ಸನ್ನಿಧಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ವೈಷ್ಣವಿ ನಿರೂಪಕಿಯಾಗಿ ಮೋಡಿ ಮಾಡಿದ ಬೆಡಗಿ.
ಸ್ಟಾರ್ ಸುವರ್ಣ ವಾಹಿನಿ ಪ್ರಸಾರವಾಗುತ್ತಿದ್ದ 'ಭರ್ಜರಿ ಕಾಮಿಡಿ' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಈಕೆ ಕಾಣಿಸಿಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ವೀಕ್ಷಕರನ್ನು ರಂಜಿಸಿರುವ ಈಕೆ 'ಗಿರ್ ಗಿಟ್ಲೆ' ಸಿನಿಮಾದ ಮೂಲಕ ಹಿರಿತೆರೆಗೂ ಹಾರಿದ್ದಾರೆ. ಇದರ ಜೊತೆಗೆ "ಬಹುಕೃತವೇಷಂ" ಎನ್ನುವ ಸಿನಿಮಾದಲ್ಲಿಯೂ ವೈಷ್ಣವಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











