ತೀರ್ಥಹಳ್ಳಿ ಹುಡುಗಿ ಯಶಸ್ವಿನಿ ರವೀಂದ್ರ ಯಶಸ್ವಿ ನಟನಾ ಪಯಣ!

By ಪ್ರಿಯಾ ದೊರೆ

ಮುಂಗಾರು ಮಳೆ ಸಿನಿಮಾ ನೋಡಿ ಫಿದಾ ಆದ ಯಶಸ್ವಿನಿ ರವೀಂದ್ರ ನಟಿಸುವ ಆಸೆ ಪಟ್ಟರು. ಹೀಗಾಗಿ ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಬಂದು ಬಣ್ಣದ ಲೋಕವನ್ನು ಸೇರಿ ಬಿಟ್ಟರು. ಈಗ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಮಿಂಚುತ್ತಿದ್ದಾರೆ.

'ಕಮಲಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದ ಇವರು ರಚನಾ ಪಾತ್ರದಲ್ಲಿ ಕಾಣಿಸಿಕೊಂಡರು. ಹಲವು ವರ್ಷಗಳಿಂದ 'ಕಮಲಿ' ಧಾರಾವಾಹಿಯಲ್ಲೇ ಬ್ಯುಸಿಯಾಗಿದ್ದಾರೆ. ಈ ನಡುವೆ ಸಿನಿಮಾದಲ್ಲೂ ನಟಿಸಿದ್ದಾರೆ.

ಹಲವು ಆಡಿಷನ್‌ಗಳಲ್ಲಿ ಭಾಗವಹಿಸಿದ ಯಶಸ್ವಿನಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಉದಯ ವಾಹಿನಿಗೆ. ಬಳಿಕ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸಿದರು. ಇನ್ನು ಲೀಡ್ ರೋಲ್‌ಗಿಂತಲೂ ಪೋಷಕ ಪಾತ್ರಗಳೇ ಸರಿ ಎನ್ನುತ್ತಾರೆ ಯಶಸ್ವಿನಿ ರವೀಂದ್ರ.

ತೀರ್ಥಹಳ್ಳಿಯ ಪ್ರತಿಭೆ ಯಶಸ್ವಿನಿ!

ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಮಹಾನಗರಿ ಬೆಂಗಳೂರಿಗೆ ಕಾಲಿಟ್ಟರು. ಬೆಂಗಳೂರಿಗೆ ಬಂದ ಯಶಸ್ವಿನಿ ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸ ಮಾಡಿದರು. ಕೆಲಸ ಮಾಡುವ ಸಂದರ್ಭದಲ್ಲಿ ನೃತ್ಯದತ್ತ ಒಲವು ಮೂಡಿದ್ದ ಕಾರಣ ನೃತ್ಯ ಕಲಿಯುವ ಆಲೋಚನೆ ಮಾಡಿದರು, ಕಥಕ್ ನೃತ್ಯ ಕಲಿತರು. ಈ ನಡುವೆ 'ಮುಂಗಾರು ಮಳೆ' ಸಿನಿಮಾ ನೋಡಿದ ಯಶಸ್ವಿನಿ ಗಣೇಶ್ ಅಭಿನಯಕ್ಕೆ ಫಿದಾ ಆಗಿ ನಟನೆಯ ಕನಸು ಕಂಡರು.

ಉದಯ ಟಿವಿಯಿಂದ ನಟನೆ ಆರಂಭ!

ಮೊದಲ ಬಾರಿಗೆ ಉದಯ ಟಿವಿಯಲ್ಲಿ ಮೂಡಿ ಬಂದ 'ಸಾಕ್ಷಿ' ಧಾರಾವಾಹಿಯಲ್ಲಿ ಯಶಸ್ವಿನಿ ನಟಿಸಿದರು. ಇದರಲ್ಲಿ ಯಶಸ್ವಿನಿಗೆ ಬಂದ ಮೊದಲ ಪಾತ್ರ ಬಾಣಂತಿ ಪಾತ್ರ. ಇದನ್ನು ಮಾಡಲು ಒಪ್ಪದ ಕಾರಣ ಬಳಿಕ ಬೇರೆ ಪಾತ್ರವನ್ನು ನೀಡಲಾಯ್ತು. ಸಾಕ್ಷಿ ಧಾರಾವಾಹಿಯಲ್ಲಿ ದಿಶಾ ಹೆಸರಿನ 'ಬಬ್ಲಿ' ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ ಯಶಸ್ವಿನಿ ವೀಕ್ಷಕರ ಮನ ಸೆಳೆದು ಬಿಟ್ಟರು. ಬಳಿಕ 'ಮನೆದೇವ್ರು' ಎಂಬ ಧಾರಾವಾಹಿಯಲ್ಲಿಯೂ ಯಶಸ್ವಿನಿ ರವೀಂದ್ರ ನಟಿಸಿ ಸೈ ಎನಿಸಿಕೊಂಡರು. ಅನನ್ಯ ಪಾತ್ರದಲ್ಲಿ ವಿಲನ್ ಆಗಿ ಮಿಂಚಿದರು. ಹೀಗೆ ಬಣ್ಣದ ಲೋಕದಲ್ಲಿ ಒಂದೊಂದೆ ಹೆಜ್ಜೆ ಇಟ್ಟ ಯಶಸ್ವಿನಿ ಜೀ ಕನ್ನಡದಲ್ಲಿ ಮೂಡಿ ಬಂದ ಕಮಲಿ ಧಾರಾವಾಹಿಯಲ್ಲಿ ನಟಿಸಿದರು.

ಸಿನಿಮಾದಲ್ಲೂ ಯಶಸ್ವಿನಿ ನಟನೆ!

ಈ ನಡುವೆ ಯಶಸ್ವಿನಿ 'ಕಾಲವೇ ಮೋಸಗಾರ' ಎಂಬ ಸಿನಿಮಾದಲ್ಲಿ ನಟಿಸಿದರು. ಇದರಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿದರು. ನಾಲ್ಕು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ನಟನೆ ಬಗ್ಗೆ ಮಾತನಾಡುವ ಯಶಸ್ವಿನಿ, ಸಿನಿಮಾ ಕ್ಷೇತ್ರದಲ್ಲಿ ಮುನ್ನಡೆಯುವ ಆಸಕ್ತಿ ಇದೆ. ಹಾಗಾಗಿ ಧಾರಾವಾಹಿಗಳಲ್ಲಿ ನಾಯಕಿ ಪಾತ್ರ ಮಾಡಲು ಇಷ್ಟವಿಲ್ಲ. ಅಲ್ಲದೇ, ಧಾರಾವಾಹಿಯಲ್ಲಿ ನಾಯಕಿ ಪಾತ್ರವನ್ನು ಒಪ್ಪಿಕೊಂಡರೆ ಅಲ್ಲೇ ಇರಬೇಕಾಗುತ್ತದೆ. ಬೇರೆ ಅವಕಾಶಗಳು ಬಂದರೂ ಒಪ್ಪುವುದಕ್ಕೆ ಆಗುವುದಿಲ್ಲ ಎಂದು ಯಶಸ್ವಿನಿ ಅವರು ಹೇಳಿಕೊಂಡಿದ್ದಾರೆ.

ಫೋಟೋಶೂಟ್‌ನಲ್ಲಿ ಮಿಂಚಿದ ನಟಿ

ಯಶಸ್ವಿನಿ ನಟನೆಯನ್ನು ಕುಟುಂಬದವರು ಪ್ರೋತ್ಸಾಹಿಸುತ್ತಾರಂತೆ. ಮನೆಯವರ ಸಹಕಾರದಿಂದಲೇ ನಾನು ನಟನೆಯಲ್ಲಿ ಮುಂದುವರೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಇನ್ನು ಇದೀಗ ಕಡಕ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿರುವ ಯಶಸ್ವಿನಿ, ಬ್ಲ್ಯಾಕ್ ಔಟ್ ಫಿಟ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳಲ್ಲಿ ಬಾಲಿವುಡ್ ಬ್ಯೂಟಿಯಂತೆ ಕಾಣುತ್ತಿದ್ದಾರೆ.

More from Filmibeat

English summary
Actress Yashswini Ravindra Biography And Life Story Is Here, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X