Vibhuti Thakur: ಕರೆ ಮಾಡಿ ಮಂಚಕ್ಕೆ ಕರೆದ ಅನಾಮಿಕರು: ನಟಿ ಮಾಡಿದ್ದೇನು?

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ ನಟಿಯರಿಗೆ ಆನ್‌ಲೈನ್ ಕಿರುಕುಳ ಹೊಸದೇನೂ ಅಲ್ಲ. ಪ್ರತಿನಿತ್ಯವೂ ಇಂಥಹಾ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆಗೊಮ್ಮೆ-ಈಗೊಮ್ಮೆ ನಟಿಯರು ಈ ಬಗ್ಗೆ ದೂರು ದಾಖಲಿಸುತ್ತಿರುತ್ತಾರೆ.

ಇದೀಗ ಟಿವಿ ನಟಿಯೊಬ್ಬರಿಗೆ ಆನ್‌ಲೈನ್ ಕಿರುಕುಳದ ಅನುಭವವಾಗಿದ್ದು, ಕಿರುಕುಳಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಹಿಂದಿಯ ಹಲವು ಟಿವಿ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿರುವ ವಿಭೂತಿ ಠಾಕೂರ್‌ ಮೊಬೈಲ್ ನಂಬರ್‌ ಅನ್ನು ವ್ಯಕ್ತಿಯೊಬ್ಬ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದು, ಅಶ್ಲೀಲ ಸಂದೇಶವನ್ನು ಪ್ರಕಟಿಸಿದ್ದಾನೆ. ಇದರಿಂದಾಗಿ ನಟಿಗೆ ಕರೆ ಮಾಡಿರುವ ಅನೇಕರು ಅಶ್ಲೀಲವಾಗಿ ಮಾತನಾಡಿದ್ದಾರೆ. 'ಲೈಂಗಿಕ ಸೇವೆ'ಗಳನ್ನು ನೀಡೆಂದು ಕೇಳಿದ್ದಾರೆ.

Actress Vibhuti Thakur Has Been Harassed In Online, Gave Complaint

ಇದರಿಂದ ತಮಗೆ ಆಗುತ್ತಿರುವ ಮಾನಸಿಕ ಹಿಂಸೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ವಿಭೂತಿ, ''ನನ್ನ ಖಾಸಗಿ ಸಂಖ್ಯೆಯನ್ನು ಈ ವ್ಯಕ್ತಿ ಬಹಿರಂಗಗೊಳಿಸಿದ್ದಾನೆ. ಆತ ಹಂಚಿಕೊಂಡಿರುವ ಪೋಸ್ಟ್‌ನಲ್ಲಿಯೇ ನನಗೆ ಕಿರುಕುಳ ನೀಡುವಂತೆ ಹೇಳಿದ್ದಾನೆ. ಇದು ನನಗೆ ತೀವ್ರ ಮಾನಸಿಕ ಹಿಂಸೆ ನೀಡುತ್ತಿದೆ. ಈ ರೀತಿಯ ವರ್ತನೆ ನಚಿಕೆಗೇಡು. ಅಲ್ಲದೆ ನನ್ನ ಹೆಣ್‌ತನಕ್ಕೆ ಮಾಡಿದ ಅಪಮಾನ'' ಎಂದಿದ್ದಾರೆ.

''ಕೆಲವು ಜನರಿಗೆ ಏಕೆ ಇಷ್ಟು ವಿಕೃತ ಮನಸ್ಸು ಇರುತ್ತದೆಂಬುದೇ ನನಗೆ ಅರ್ಥವಾಗುವುದಿಲ್ಲ. ವೈಯಕ್ತಿಕ ಜೀವನ, ವೃತ್ತಿಯ ಬಗ್ಗೆ ಗಮನ ಹರಿಸಿಕೊಂಡಿದ್ದೆ. ಆದರೆ ಇಂದಿನ ಈ ಬೆಳವಣಿಗೆ ನನಗೆ ತೀವ್ರ ಮಾನಸಿಕ ಹಿಂಸೆ ನೀಡಿ, ನೆಮ್ಮದಿ ಹಾಳು ಮಾಡಿದೆ. ಹಾಗಾಗಿ ನನ್ನ ಖಾಸಗಿ ಮೊಬೈಲ್ ನಂಬರ್ ಅನ್ನು ಬಹಿರಂಗಗೊಳಿಸಿದ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ನಾನು ದೂರು ನೀಡಲಿದ್ದೇನೆ. ಅಲ್ಲದೆ, ನನಗೆ ಕರೆ ಮಾಡಿದ, ಕೆಟ್ಟದಾಗಿ ಸಂದೇಶ ಕಳಿಸಿದ ಎಲ್ಲ ಮೊಬೈಲ್ ಸಂಖ್ಯೆಗಳನ್ನು ಅವರಿಗೆ ನೀಡಲಿದ್ದೇನೆ. ವಿಕೃತ ವ್ಯಕ್ತಿಗಳ ವಿರುದ್ಧ ಕ್ರಮ ಆಗಬೇಕು'' ಎಂದಿದ್ದಾರೆ ನಟಿ ವಿಭೂತಿ. ಅಲ್ಲದೆ ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗಗೊಳಿಸಿದ ವ್ಯಕ್ತಿಯ ಇನ್‌ಸ್ಟಾ ಖಾತೆಯ ಸ್ಕ್ರೀನ್‌ ಶಾಟ್ ಅನ್ನು ಹಂಚಿಕೊಂಡಿದ್ದು, ಆ ಖಾತೆಯನ್ನು ರಿಪೋರ್ಟ್ ಮಾಡುವಂತೆ ಗೆಳೆಯರಲ್ಲಿ, ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

''ನಿನ್ನೆ ಒಮ್ಮೆಗೆ ಹಲವು ಮಂದಿ ನನಗೆ ಕರೆ ಮಾಡಲು ಆರಂಭಿಸಿದರು. ಮೊದಲಿಗೆ ಇದೇನೊ ಪ್ರ್ಯಾಂಕ್ ಎಂದುಕೊಂಡಿದ್ದೆ. ಆದರೆ ನಂತರ ಹಲವರು ಸತತವಾಗಿ ಕರೆ ಮಾಡಿ ನನ್ನನ್ನು ಮಂಚಕ್ಕೆ ಆಹ್ವಾನಿಸಿದರು. ಲೈಂಗಿಕ ಸೇವೆಗಳನ್ನು ಕೇಳಿದರು. ಆಗ ನಾನು ತೀವ್ರ ಘಾಸಿಗೊಳಗಾದೆ. ಇಂಥಹಾ ಕೆಟ್ಟ ಪರಿಸ್ಥಿತಿಯನ್ನು ನನ್ನ ಜೀವನದಲ್ಲಿ ನಾನು ಎಂದೂ ಎದುರಿಸಿರಲಿಲ್ಲ. ಬಳಿಕ ತನಗೆ ಕರೆ ಮಾಡಿದ ಒಬ್ಬ ವ್ಯಕ್ತಿಯನ್ನು ನಂಬರ್ ಹೇಗೆ ಸಿಕ್ಕಿತೆಂದು ಕೇಳಿದಾಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನಗೆ ನಂಬರ್ ಸಿಕ್ಕಿದ್ದಾಗಿ ಹೇಳಿದ. ಆ ನಂಬರ್‌ಗೆ ಕರೆ ಮಾಡಿರೆಂದು ಆತ ಪೋಸ್ಟ್ ಹಾಕಿದ್ದಾಗಿಯೂ ಹೇಳಿದ. ಸತತ ಕರೆ, ಅಶ್ಲೀಲ ಸಂದೇಶಗಳು ಬರುತ್ತಿದ್ದು, ನನಗೆ ಮಾನಸಿಕ ಹಿಂಸೆ, ಹಾಗೂ ಖಾಸಗಿತನದ ಹಕ್ಕು ಉಲ್ಲಂಘನೆ ಆಗಿರುವ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದೇನೆ'' ಎಂದು ನಟಿ ಬರೆದುಕೊಂಡಿದ್ದಾರೆ.

More from Filmibeat

English summary
Hindi Tv actress Vibhuti Thakur has been harassed in online from strangers. Some one leaked her mobile number in social media. Actress gave complaint.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X