'ಜನನಿ' ಧಾರಾವಾಹಿಯ ಮೂಲಕ 'ಅನಘಾ' ಅವತಾರವೆತ್ತಿ ಕಿರುತೆರೆಗೆ ರೀ ಎಂಟ್ರಿ ಕೊಟ್ಟ ವರ್ಷಿತಾ ಸೇನಿ

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜನನಿ' ಧಾರಾವಾಹಿಯಲ್ಲಿ ನಾಯಕ ಪೃಥ್ವಿ ಅತ್ತಿಗೆ ಅನಘಾ ಆಗಿ ಅಭಿನಯಿಸುತ್ತಿದ್ದ ಶಿಲ್ಪ ಅಯ್ಯರ್ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಅವರ ಜಾಗಕ್ಕೆ ಇದೀಗ ಹೊಸ ನಟಿಯ ಆಗಮನವಾಗಿದೆ. ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ನಟಿ ವರ್ಷಿತಾ ಸೇನಿ ಅವರು ಇನ್ನು ಮುಂದೆ ಅನಘಾ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ನಾಗವೇಣಿ ಪಾತ್ರಕ್ಕೆ ಜೀವ ತುಂಬಿದ್ದ ವರ್ಷಿತಾ ಸೇನಿ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಇದೀಗ ಎರಡೂವರೆ ವರ್ಷದ ಸುಧೀರ್ಘ ಗ್ಯಾಪ್‌ನ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವರ್ಷದ ನಂತರ ಒಳ್ಳೆಯ ಪಾತ್ರದ ಮೂಲಕ ತೆರೆ ಮೇಲೆ ಬರುತ್ತಿರುವುದಕ್ಕೆ ಫಿಲ್ಮಿಬೀಟ್ ಜೊತೆ ಸಂತಸ ವ್ಯಕ್ತಪಡಿಸಿದ್ದಾರೆ ವರ್ಷಿತಾ ಸೇನಿ.

Actress Varshita Seni re-entered television as Anagha in Janani serial

ಅನಘಾ ಫನ್ ಲವಿಂಗ್ ಕ್ಯಾರೆಕ್ಟರ್

"ಅನಘಾ ಪಾತ್ರ ಹೇಗೆ ಅಂಥ ಅಂದ್ರೆ ಫನ್ ಲವಿಂಗ್ ಕ್ಯಾರೆಕ್ಟರ್ ಅದು‌. ಯಾವಾಗಲೂ ಪಟಪಟ ಅಂಥ ಮಾತಾಡುವ ಅನಘಾ ಗಂಡ, ಭಾವ ಮತ್ತೆ ಅತ್ತೆ ಮುಂದೆ ಮಾತಾಡುವುದಕ್ಕೆ ಸಿಕ್ಕಾಪಟ್ಟೆ ಹೆದರುತ್ತಾಳೆ. ಅಕ್ಕಂದಿರ ಜೊತೆಗೆ ಇರಬೇಕಾದರೆ ಆಕೆ ತಾನಾಗಿರುತ್ತಾಳೆ. ಸಂತಸವಾದರೂ, ಬೇಸರವಾದರೂ ಹೊರಹಾಕುತ್ತಾಳೆ. ಮನೆಯವರ ಮುಂದೆ ಏನನ್ನೂ ಹೇಳುವುದಿಲ್ಲ. ಏನೇ ಇದ್ರೂ ಸುಲಭವಾಗಿ ರಿಯಾಕ್ಟ್ ಮಾಡುವ ಕ್ಯಾರೆಕ್ಟರ್" ಎಂದು ಪಾತ್ರದ ಬಗ್ಗೆ ವರ್ಷಿತಾ ಸೇನಿ ಮಾತನಾಡಿದ್ದಾರೆ.

ಅನಘಾ ಪಾತ್ರ ವೀಕ್ಷಕರಿಗೆ ಇಷ್ಟ

"ಜನರು ಕೂಡಾ ಅಷ್ಟೇ.. ಜನನಿ ಧಾರಾವಾಹಿಯ ಅನಘಾ ಪಾತ್ರವನ್ನು ತುಂಬಾನೇ ಇಷ್ಟಪಟ್ಟಿದ್ದರು. ಅನಘಾ ಪಾತ್ರ ಎಲ್ಲರ ನೆಚ್ಚಿನ ಪಾತ್ರವಾಗಿತ್ತು. ಶಿಲ್ಪ ಅಯ್ಯರ್ ಕೂಡಾ ತುಂಬಾ ಅದ್ಭುತವಾಗಿ ಅನಘಾ ಪಾತ್ರಕ್ಕೆ ಜೀವ ತುಂಬಿದ್ದರು. ಈಗ ನಾನು ಅವರ ಜಾಗಕ್ಕೆ ಬಂದಿದ್ದೇನೆ. ನಾನು ಕೂಡಾ ಅವರಷ್ಟೇ ಚೆನ್ನಾಗಿ ಅನಘಾ ಪಾತ್ರಕ್ಕೆ ಜೀವ ತುಂಬಬಹುದು ಎಂದು ನಾನು ನಂಬಿದ್ದೇನೆ. ನನ್ನಿಂದ ಸಾಧ್ಯವಾದಷ್ಟು ನಾನು ಪ್ರಯತ್ನ ಪಡುತ್ತೇನೆ" ಎಂದು ಫಿಲ್ಮಿಬೀಟ್ ಜೊತೆಗೆ ವರ್ಷಿತಾ ಸೇನಿ ಹಂಚಿಕೊಂಡಿದ್ದಾರೆ.

ಜನನಿ ತಂಡ ಸಕತ್ತಾಗಿದೆ

ಈಗಾಗಲೇ ಶೂಟಿಂಗ್ ತಂಡ ಸೇರಿರುವ ವರ್ಷಿತಾ "ಜನನಿ ಧಾರಾವಾಹಿಯ ತಂಡ ತುಂಬಾ ಚೆನ್ನಾಗಿದೆ. ಸಹಕಲಾವಿದರುಗಳು ಕೂಡಾ ತುಂಬಾ ಸಪೋರ್ಟ್ ಮಾಡುತ್ತಾರೆ. ನನಗೆ ಗೊತ್ತಿಲ್ಲದಿರುವ ವಿಚಾರವನ್ನು ನಾನು ಅವರಿಂದ ಕೇಳಿ ತಿಳಿದುಕೊಳ್ಳುತ್ತೇನೆ. ತಂಡ ಸೇರಿದ ಎರಡೇ ದಿನಕ್ಕೆ ಎಲ್ಲರೂ ಪ್ರೆಂಡ್ ಆಗಿದ್ದಾರೆ. ಜೊತೆಗೆ ಡೈರೆಕ್ಟರ್ ಹೊನ್ನೇಶ್ ಸರ್ ಕೂಡಾ ತುಂಬಾ ಚೆನ್ನಾಗಿ ಮಾರ್ಗದರ್ಶನ ನೀಡುತ್ತಾರೆ. ಒಟ್ಟಿನಲ್ಲಿ ಜನನಿ ಸೆಟ್ ತುಂಬಾ ಫನ್ ಲವಿಂಗ್" ಎಂದು ಸಂತಸದಿಂದ ಹೇಳುತ್ತಾರೆ ವರ್ಷಿತಾ ಸೇನಿ.

Actress Varshita Seni re-entered television as Anagha in Janani serial

ಸಾಲು ಸಾಲು ಧಾರಾವಾಹಿಯಲ್ಲಿ ನಟನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕಿಯ ಚಿಕ್ಕಮ್ಮನ ಮಗಳು ಅನು ಆಗಿ ನಟಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ವರ್ಷಿತಾ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಧಾರಾವಾಹಿಯಲ್ಲಿ ತಿಂಡಿಪೋತಿ ಉಮಾ ಆಗಿ ಬಣ್ಣ ಹಚ್ಚಿದರು. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಕಿರಿಸೊಸೆ ನಾಗವೇಣಿ ಆಗಿ ಅಭಿನಯಿಸಿದ್ದರು ವರ್ಷಿತಾ.

More from Filmibeat

English summary
Varshita Seni returned to acting after two and a half years. Varshita Seni will be seen as fun loving girl, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X