Yamuna Srinidhi: ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಯಮುನಾ ಶ್ರೀನಿಧಿ
ನಟಿ ಯಮುನಾ ಶೀನಿಧಿ ಸದ್ಯ ಕನ್ನಡ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಟಿ. ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ಯಮುನಾ ಶ್ರೀನಿಧಿ ಕಾಣಿಸಿಕೊಳ್ಳುತ್ತಿದ್ದಾರೆ.
ಭರತನಾಟ್ಯ ಕಲಾವಿದೆ ಆಗಿರುವ ಯಮುನಾ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಾರೆ. ಇವರು ಹಲವಾರು ಧಾರಾವಾಹಿ ನಿರ್ಮಾಪಕ, ನಿರ್ದೇಶಕರ ಮೆಚ್ಚಿನ ಆಯ್ಕೆಯಾಗಿದ್ದಾರೆ.
ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. 12 ವರ್ಷಗಳ ಕಾಲ ಅಮೆರಿಕಾದಲ್ಲಿ ಇದ್ದು, ಭರತನಾಟ್ಯ ಹೇಳಿಕೊಟ್ಟಿದ್ದರು. ಬಳಿಕ ಭಾರತಕ್ಕೆ ಬಂದ ಯಮುನಾ ಅವರು ಆನ್‌ಲೈನ್‌ನಲ್ಲಿ ಇಂದಿಗೂ ಅಮೆರಿಕಾ ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುತ್ತಿದ್ದಾರೆ.

ಇತರರ ಹಿತಕ್ಕಾಗಿ ಮಿಡಿಯುವ ಜೀವ
ಹವ್ಯಾಸಿ ಕಲಾವಿದೆ ಯಮುನಾ ಹಿರಿತೆರೆಯಲ್ಲಿ ಕೂಡ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಯಮುನಾ ಶ್ರೀನಿಧಿ ಅವರು ಸದಾ ಸಮಾಜ ಸೇವೆಯಲ್ಲಿ ಮುಂದಿರುತ್ತಾರೆ. ಕೋವಿಡ್ ಸಂದರ್ಭದಲ್ಲೂ ಸಾಕಷ್ಟು ಸಮಾಜ ಸೇವೆಯನ್ನು ಮಾಡಿದ್ದಾರೆ. ತಮ್ಮ ಹುಟ್ಟುಹಬ್ಬ ಸೇರಿದಂತೆ ವಿಶೇಷ ದಿನಗಳನ್ನು ಸಮಾಜ ಸೇವೆಗೆ ಮೀಸಲಿಟ್ಟಿರುತ್ತಾರೆ. ಈ ಬಗ್ಗೆ ಸಾಕಷ್ಟು ಸಮಾಜ ಸೇವೆಯನ್ನು ಮಾಡಿದ್ದಾರೆ.

ತೆಲುಗು ಕಿರುತೆರೆಗೆ ಯಮುನಾ ಎಂಟ್ರಿ
ಇದೀಗ ಯಮುನಾ ಶ್ರೀನಿಧಿ ಅವರು ತೆಲುಗು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದಾರೆ. ಜೆಮಿನಿ ಟಿವಿಯಲ್ಲಿ ಮೂಡಿ ಬರಲಿರುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತೆಲುಗು ಧಾರಾವಾಹಿ 'ಅನು ಅನೆ ನೇನು'ನ ಪ್ರೋಮೋವನ್ನು ಶೇರ್ ಮಾಡಿಕೊಂಡಿರುವ ಯಮುನಾ ಶ್ರೀನಿಧಿ ಅವರು ಸಂತಸವನ್ನು ಹಂಚಿಕೊಂಡಿದ್ದಾರೆ. ಧಾರಾವಾಹಿ ಪ್ರಸಾರದ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಯಮುನಾ ಶ್ರೀನಿಧಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಹಿತಿ ಹಂಚಿಕೊಂಡ ಯಮುನಾ ಶ್ರೀನಿಧಿ
"ನಾನು ಈ ಧಾರಾವಾಹಿಯಲ್ಲಿ ಸುಂದರವಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ, ನಮ್ಮ ತೆಲುಗು ಸ್ನೇಹಿತರು ನನ್ನನ್ನು ತೆಲುಗು ದೂರದರ್ಶನದಲ್ಲಿ ನೋಡಬೇಕೆಂದು ಬಹಳ ದಿನಗಳಿಂದ ಬಯಸುತ್ತಿದ್ದರು, ಇದೀಗ ನಿಮ್ಮ ಆಸೆಗ ಈಡೇರಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸಿನಿಮಾಗಳಲ್ಲೂ ಸಕ್ರಿಯರಾಗಿರುವ ನಟಿ
ಸದ್ಯ ಯಮುನಾ ಶ್ರೀನಿಧಿ ಅವರು ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಅರಮನೆ', 'ಅಶ್ವಿನಿ ನಕ್ಷತ್ರ', 'ಮಧು ಮಗಳು', 'ಒಂದೂರಲ್ಲಿ ರಾಜ ರಾಣಿ', 'ಅಮೃತವರ್ಷಿಣಿ', 'ಸಾಕ್ಷಿ', 'ಕಮಲಿ', 'ಮನಸಾರೆ', 'ಕನ್ಯಾಕುಮಾರಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಡ್ಯಾನ್ಸ್ ರಿಯಾಲಿಟಿ ಶೋ ಡಾನ್ಸ್ ಸಮರದಲ್ಲೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. 'ಮನಸಿನಾಟ', 'ಫೇಸ್ ಟು ಫೇಸ್', 'ಕರ್ಷಣಂ',' ಗಲ್ಲಿ ಬೇಕರಿ', 'ರನ್ನ, 'ರಾಂಧವ', 'ಕಾಪಾಲ', 'ಸೆಪ್ಟೆಂಬರ್ 13', 'ಲೊವೆ 360', 'ಶ್ರೀರಂಗ' ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.


Click it and Unblock the Notifications











