Actress Veena Ponnappa: 'ವೇದ' ಬಳಿಕ 'UI'ನಲ್ಲಿ ನಟಿ ವೀಣಾ ಪೊನ್ನಪ್ಪ.. ಉಪ್ಪಿ ಸಿನಿಮಾದಲ್ಲೇನು ಪಾತ್ರ?

By ಅನಿತಾ ಬನಾರಿ

'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಅದ್ಭುತವಾಗಿ ನಡೆಸಿ ಜನರ ಪ್ರೀತಿಗೆ ಪಾತ್ರವಾಗಿರುವ ನಟಿ ವೀಣಾ ಪೊನ್ನಪ್ಪ ಅವರು ಇದೀಗ ಸಂತೋಷದ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ.

ಹೌದು, ಈ ಧಾರಾವಾಹಿಯಲ್ಲಿ ರಾಣಿಯ ಪಾತ್ರವನ್ನು ಮಾಡುತ್ತಾ ಅದ್ಭುತವಾಗಿ ಅಭಿನಯಿಸುತ್ತಿರುವ ಈ ನಟಿ ಇದೀಗ ಕನ್ನಡದ ನಟ ನಿರ್ದೇಶಕ ಉಪೇಂದ್ರ ಅವರ "ಯುಐ" ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ವಿಷಯವನ್ನು ಖುಷಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Actress Veena Ponnappa will share the screen space with the real star Upendra in UI

ಸಂತಸ ಹಂಚಿಕೊಂಡ ವೀಣಾ ಪೊನ್ನಪ್ಪ

ತಮ್ಮ ಇನ್‌ಸ್ಟಾಗ್ರಾಂ ಖಾತೆಯನಲ್ಲಿ ಈ ಬಗ್ಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. "ವೀಣಾ ಪೊನ್ನಪ್ಪ ಆನ್ ಬೋರ್ಡ್ ಯು ಐ" ಎಂದು ಬರೆದುಕೊಂಡು ಈ ಸಂತೋಷದ ವಿಚಾರವನ್ನು ಅಭಿಮಾನಿಗಳಿಗೆ ಹಾಗೂ ತಮ್ಮ ಫಾಲೋವರ್ಸ್‌ಗೆ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಶುಭ ಹಾರೈಕೆಗಳ ಮಳೆಯ ಸುರಿದಿದೆ.

'ವೇದ' ಸಿನಿಮಾದಲ್ಲಿ ಇನ್ಸ್ ಪೆಕ್ಟರ್

ಈ ಸಿನಿಮಾ ವೀಣಾ ಪೊನ್ನಪ್ಪ ಅವರ ಎರಡನೇ ಭರ್ಜರಿ ಸಿನಿಮಾ ಆಗಲಿ ಎಂದು ಪ್ರೇಕ್ಷಕರು, ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಶುಭ ಹಾರೈಸಿದ್ದಾರೆ. 2022 ರಲ್ಲಿ 'ವೇದ' ಸಿನಿಮಾದಲ್ಲಿ ಪೊಲೀಸ್ ಇನ್‌ಸ್ಟೆಕ್ಟರ್ ಆಗಿ ಕಾಣಿಸಿಕೊಂಡ ನಟಿ ವೀಣಾ ಪೊನ್ನಪ್ಪ ಅವರು ತಮ್ಮ ನಟನೆಗೆ ಬಹಳಷ್ಟು ಮೆಚ್ಚುಗೆಯನ್ನು ಪಡೆದಿದ್ದರು.

'ಯುಐ' ಸಿನಿಮಾದಲ್ಲಿ ನಟಿಸೋದು ಖುಷಿ

ಅದರ ಬೆನ್ನಲ್ಲೇ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುತ್ತಾ ಇದೀಗ ಬಹಳಷ್ಟು ಕಿರುತೆರೆ ಪ್ರಿಯರ ಪ್ರೀತಿಗೆ ಪಾತ್ರವಾಗಿದ್ದಾರೆ. ಹೀಗಿರುವಾಗಲೇ ಉಪೇಂದ್ರ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದು ಈಕೆಗೆ ಬಹಳಷ್ಟು ಸಂತೋಷ ತಂದಿರುವುದಲ್ಲದೆ ಹೀಗೆ ನಟನ ಜರ್ನಿಯಲ್ಲಿ ಒಂದು ಒಳ್ಳೆಯ ಮೈಲಿಗಲ್ಲಾಗುವುದರಲ್ಲಿ ಸಂದೇಹವಿಲ್ಲ.

Actress Veena Ponnappa will share the screen space with the real star Upendra in UI

ಮಂಗಳಾದೇವಿ ಪಾತ್ರದ ಬಗ್ಗೆ ಸಂತಸವಿದೆ

ಧಾರಾವಾಹಿ ತಂಡ ವೀಣಾ ಪೊನ್ನಪ್ಪ ಅವರ ಬಳಿ ಬಂದು ಕಥೆಯನ್ನು ವಿವರಿಸಿದಾಗ ಅವರಿಗೆ ಬಹಳಷ್ಟು ಆಸಕ್ತಿ ಮೂಡಿತು. ಯಾಕೆಂದರೆ ಈ ಮೊದಲು ಆಕೆ ಹಲವಾರು ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದರೂ ಯಾವುದೇ ರೀತಿಯ ಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಖುಷಿಯಿಂದ ಒಪ್ಪಿಕೊಂಡೆ. ಇದೀಗ ಆ ಧಾರವಾಹಿಯಲ್ಲಿ ರಾಣಿ ಮಂಗಳಾದೇವಿ ಪಾತ್ರವನ್ನು ಮಾಡುತ್ತಿದ್ದಾರೆ. ಜೊತೆಗೆ ಅವರಿಗೆ ಈ ಪಾತ್ರದ ಬಗ್ಗೆ ಬಹಳಷ್ಟು ಸಮಾಧಾನ ಹಾಗೂ ಖುಷಿ ಇದೆ.

More from Filmibeat

English summary
Actress Veena Ponnappa will share the screen space with the real star Upendra in UI, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X