ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡ ವೈಷ್ಣವಿ ಗೌಡ, ಸಾಕ್ಷತ್ ಸೀತೆಯೇ ಎಂದ ಫ್ಯಾನ್ಸ್!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಸೀತಾ ಪಾತ್ರದಲ್ಲಿ ನಟಿಸುತ್ತಿರುವ ವೈಷ್ಣವಿ ಗೌಡ ಸೀರೆಯಲ್ಲಿ ಫೊಟೋಗಳನ್ನು ಹಂಚಿಕೊಂಡಿದ್ದು, ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ವೈಷ್ಣವಿ ಗೌಡ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಆದರೆ ಇದೀಗ ವೈಷ್ಣವಿ ಗೌಡ ಸೀರೆಯಲ್ಲಿ ಸಕ್ಕತ್ತಾಗಿ ಕಾಣಿಸುತ್ತಿದ್ದಾರೆ ಅವರ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ವೈಷ್ಣವಿ ಗೌಡ ಸೀತಾ ಪಾತ್ರ ಅದ್ಬುತವಾಗಿ ಕಾಣಿಸುತ್ತಿದ್ದಾರೆ. ಹಾಗೆಯೇ ಆಕೆಯ ನಟನೆಗೆ ಮಾರುಹೋಗದವರೇ ಇಲ್ಲ ಅಷ್ಟು ಅದ್ಭುತವಾಗಿ ಅಭಿನಯ ಮಾಡುತ್ತಾರೆ. ಇದೀಗ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿಕೊಂಡಿರುವುದು ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ.

ವೈಷ್ಣವಿ ಗೌಡ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೀರೆಯಲ್ಲಿ ವೈಷ್ಣವಿ ಗೌಡ ಅವರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋಗೆ ಸಾಕಷ್ಟು, ಲೈಕ್ ಕಾಮೆಂಟ್ ಬರುತ್ತಿದೆ. ಸಾಕಷ್ಟು ಬಾರಿ ಮಾಡರ್ನ್ ಡ್ರೆಸ್ ತೊಟ್ಟು ವೈಷ್ಣವಿ ಗೌಡ ಫೋಟೋಸ್ ಹಂಚಿಕೊಂಡಿದ್ದಾರೆ.
ಸೀರೆಯಲ್ಲಿ ಮಿಂಚಿದ ನಟಿ ವೈಷ್ಣವಿ
ಆದರೆ ಸೀರೆಯಲ್ಲಿ ಕಾಣಿಸುವ ಹಾಗೆ ಮುದ್ದಾಗಿ ಮಾಡರ್ನ್ ಡ್ರೆಸ್ ನಲ್ಲಿ ವೈಷ್ಣವಿ ಕಾಣಿಸುವುದಿಲ್ಲ.. ಇದೀಗ ಸೀರೆ ತೊಟ್ಟು, ಅದಕ್ಕೆ ತಕ್ಕ ಹಾಗೆಯೇ ಸಿಂಪಲ್ ಮೇಕಪ್ ಮಾಡಿಕೊಂಡು , ಅದಕ್ಕೆ ಅನುಗುಣವಾಗಿ ಸಿಂಪಲ್ ಆಭರಣಗಳನ್ನೂ ತೊಟ್ಟುಕೊಂಡು ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ. ವೈಷ್ಣವಿ ಗೌಡ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಅಗ್ನಿಸಾಕ್ಷಿ ಧಾರಾವಾಹಿ ಅದಾದ ಬಳಿಕ ಬಿಗ್ ಬಾಸ್ ನಲ್ಲೂ ಕೂಡ ಸಕ್ಕತ್ತಾಗಿ ಆಟ ಆಡಿದ್ದಾರೆ ವೈಷ್ಣವಿ ಗೌಡ.
ಸೀತಾರಾಮ ಧಾರವಾಹಿ ಮೂಲಕ ಎಲ್ಲರ ಮನೆಮಾತಾದ ವೈಷ್ಣವಿ
ಅಗ್ನಿಸಾಕ್ಷಿ ಬಿಟ್ಟರೆ ಇದೀಗ ಸೀತಾ ರಾಮ ಧಾರಾವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಧಾರಾವಾಹಿ ವೈಷ್ಣವಿ ಅವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿದೆ. ಈ ಧಾರವಾಹಿಯಲ್ಲಿ ವೈಷ್ಣವಿ ಗೌಡ ಅವರ ಮುದ್ದು ಮುಖವನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೀರೆಯಲ್ಲಿ ಗೌಡ ಅವರನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ
ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು ಫೋಟೋಗಳನ್ನ ಆಗಾಗ ಅಪ್ಲೋಡ್ ಮಾಡುತ್ತಿರುತ್ತಾರೆ. ರೀಲ್ಸ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಿರುತ್ತಾರೆ. ಹಾಗೆಯೇ ವೈಷ್ಣವಿ ಬಹಳ ಅದ್ಭುತವಾಗಿ ಡಾನ್ಸ್ ಮಾಡುತ್ತಾರೆ. ವೈಷ್ಣವಿ ಗೌಡ ಅವರನ್ನು ಅನೇಕ ಜನರು ಸಿನಿಮಾಗಳಲ್ಲಿ ನೋಡುವ ಅಪೇಕ್ಷೆಯನ್ನು ಹೊಂದಿದ್ದರು. ಆದರೆ ಸಿನಿಮಾ ಅಷ್ಟಾಗಿ ವೈಷ್ಣವಿ ಗೌಡ ಅವರನ್ನು ಅರಿಸಿಕೊಂಡು ಬಂದಿರಲಿಲ್ಲ. ಆದರೆ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಬಹಳ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ವೈಷ್ಣವಿ ಗೌಡ ಅಭಿನಯಕ್ಕೆ ಮಾರು ಹೋದ ಜನ
ವೈಷ್ಣವಿ, ವಿವಿಧ ವಿಡಿಯೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೀತಾ ರಾಮ ಸೆಟ್‌ನ ಕೆಲವು ವಿಡಿಯೋಗಳನ್ನೂ ಇಲ್ಲಿ ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ . ಇನ್ನು ತಾವು ಮೆಚ್ಚಿದ ನಟಿಯ ಸೀರಿಯಲ್ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿಪಟ್ಟುಕೊಂಡಿದ್ದಾರೆ. ಹಾಗೆಯೇ ಮಾಡ್ರನ್ ಡ್ರೆಸ್ ಇರೋ ಫೋಟೋಗಳಿಗೆ ಕಾಂಪ್ಲಿಮೆಂಟ್ಸ್ ಗಿಂತಲೂ ಕಾಮೆಂಟ್ಸ್ ಜಾಸ್ತಿ ಬರುತ್ತವೆ ಅಂತಲೇ ಹೇಳಬಹುದು. ವೈಷ್ಣವಿ ಗೌಡ ಸಾಂಪ್ರದಾಯಿಕ ಹುಡುಗಿ ಲುಕ್ ಕೊಟ್ಟಾಗ ಬಹಳ ಅದ್ಭುತವಾಗಿ ಕಾಣಿಸುತ್ತಾರೆ. ಆದರೆ ಮಾಡರ್ನ್ ಡ್ರೆಸ್ ಸೀತಾಗೆ ಅದ್ಯಾಕೋ ಅಷ್ಟಾಗಿ ಮ್ಯಾಚ್ ಆಗುತ್ತಿಲ್ಲ. ಆದರೂ ಅಂತ ಡ್ರೆಸ್ ಕಟ್ಟಿಕೊಂಡು ಫೋಟೋಶೂಟ್ ಮಾಡಿಸಿದಾಗ ಅಭಿಮಾನಿಗಳಿಗೆ ಕೊಂಚ ಬೇಸರವಾಗುವುದಂತೂ ಸತ್ಯ.


Click it and Unblock the Notifications











