Yamuna Srinidhi: ಮೊದಲ ಬಾರಿಗೆ ಪೊಲೀಸ್ ಅಧಿಕಾರಿ ಲುಕ್ ಕೊಟ್ಟ ಯಮುನಾ ಶ್ರಿನಿಧಿ.. ಸೀರಿಯಲ್‌ನಲ್ಲಿ ಟ್ವಿಸ್ಟ್ ಸಿಗುತ್ತಾ?
ಸದ್ಯಕ್ಕಂತೂ ಕನ್ನಡದಲ್ಲಿ ಬಹಳ ಪಾಪ್ಯುಲರ್ ಆಗಿರುವಂತಹ 'ನಮ್ಮ ಲಚ್ಚಿ' ಧಾರಾವಾಹಿ ಕಿರುತೆರೆ ಪ್ರಿಯರ ಮನೆ ಮನ ಗೆದ್ದಿರದಲ್ಲಿ ಡೌಟೇ ಇಲ್ಲ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ ಹಾಗೂ 'ಲಕ್ಷ್ಮೀ ಬಾರಮ್ಮ' ಖ್ಯಾತಿಯ ಗೊಂಬೆ ಅಲಿಯಾಸ್ ನೇಹಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಧಾರಾವಾಹಿಯಿದೆ. ಈ ಸೀರಿಯಲ್‌ನಲ್ಲಿ ಹಲವು ಪ್ರಮುಖ ನಟರು ನಟಿಸುತ್ತಿದ್ದಾರೆ.
ಒಳ್ಳೆ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿ ಚೆನ್ನಾಗಿ ಟಿ ಆರ್ ಪಿ ಪಡೆಯುತ್ತಾ ಮುನ್ನುಗ್ಗುತ್ತಿರುವಾಗಲೇ ಇದೀಗ ಕನ್ನಡದ ಖ್ಯಾತ ನಟಿ ಯಮುನ ಶ್ರೀನಿಧಿ ಈ ಧಾರಾವಾಹಿಯಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮ ಲಚ್ಚಿ' ಧಾರಾವಾಹಿ ಈಗಾಗಲೇ ಯಶಸ್ವಿಯಾಗಿ 150 ಎಪಿಸೋಡ್‌ಗಳನ್ನು ಮುಗಿಸಿದ್ದು, ನಟಿ ಯಮುನಾ ಶ್ರೀನಿಧಿಯ ಪೊಲೀಸ್ ಪಾತ್ರ ಧಾರಾವಾಹಿ ಕಥೆಯಲ್ಲಿ ಬಹಳಷ್ಟು ಟ್ವಿಸ್ಟ್ ಅನ್ನು ತರಲಿದೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಂತಸದಿಂದ ಹಂಚಿಕೊಂಡಿದ್ದರು ನಟಿ ಯಮುನಾ ಶ್ರೀನಿಧಿ. "ನಾನು ಕಾಲೇಜು ದಿನಗಳಲ್ಲಿ ಏನ್ ಸಿ ಸಿ ಕೆಡೇಟ್ ಆಗಿದ್ದೆ. ಹಾಗಾಗಿ ಪೊಲೀಸ್ ಯೂನಿಫಾರ್ಮ್ ಹಾಕುವುದೆಂದರೆ ಅದೇನೋ ರೋಮಾಂಚನ. ಈ ಪಾತ್ರ ನನಗೆ ಬಹಳ ಖುಷಿ ಕೊಟ್ಟಿದೆ" ಎಂದು ಬರೆದುಕೊಂಡು ತಮ್ಮ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು.
ಅಂದಹಾಗೆ ನಟಿ ಯಮುನಾ ಶ್ರೀನಿಧಿ ಕಲರ್ಸ್ ಕನ್ನಡದ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲೂ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದು, ಅದ್ಭುತ ನಟನೆಗೆ ಹೆಸರಾಗಿದ್ದಾರೆ. ಈಕೆ ಹೀಗೆ ಮೊದಲ ಬಾರಿಗೆ ಪೊಲೀಸ್ ಪಾತ್ರವನ್ನು ಮಾಡುತ್ತಿದ್ದು ಬಹಳ ಉತ್ಸಾಹದಲ್ಲಿ ಇದ್ದೇನೆಂದು ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು. ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಶುಭ ಹಾರೈಸಿದ್ದರು.

'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಝಾನ್ಸಿ ಎಂಬ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ ಕಥೆಯಲ್ಲಿರುವ ದೀಪಿಕಾಳ ಬಂಧನದ ಹಿಂದಿನ ಮರ್ಡರ್ ಅಟೆಂಪ್ಟ್ ವಿಚಾರವನ್ನು ತಿಳಿದು ಅದಕ್ಕೆ ಸರಿಯಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಧರ್ಮೇಂದ್ರ ಅರಸ್ ಈ ಪೊಲೀಸ್ ಅಧಿಕಾರಿ ಮೇಲೆ ಧಮ್ಕಿ ಹಾಕಲು ಬಂದಾಗ ಇವರು ಆತನ ಕೆನ್ನೆಗೊಂದು ಬಾರಿಸಿ ದೀಪಿಕಾ ಪರವಾಗಿ ಮಾತನಾಡಿ ಆತನನ್ನು ಪೋಲಿಸ್ ಸ್ಟೇಷನ್‌ನಿಂದ ಹೊರ ಹೋಗಲು ಹೇಳುತ್ತಾರೆ. ಈ ರೀತಿಯ ಒಂದು ಸ್ಟ್ರಾಂಗ್ ಪಾತ್ರ ಇದಾಗಿದ್ದು ಚಾಲೆಂಜಿಂಗ್ ಆಗಿರುವಂತಹ ಪಾತ್ರ ನಿರ್ವಹಿಸಿರುವ ಖುಷಿ ಈ ನಟಿಗಿದೆ.


Click it and Unblock the Notifications











