ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ

Recommended Video

ಆದಂ ಪಾಷಾಗೆ ಅಕುಲ್ ಮೇಲೆ ಬೇಸರ | FILMIBEAT KANNADA

'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ಆದಮ್ ಪಾಶಾ ಹೊರ ನಡೆದಿದ್ದಾರೆ. ಕಾರಣ, ಆದಮ್ ಪಾಶಾಗೆ ಅವಮಾನ ಆಗುವ ರೀತಿಯಲ್ಲಿ ವೇದಿಕೆ ಮೇಲೆ ಅಕುಲ್ ಬಾಲಾಜಿ ಮಾತನ್ನಾಡಿದ್ದಾರೆ. ನಿರ್ದೇಶಕಿ ಶ್ರದ್ಧಾ ಧಮ್ಕಿ ಹಾಕಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗೆ ಬ್ರೇಕ್ ಆಯ್ತು.

''ಅಕುಲ್ ಬಾಲಾಜಿ ಸ್ತ್ರೀಲಿಂಗ, ಪುಲ್ಲಿಂಗ ಅಂತೆಲ್ಲಾ ಕೆಟ್ಟದಾಗಿ ನನ್ನ ಬಗ್ಗೆ ಜೋಕ್ ಮಾಡಿದ್ದಾರೆ. ಇನ್ನೂ ''ಜನರಿಂದ ಜಾಸ್ತಿ ವೋಟ್ಸ್ ಬಂದಿದ್ದರೂ, ನಿಮ್ಮನ್ನ ಎಲಿಮಿನೇಟ್ ಮಾಡಬಹುದು'' ಎಂದು ನಿರ್ದೇಶಕಿ ಶ್ರದ್ಧಾ ಹೇಳಿದ್ದಾರೆ. ಹೀಗಾಗಿ, ಆ ಶೋನಲ್ಲಿ ನಾನು ಮುಂದುವರೆಯುವುದಿಲ್ಲ. ಇಬ್ಬರ ಮೇಲೆಯೂ ಕಂಪ್ಲೇಂಟ್ ಕೊಡುವೆ'' ಎಂದು ಬೆಳಗ್ಗೆ ಆದಮ್ ಪಾಶಾ ಹೇಳಿದ್ದರು.

ಆದಮ್ ಪಾಶಾ ಮಾಡಿರುವ ಈ ಆರೋಪದ ಬಗ್ಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಅಕುಲ್ ಬಾಲಾಜಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಕುಲ್ ಏನು ಹೇಳಿದ್ದಾರೆ ಅಂತ ನೀವೇ ಓದಿರಿ, ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ....

ಧಕ್ಕೆ ತರುವ ಹಾಗೆ ಮಾತನಾಡಿಲ್ಲ

ಧಕ್ಕೆ ತರುವ ಹಾಗೆ ಮಾತನಾಡಿಲ್ಲ

''ತಕಧಿಮಿತ' ಎಂಟರ್ ಟೈನ್ಮೆಂಟ್ ಶೋ. ಒಬ್ಬರಿಗೆ ಧಕ್ಕೆ ತರುವ ಹಾಗೆ ನಾವು ಯಾವತ್ತೂ ಮಾತನಾಡುವುದಿಲ್ಲ. ಬಹುಶಃ ಆದಮ್ ಈ ವಾರ ಎಲಿಮಿನೇಟ್ ಆಗುತ್ತಿದ್ದ. ಯಾಕಂದ್ರೆ, ಪರ್ಫಾಮೆನ್ಸ್ ಚೆನ್ನಾಗಿರಲಿಲ್ಲ ಅಂತ ತೀರ್ಪುಗಾರರು ಹೇಳಿದ್ದರು'' ಅಂತಾರೆ ಅಕುಲ್ ಬಾಲಾಜಿ.

ತಮಾಷೆಯಿಂದ ರೇಗಿಸ್ತೀನಿ ಅಷ್ಟೇ.!

ತಮಾಷೆಯಿಂದ ರೇಗಿಸ್ತೀನಿ ಅಷ್ಟೇ.!

''ಶೋನಲ್ಲಿ ಪ್ರಾಬ್ಲಂ ಆಗಿದ್ದರೆ ಆದಮ್ ಪಾಶಾ ವಾಹಿನಿಯವರ ಜೊತೆಗೆ ಮಾತನಾಡಬೇಕು. ನಾನು ನಿರೂಪಕ ಅಷ್ಟೇ. ತಮಾಷೆಯಿಂದ ರೇಗಿಸ್ತೀವಿ ಅನ್ನೋದು ಬಿಟ್ಟರೆ ಧಕ್ಕೆ ತರುವ ಹಾಗೆ ಯಾವತ್ತೂ ಮಾಡಿಲ್ಲ'' - ಅಕುಲ್ ಬಾಲಾಜಿ.

ಆದಮ್ ಪಾರ್ಟ್ನರ್ ಕಂಪ್ಲೇಂಟ್

ಆದಮ್ ಪಾರ್ಟ್ನರ್ ಕಂಪ್ಲೇಂಟ್

''ಚೆನ್ನಾಗಿ ಪರ್ಫಾಮ್ ಮಾಡಿಲ್ಲ ಅಂದ್ರೆ ಗದರಿಸುತ್ತಾರೆ ಅಂತ ಆದಮ್ ಪಾರ್ಟ್ನರ್ ಕಂಪ್ಲೇಂಟ್ ಮಾಡಿದ್ದರು. ನಾನು ಆಗ ಹೀಗೆಲ್ಲ ಮಾಡಬೇಡಿ, ಕೋ-ಕಂಟೆಸ್ಟೆಂಟ್ ನ ಚೇಂಜ್ ಮಾಡುವ ಅಧಿಕಾರ ಯಾರಿಗೂ ಇಲ್ಲ ಅಂತ ಹೇಳಿದ್ದೆ'' - ಅಕುಲ್ ಬಾಲಾಜಿ.

ಸತ್ಯ ಹೊರಗೆ ಬರುತ್ತದೆ

ಸತ್ಯ ಹೊರಗೆ ಬರುತ್ತದೆ

''ನನಗೆ ಆದಮ್ ಪಾಶಾ ಬಗ್ಗೆ ಗೊತ್ತಿರಲಿಲ್ಲ. ಸ್ಟೇಜ್ ಮೇಲೆ ಬಂದಾಗಲೇ ಗೊತ್ತಾಗಿದ್ದು. ಕಂಪ್ಲೇಂಟ್ ಕೊಡುವ ಹಾಗಿದ್ದರೆ ಕೊಡಲಿ, ಸತ್ಯ ಹೊರಗೆ ಬರುತ್ತದೆ. ಆಂಕರ್ ಆಗಿ ನನ್ನ ಕೆಲಸ ನಾನು ವೇದಿಕೆ ಮೇಲೆ ಮಾಡಿದ್ದೇನೆ. ಈ ಬಗ್ಗೆ ವಾಹಿನಿಯವರು ನಿರ್ಧಾರ ಮಾಡಲಿ'' - ಅಕುಲ್ ಬಾಲಾಜಿ.

More from Filmibeat

English summary
Adam Pasha annoyed with Akul Balaji in 'Takadhimita' Dance reality show. Here is a reaction of Akul Balaji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X