Vaishnavi Gowda: ಸ್ಕಿನ್ ಕೇರ್‌ಗೆ ಹಲವು ಟಿಪ್ಸ್ ನೀಡಿದ ನಟಿ ವೈಷ್ಣವಿ ಗೌಡ, ನಿಮಗೂ ಉಪಯೋಗವಾಗಬಹುದು ನೋಡಿ!
ನಟಿ ವೈಷ್ಣವಿ ಗೌಡ ಅಭಿಮಾನಿಗಳ ನಿದ್ದೆ ಕದ್ದ ಚೆಲುವೆ ಎಂದು ಹೇಳಿದರೆ ತಪ್ಪಾಗದು. ಹೌದು ದಿನೇ ದಿನೇ ತನ್ನ ಅಂದವನ್ನು ಹೆಚ್ಚಿಸಿಕೊಂಡಿರುವ ನಟಿ. ನಟನೆ ಜೊತೆಗೆ ವೈಷ್ಣವಿ ಗೌಡ ನೋಡಲು ಬಹಳ ಸುಂದರಿ. ಮೊದಲು ಇವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ದೇವಿ ಧಾರವಾಹಿ ಮೂಲಕ ಅಭಿಮಾನಿಗಳಿಗೆ ಹತ್ತಿರ ಆಗಿದ್ದರು. ಆದರೆ ಅದಾದ ಬಳಿಕ ಪುನರ್ ವಿವಾಹ ಎಂಬ ಧಾರಾವಾಹಿ ಮೂಲಕ ಮಿಂಚಿದರು.
ಬಳಿಕ ಅಗ್ನಿಸಾಕ್ಷಿ ಎಂಬ ಧಾರಾವಾಹಿಯಲ್ಲಿ ನಟನೆ ಮಾಡಿ ಮತ್ತಷ್ಟು ಫೇಮಸ್ ಆದರು. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಎಂದು ಸಖತ್ ಫೇಮಸ್ ಆಗಿದ್ದ ನಟಿ ಇದೀಗ ಸೀತಾ ರಾಮ ಧಾರಾವಾಹಿಯಲ್ಲಿ ಎಲ್ಲರ ಮನಸನ್ನು ಗೆದ್ದಿದ್ದಾರೆ ಎಂದರೆ ತಪ್ಪಾಗದು. ಇದೀಗ ವೈಷ್ಣವಿ ಗೌಡ ತಮ್ಮ ತ್ವಚೆಯನ್ನು ಬಹಳ ಕೇರ್ ಮಾಡುತ್ತಾರೆ ಎಂಬುವುದಕ್ಕೆ ಇದೆ ಸಾಕ್ಷಿ.

ಹೌದು ವೈಷ್ಣವಿ ಗೌಡ ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ರಾತ್ರಿ ಯಾವ ರೀತಿ ಸ್ಕಿನ್ ಕೇರ್ ಮಾಡಿದರೆ ಒಳ್ಳೆಯದು ಎಂಬುವುದರ ಮಾಹಿತಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಇನ್ನೂ ವೈಷ್ಣವಿ ಗೌಡ ಪ್ರಕಾರ ಹಗಲಿನಂತೆಯೇ ರಾತ್ರಿಯ ಹೊತ್ತು ಕೂಡ ಸ್ಕಿನ್ ಕೇರ್ ಮಾಡುವುದು ಉತ್ತಮ ಎಂದು ಯುಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ಯಾವ ರೀತಿ ತಮ್ಮ ಸ್ಕಿನ್ ಅನ್ನು ಕಾಪಾಡಿಕೊಳ್ಳಬೇಕು ಎಂಬುವುದನ್ನು ತಿಳಿಸಿದ್ದಾರೆ.
ಸ್ಕಿನ್ ಕೇರ್ ಮಾಡಲು ಹೇಳಿದ ವೈಷ್ಣವಿ
ಇನ್ನೂ ಹಲವಾರು ಸೆಲೆಬ್ರಿಟಿಗಳು ಕೂಡ ಸ್ಕಿನ್ ಕೇರ್ ಮಾಡುತ್ತಾರೆ. ಅನೇಕರಿಗೆ ತಾನು ಎಲ್ಲರೆದುರು ಚೆನ್ನಾಗಿ ಕಾಣಬೇಕು ಎನ್ನುವುದು ಮಹದಾಸೆ ಇರುತ್ತದೆ. ಅದಕ್ಕಾಗಿ ತ್ವಚೆಯನ್ನು ಬಹಳ ಕೇರ್ ಮಾಡುತ್ತಾರೆ. ಇನ್ನೂ ಸೆಲೆಬ್ರಿಟಿಗಳು ಹಗಲಿರುಳು ಎನ್ನದೆ ಮೇಕಪ್ ಮಾಡುತ್ತಾರೆ. ಆ ಕಾರಣದಿಂದಾಗಿ ಚರ್ಮದ ಕಾಂತಿಯ ಬಗ್ಗೆ ಒತ್ತನ್ನು ನೀಡದೆ ಇದ್ದರೆ ತ್ವಚೆ ಹಾಳಗಲಿದೆ. ಹೀಗಾಗಿ ಹೆಚ್ಚು ಒತ್ತು ನೀಡಬೇಕು.

ಕಾಂತಿಯುತ ತ್ವಚೆ ಪಡೆಯಲು ವೈಷ್ಣವಿ ಕಿವಿ ಮಾತು
ಇನ್ನೂ ಎಷ್ಟೇ ಮೇಕಪ್ ಹಾಕಿದ್ದರು ರಾತ್ರಿಯ ವೇಳೆ ಸಂಪೂರ್ಣ ಮೇಕಪ್ ತೆಗೆದು ಮಲಗುವುದು ಒಳ್ಳೆಯದು, ಇಲ್ಲದೇ ಹೋದರೆ ಚರ್ಮಕ್ಕೆ ಇದು ತುಂಬಾ ಹಾನಿ ನೀಡುತ್ತದೆ. ಇನ್ನೂ ಮುಖ ತೋಳೆಯಬೇಕು. ಪ್ರತಿಸಲ ಮೇಕಪ್ ತೆಗೆದಾಗಲು ಮುಖ ಫ್ರೆಶ್ ಆಗುತ್ತದೆ. ಡ್ರೈ ಆಗಲು ಟೈಂ ಕೊಡಬೇಕು. ಮಾಯ್ಚಿರೈಸರ್ ಸರಿಯಾಗಿ ಬಳಕೆ ಮಾಡಬೇಕು. ಅದನ್ನು ಅಪ್ಲೈ ಮಾಡಿಯಾದ ಮೇಲೆ ರೋಲರ್ ಬಳಸಿ ಮುಖವನ್ನು ಮಸಾಜ್ ಮಾಡಿಕೊಳ್ಳಬೇಕು. ಇದು ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಲು ಅನುಕೂಲ ಆಗುತ್ತದೆ. ಇದರಿಂದ ತುಂಬಾ ರಿಲ್ಯಾಕ್ಸ್ ಆಗುತ್ತದೆ ಎಂದು ಹಲವು ಟಿಪ್ಸ್ ನೀಡಿದ್ದಾರೆ.
ಮುಖಕ್ಕೆ ಮಸಾಜ್ ಮಾಡಿದರೇ ಸ್ಕಿನ್ ಚೆನ್ನಾಗಿರುತ್ತದೆ. ಬ್ಲಡ್ ಸರ್ಕ್ಯೂಲೇಷನ್ ಚೆನ್ನಾಗಿರುತ್ತದೆ. ನಿದ್ದೆನೂ ಚೆನ್ನಾಗಿ ಬರುತ್ತದೆ ಎಂದು ವೈಷ್ಣವಿ ಹೇಳಿದ್ದಾರೆ. ಹಾಗೆಯೇ ಮಸ್ಕಾರ ಮತ್ತು ಐಬ್ರೋಗಳಿಗೆ ಹಚ್ಚುವ ಕಾಡಿಗೆಯಿಂದ ಎಫೆಕ್ಟ್ ಆಗಬಾರದು ಎಂದು ಬಾಡಿ ಬಟರ್ ಅಥವಾ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕಣ್ಣಿಗೆ ಹಚ್ಚಬೇಕು ಎಂದಿದ್ದಾರೆ. ಇದರ ಜೊತೆಗೆ ಸೀತಾರಾಮ ಶೂಟಿಂಗ್ ನಿಂದ ಬಂದ ಬಳಿಕ ಈ ವಿಡಿಯೋ ಮಾಡಿರುವುದಾಗಿ ವೈಷ್ಣವಿ ಗೌಡ ಹೇಳಿಕೊಂಡಿದ್ದಾರೆ.


Click it and Unblock the Notifications











