ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸೆಕೆಂಡ್ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟ ಕನ್ನಡ ನಟಿಯರು ಇವರೇ ನೋಡಿ!
ಸಿನಿಮಾ ಧಾರಾವಾಹಿಗಳೆಲ್ಲರದರ ಜೊತೆಗೆ ಇದೀಗ ರಿಯಾಲಿಟಿ ಶೋಗಳದ್ದೇ ಹಾವಳಿ. ಕಳೆದ ಒಂದು ದಶಕದಿಂದ ನಾನಾ ರೀತಿಯಾಗಿ ರಿಯಾಲಿಟಿ ಶೋಗಳು ಹಲವಾರು ವಾಹಿನಿಗಳಲ್ಲಿ ನಡೆದು ಬರುತ್ತಿದೆ. ಇದಕ್ಕೆ ಅಷ್ಟೇ ರೀತಿಯ ಜನಾಭಿಮಾನ ಹಾಗೂ ದೊಡ್ಡ ಪ್ರೇಕ್ಷಕರ ಗುಂಪು ಸಿಕ್ಕಿರುವುದು ಹೌದು. ಅದರಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋ ಬೇರೆ ಬೇರೆ ಭಾಷೆಗಳಲ್ಲಿ ಬಹಳಷ್ಟು ಹೆಸರು ಮಾಡಿದೆ.
ಕನ್ನಡದ ಬಗ್ಗೆ ಮಾತನಾಡುವುದಾದರೆ ಕಳೆದ ಹತ್ತು ವರ್ಷದಿಂದ ಬಿಗ್ ಬಾಸ್ ರಿಯಾಲಿಟಿ ಶೋ ಅದ್ಭುತವಾಗಿ ನಡೆದುಬಂದಿದೆ. ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಈ ಶೋಗೆ ದೊಡ್ಡ ಮಟ್ಟಿನಲ್ಲಿ ಪ್ರೇಕ್ಷಕರ ಬೆಂಬಲವಿದೆ.

ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ ಹತ್ತರ ವಿನ್ನರ್ ಘೋಷಣೆಯಾಗಿದ್ದು ಈ ಬಗ್ಗೆ ಬಹಳ ಪರ ವಿರೋಧ ಚರ್ಚೆಗಳು ನಡೆದವು. ನಟಿ ಸಂಗೀತಾ ಶೃಂಗೇರಿ ಅವರು ಮೊದಲಿನಿಂದ ಕೊನೆಯವರೆಗೂ ಒಳ್ಳೆಯ ರೀತಿಯ ಫೈಟ್ ಕೊಟ್ಟಿದ್ದರು. ಆಕೆಯೇ ಬಿಗ್ ಬಾಸ್ ವಿನ್ನರ್ ಎಂಬ ಕೂಗು ಹೆಚ್ಚಾಗಿ ಕೇಳಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲರಿಗೂ ಅಚ್ಚರಿಯಾಗುವಂತೆ ಆಕೆ ಸೆಕೆಂಡ್ ರನ್ನರ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಇಂತಹ ರಿಯಾಲಿಟಿ ಶೋಗಳಲ್ಲಿ ಹೆಣ್ಣು ಮಕ್ಕಳು ವಿನ್ ಆಗುವುದೇ ತೀರಾ ಕಡಿಮೆ. ಹೆಣ್ಣುಮಕ್ಕಳಿಗೂ ಇಂತಹ ಶೋಗಳನ್ನು ಗೆಲ್ಲುವ ಎಲ್ಲಾ ರೀತಿಯ ಸಾಮರ್ಥ್ಯವೂ ಇದೆ, ಎಂಬ ಒಂದು ವಾದವೇ ಇದೆ. ಈ ಹತ್ತು ಸೀಸನ್‌ಗಳಲ್ಲಿ ಒಂದೇ ಒಂದು ಸೀಸನ್‌ನಲ್ಲಿ ಹೆಣ್ಣು ಮಗಳು ಗೆದ್ದಿದ್ದಷ್ಟೇ ಬಿಟ್ಟರೆ ಮತ್ತೆಲ್ಲವೂ ಕೊನೆಯಲ್ಲಿ ತಪ್ಪಿದೆ. ಹಾಗಾದರೆ ಬಿಗ್ ಬಾಸ್ ಕನ್ನಡದ ರಿಯಾಲಿಟಿ ಶೋನಲ್ಲಿ 10 ಸೀಸನ್‌ನಲ್ಲಿ ಸೆಕೆಂಡ್ ರನ್ನರ್ ಸ್ಥಾನವನ್ನು ಪಡೆದು ತೃಪ್ತಿಗೊಂಡ ಹೆಣ್ಣು ಮಕ್ಕಳ ಲಿಸ್ಟ್ ಅನ್ನೊಮ್ಮೆ ನೋಡೋಣ ಬನ್ನಿ.

ಬಿಗ್ ಬಾಸ್ ಸೀಸನ್ 1ರಲ್ಲಿ ನಟಿ ನಿಕಿತಾ ಅವರು ಸಖತ್ ಫೈಟ್ ಕೊಟ್ಟಿದ್ದರು. ಭಾಷೆ ಬಾರದಿದ್ದರೂ ಕನ್ನಡವನ್ನು ಕಲಿತು ಆದಷ್ಟು ಚೆನ್ನಾಗಿ ಮಾತಾಡಿ ತಮ್ಮ ಭಾಷಾಭಿಮಾನಕ್ಕೆ ಹೆಸರಾಗಿದ್ದರು. ಈಕೆ ಸೀಸನ್ ಅನ್ನು ವಿನ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಸೆಕೆಂಡ್ ರನ್ನರ್ ಅಪ್ ಸ್ಥಾನವನ್ನು ಪಡೆದರು.
ಬಿಗ್ ಬಾಸ್ ಸೀಸನ್ 2ನಲ್ಲಿ 'ಚಿಂಗಾರಿ' ಸಿನಿಮಾ ಖ್ಯಾತಿಯ ನಟಿ ದೀಪಿಕಾ ಅವರು ಸೆಕೆಂಡ್ ರನ್ನರ್ ಅಪ್ ಸ್ಥಾನವನ್ನು ಒಪ್ಪುವಂತಾಯ್ತು. ಇನ್ನು ಸೀಸನ್ 4 ರಲ್ಲಿ ಸ್ಪರ್ಶ ಸಿನಿಮಾ ಖ್ಯಾತಿಯ ಹಿರಿಯ ನಟಿ ರೇಖಾ ಸ್ಪರ್ಶ ಅವರು ತಮ್ಮ ನಡತೆ ಹಾಗೂ ಫೈಟಿಂಗ್ ಸ್ಪಿರಿಟ್‌ನಲ್ಲಿ ಇಡೀ ಸೀಸನ್‌ನಲ್ಲಿ ಒಳ್ಳೆಯ ಸ್ಪರ್ಧಿ ಎನಿಸಿಕೊಂಡು ಕೊನೆಗೆ ಸೆಕೆಂಡ್ ರನ್ನರ್ ಪಡೆದರು. ಬಿಗ್ ಬಾಸ್ ಸೀಸನ್ ಆರರಲ್ಲಿ ನಟಿ ಹಾಗೂ ನೃತ್ಯಗಾರ್ತಿ ಕವಿತಾ ಗೌಡ ಅವರದು ಅದೇ ಕಥೆ. ಆಕೆಯೂ ಒಳ್ಳೆಯ ಫೈಟ್ ಕೊಟ್ಟಿದ್ದರೂ ಆಕೆ ಸೆಕೆಂಡ್ ರನ್ನರ್ ಸ್ಥಾನವನ್ನು ಪಡೆದರು.
ನಟಿ ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಹೆಸರು ಮಾಡಿದ್ದಲ್ಲದೆ ತುಂಬಾ ಒಳ್ಳೆ ಫೈಟ್ ಅನ್ನೇ ಕೊಟ್ಟಿದ್ದರು. ಆಕೆಯೂ ಕೂಡಾ ಸೆಕೆಂಡ್ ರನ್ನರ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
'ನಾಗಿಣಿ' ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್ ಅವರು ತಮ್ಮ ಗುಣ ನಡತೆ ಹಾಗೂ ಫೈಟಿಂಗ್ ಸ್ಪಿರಿಟ್‌ಗೆ ಹೆಸರು ಮಾಡಿದ್ದರು. ಆಕೆಯೂ ಸೆಕೆಂಡ್ ರನ್ನರ ಸ್ಥಾನ ಪಡೆದರು. ಈ ಬಾರಿ ಸೀಸನ್ ಹತ್ತರಲಿ ನಟಿ ಸಂಗೀತಾ ಶೃಂಗೇರಿ ಅವರು ಪಡೆದಿದ್ದು ಬಹಳಷ್ಟು ಅಭಿಮಾನಿಗಳಿಗೆ ಬೇಸರ ತಂದಿದೆ. ಆಕೆ ವಿನ್ನರ್ ಅಲ್ಲದಿದ್ದರೂ ರನ್ನರ್ ಆಗುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದರು ಎಂದು ಬಹಳಷ್ಟು ಇದೆ.


Click it and Unblock the Notifications