For Quick Alerts
  ALLOW NOTIFICATIONS  
  For Daily Alerts

  ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!

  |

  'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಆದಂ ಪಾಶಾ ಕಾಣಿಸಿಕೊಂಡಿದ್ದು 'ತಕಧಿಮಿತ' ಶೋನಲ್ಲಿ. ಡ್ಯಾನ್ಸ್ ರಿಯಾಲಿಟಿ ಶೋ ಆಗಿರುವ 'ತಕಧಿಮಿತ' ಶುರುವಾಗಿ ಇನ್ನೂ ಎರಡು ವಾರ ಕಳೆದಿಲ್ಲ. ಅಷ್ಟು ಬೇಗ ಈ ಕಾರ್ಯಕ್ರಮ ವಿವಾದಕ್ಕೀಡಾಗಿದೆ.

  'ತಕಧಿಮಿತ' ವೇದಿಕೆ ಮೇಲೆ ಆದಂ ಪಾಶಾಗೆ ಅಕುಲ್ ಬಾಲಾಜಿ ಅವಮಾನ ಮಾಡಿದ್ರಂತೆ. ಇನ್ನೂ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಕೂಡ ಧಮ್ಕಿ ಹಾಕಿದ್ದಾರೆ ಎಂದು ಆದಂ ಪಾಶಾ ಆರೋಪಿಸಿದ್ದಾರೆ.

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ 'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  ತಮ್ಮ ಜೆಂಡರ್ ಬಗ್ಗೆ ಅಕುಲ್ ಬಾಲಾಜಿ ಅವಹೇಳನ ಮಾಡಿರುವ ಕಾರಣ ''ನನಗೆ ಹಾಗೂ ನನ್ನ ಸಮುದಾಯಕ್ಕೆ ಅಕುಲ್ ಕ್ಷಮೆ ಕೇಳಲೇಬೇಕು'' ಎಂದು ಆದಂ ಪಾಶಾ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಇನ್ಮುಂದೆ 'ತಕಧಿಮಿತ' ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ಆದಂ ಪಾಶಾ ಹೇಳಿದ್ದಾರೆ. ಮುಂದೆ ಓದಿರಿ....

  ಎಲ್ಲವೂ ಪರಮೇಶ್ವರ್ ಗುಂಡ್ಕಲ್ ಕೈಯಲ್ಲಿದೆ

  ಎಲ್ಲವೂ ಪರಮೇಶ್ವರ್ ಗುಂಡ್ಕಲ್ ಕೈಯಲ್ಲಿದೆ

  ''ಪರಮೇಶ್ವರ್ ಗುಂಡ್ಕಲ್ ನನಗೆ ಫೋನ್ ಮಾಡಿ ಭೇಟಿ ಆಗುವಂತೆ ಹೇಳಿದರು. ಈಗಷ್ಟೇ ಅವರೊಂದಿಗೆ ಮಾತನಾಡಿದೆ. ಎಲ್ಲವನ್ನೂ ಸದ್ಯ ಪರಮೇಶ್ವರ್ ಗುಂಡ್ಕಲ್ ಸರ್ ಕೈಯಲ್ಲಿ ಬಿಟ್ಟಿದ್ದೇನೆ. ನನ್ನ ನೋವನ್ನ ಅವರ ಮುಂದೆ ಹೇಳಿಕೊಂಡಿದ್ದೇನೆ'' - ಆದಂ ಪಾಶಾ.

  ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.! ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!

  ಅಕುಲ್ ಕ್ಷಮೆ ಕೇಳಬೇಕು

  ಅಕುಲ್ ಕ್ಷಮೆ ಕೇಳಬೇಕು

  ''ಇನ್ಮೇಲೆ ನಾನು 'ತಕಧಿಮಿತ' ಶೋ ಮಾಡಲ್ಲ. ಅದಂತೂ ಖಚಿತ. ಅಕುಲ್ ಬಾಲಾಜಿ ನನ್ನ ಬಳಿ ಕ್ಷಮೆ ಕೇಳಲೇಬೇಕು. ಯಾಕಂದ್ರೆ, ಶೋ ಪ್ರಾರಂಭ ಆಗುವಾಗ ನನ್ನ ಸಮುದಾಯದ ಮುಖ್ಯಸ್ಥರು ಪಾಲ್ಗೊಂಡಿದ್ದರು. ಇಂಥದ್ದು ಮುಂದುವರೆಯಬಾರದು. ಹೀಗಾಗಿ ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು'' ಎನ್ನುತ್ತಾರೆ ಆದಂ ಪಾಶಾ.

  ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?

  ಘಟನೆ ಬಗ್ಗೆ ಬೇಸರ ಇದೆ

  ಘಟನೆ ಬಗ್ಗೆ ಬೇಸರ ಇದೆ

  ''ಪರಮೇಶ್ವರ್ ಗುಂಡ್ಕಲ್ ಈಗಾಗಲೇ ಅಕುಲ್ ಮತ್ತು ಶ್ರದ್ಧಾ ಜೊತೆಗೆ ಮಾತನಾಡಿದ್ದಾರೆ. ಅವರೇನು ಮಾತನಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಕಲರ್ಸ್ ಚಾನೆಲ್ ನನಗೆ ವೇದಿಕೆ ಕಲ್ಪಿಸಿಕೊಟ್ಟಿತು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆದ್ರೆ, ನಡೆದಿರುವ ಘಟನೆ ಬಗ್ಗೆ ಬೇಸರ ಇದೆ'' - ಆದಂ ಪಾಶಾ.

  ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ

  ನನಗೆ ವೋಟ್ ಹಾಕಬೇಡಿ

  ನನಗೆ ವೋಟ್ ಹಾಕಬೇಡಿ

  ''ಇನ್ಮೇಲೆ ನಾನು 'ತಕಧಿಮಿತ' ಶೋಗೆ ಹೋಗಲ್ಲ. ನನ್ನ ಫೋಟೋ ಇನ್ನೂ ವೋಟಿಂಗ್ ಲಿಸ್ಟ್ ನಲ್ಲಿದೆ. ದಯವಿಟ್ಟು ನನಗಾಗಿ ವೋಟ್ ಮಾಡಬೇಡಿ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ'' ಎಂದು ಜನರ ಬಳಿ ಆದಂ ಪಾಶಾ ಕೇಳಿಕೊಂಡಿದ್ದಾರೆ.

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  English summary
  Adam Pasha demands Akul Balaji's apology in 'Takadhimita' show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X