'ಆಗಂತುಕ'ನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ವನಿತಾ ವಾಸು ಈಗ ಕಿರುತೆರೆಯಲ್ಲಿ ಬ್ಯುಸಿ; ಈ ನಟಿಯ ಕಿರುತೆರೆ ಜರ್ನಿ ಹೇಗಿದೆ ಗೊತ್ತೇ?

By ಅನಿತಾ ಬನಾರಿ

ಒಂದು ಕಥೆಯ ನಾಯಕ ನಾಯಕಿಯಷ್ಟೇ ಖಳನಾಯಕರಿಗೂ ಪ್ರಾಮುಖ್ಯತೆ ಇರುತ್ತದೆ. ಅಂತೆಯೇ ಧಾರಾವಾಹಿ ಕಥೆಗಳಲ್ಲೂ ನಾಯಕರಿಗಿದ್ದಷ್ಟೇ ಖಳನಾಯಕರಿಗೂ ಕಥೆಯ ಆಗುಹೋಗುವಿನಲ್ಲಿ ಪ್ರಮುಖ ಪಾತ್ರವಿರುತ್ತದೆ.

ಕನ್ನಡದ ಕಿರುತೆರೆ ಇಂದು ಹಲವಾರು ಅದ್ಭುತ ಅವಿಸ್ಮರಣೀಯ ಖಳನಾಯಕರನ್ನು ಕಂಡಿದೆ. ನಟಿ ವನಿತಾ ವಾಸು ಅವರು ಕೂಡ ತಮ್ಮ ಕಿರುತರೆ ಪಯಣದುದ್ದಕ್ಕೂ ಹಲವಾರು ಖಳನಾಯಕಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರೆ ತಪ್ಪಾಗಲ್ಲ.

Actress Vanitha Vasu shining in Amruthadhaare as a villain here is her journey

ಅಂದ ಹಾಗೆ ನಟಿ ವನಿತಾ ವಾಸು ಅವರದ್ದು ಕಿರುತೆರೆಯಲ್ಲಿ ನಿನ್ನೆ ಮೊನ್ನೆಯ ಪಯಣವಲ್ಲ. ಸುಮಾರು 20 ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ 'ಮನೆಯೆಂದು ಮೂರು ಬಾಗಿಲು' ಧಾರಾವಾಹಿಯಿಂದ ಹಿಡಿದು ಹಲವಾರು ಧಾರಾವಾಹಿಗಳಲ್ಲಿ ನಾನಾ ರೀತಿಯ ಖಳನಾಯಕಿಯಾಗಿ ಆಕೆ ಕಾಣಿಸಿಕೊಂಡಿದ್ದಾರೆ. ತಾವು ಮಾಡುವ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬುವ ನಟಿ ವನಿತಾ ವಾಸು ಅವರ ಕಿರುತೆರೆ ಪಯಣವನ್ನು ನೋಡೋಣ ಬನ್ನಿ.

20 ವರ್ಷಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಚಾರವಾಗುತ್ತಿದ್ದ 'ಮನೆಯೆಂದು ಮೂರು ಬಾಗಿಲು' ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮನೆ ಗೆದ್ದಿತ್ತು. ಅದರಲ್ಲಿ ವನಿತಾವಾಸು ಅವರು ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದು ಖಳನಾಯಕಿಯಾಗಿ ಕಥೆಯುದ್ದಕ್ಕೂ ತಮ್ಮ ಖಡಕ್ ನಟನೆಯ ಮೂಲಕ ಜನರನ್ನು ಮನರಂಜಿಸಿದ್ದರು.

ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಸ್ವತಿ ಲಕ್ಷ್ಮಿ ಪ್ರಿಯೆ' ಧಾರಾವಾಹಿಯಲ್ಲೂ ಸರಸ್ವತಿ ಪಾತ್ರಕ್ಕೆ ಜೀವ ತುಂಬಿದ್ದರು ನಟಿ ವನಿತಾ ವಾಸು. ಮುಂದೆ ಅದೇ ಧಾರಾವಾಹಿಯಲ್ಲಿ ಕ್ರಮೇಣ ರೇವತಿ ಎಂಬ ಪಾತ್ರಕ್ಕೂ ಜೀವ ತುಂಬಿದ್ದರು.

Actress Vanitha Vasu shining in Amruthadhaare as a villain here is her journey

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಘರ್ಷ' ಧಾರಾವಾಹಿಯಲ್ಲಿ ಬೈರಾದೇವಿ ಎಂಬ ಪಾತ್ರದಲ್ಲಿಯೂ ಮಿಂಚಿರುವ ಈಕೆ ಜೀವ ತುಂಬಿದ್ದು ನೆಗೆಟಿವ್ ಪಾತ್ರಕ್ಕೆ ಎಂಬುದು ವಿಶೇಷ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕ ಲಕ್ಕಿಯ ದೊಡ್ಡಮ್ಮ ರೇವತಿಯಾಗಿಯೂ ನಟಿಸಿದ್ದರು ನಟಿ ವನಿತಾ ವಾಸು.

ಇಷ್ಟೇ ಅಲ್ಲ ಪೌರಾಣಿಕ ಧಾರಾವಾಹಿಗಳನ್ನು ನಟಿಸಿರುವ ಈಕೆ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿಯೂ ಒಂದು ರಾಕ್ಷಸಿ ಪಾತ್ರವನ್ನು ಮಾಡಿ ಬಹಳ ಜನ ಮನ್ನಣೆ ಗಳಿಸಿದ್ದರು. ಸದ್ಯಕ್ಕೆ 'ಅಮೃತದಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನನ ಮಲತಾಯಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಮಲಮಗನ ಕೆಡುಕಿಗೆ ಕಾಯುತ್ತ ತನ್ನ ಮಕ್ಕಳಿಗೆ ಎಲ್ಲವೂ ಒಳ್ಳೆಯದಾಗಬೇಕೆಂದು ಯೋಚಿಸುವ ಈ ಪಾತ್ರದಲ್ಲಿ ಹಾಗೂ ನಟಿ ವನಿತಾ ವಾಸು ಅವರ ನಟನೆ ಎಲ್ಲರಿಗೂ ಅಚ್ಚು ಮೆಚ್ಚಾಗಿದೆ. ಈ ಮೂಲಕ ಪ್ರಸ್ತುತ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೇ ವನಿತಾ ವಾಸು ಅವರ ನಟನಾ ಪಯಣ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಈಕೆ ನಟನಾ ಕಂಪನ್ನು ಪಸರಿಸಿದ್ದಾರೆ. ಹೌದು, 'ಆಗಂತುಕ' ಸಿನಿಮಾದ ಮೂಲಕ ಬೆಳ್ಳಿತೆರೆಯ ನಂಟು ಬೆಳೆಸಿಕೊಂಡ ಈಕೆ ಮುಂದೆ ಅರುವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸಿ, ತದ ನಂತರ ಪೋಷಕ ಪಾತ್ರಧಾರಿಯಾಗಿ ಭಡ್ತಿ ಪಡೆದಿರುವ ವನಿತಾ ವಾಸು 'ಹುಡುಗರು' ಸಿನಿಮಾದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು.

More from Filmibeat

English summary
Actress Vanitha Vasu shining in Amruthadhaare as a villain here is her journey:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X