For Quick Alerts
  ALLOW NOTIFICATIONS  
  For Daily Alerts

  ಆದಂ 'ತಕಧಿಮಿತ' ಶೋ ಕ್ವಿಟ್ ಮಾಡಿದ್ದು ವೀಕ್ಷಕರಿಗೆ ಮಾಡಿದ ಅವಮಾನ.!

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಆದಂ ಪಾಶಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  ಆದ್ರೆ, 'ತಕಧಿಮಿತ' ಶುರುವಾದ ಎರಡೇ ವಾರಗಳಲ್ಲಿ ಕಾರ್ಯಕ್ರಮದಿಂದ ಆದಂ ಪಾಶಾ ಹೊರನಡೆದಿದ್ದಾರೆ. ವೇದಿಕೆ ಮೇಲೆ ಆದಂ ಪಾಶಾ ಜೆಂಡರ್ ಬಗ್ಗೆ ಮಾತನಾಡಿ ಅಕುಲ್ ಬಾಲಾಜಿ ಅವಮಾನ ಮಾಡಿದ್ರಂತೆ. ಹಾಗೇ, ಶೋ ನಿರ್ದೇಶಕಿ ಶ್ರದ್ಧಾ ಕೂಡ ಧಮ್ಕಿ ಹಾಕಿದ್ರಂತೆ. ಹೀಗಂತ ಆರೋಪಿಸಿ 'ತಕಧಿಮಿತ' ಕಾರ್ಯಕ್ರಮಕ್ಕೆ ಆದಂ ಪಾಶಾ ಗುಡ್ ಬೈ ಹೇಳಿದ್ದಾರೆ.

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  ಹಾಗ್ನೋಡಿದ್ರೆ, ಆದಂ ಪಾಶಾ ಮತ್ತು ಪುನೀತ್ ನಾಯಕ್ ಜೋಡಿ ಈ ವಾರ ಡೇಂಜರ್ ಝೋನ್ ನಲ್ಲಿದ್ದರು. ಎಲಿಮಿನೇಷನ್ ಪ್ರಕ್ರಿಯೆ ನಡೆಯುವ ಮುನ್ನವೇ ವೀಕ್ಷಕರ ತೀರ್ಪು ಧಿಕ್ಕರಿಸಿ, ಆದಂ ಶೋನ ಕ್ವಿಟ್ ಮಾಡಿರುವುದಕ್ಕೆ ತೀರ್ಪುಗಾರರಾದ ಅನುರಾಧಾ ವಿಕ್ರಾಂತ್, ರವಿಚಂದ್ರನ್ ಮತ್ತು ಸುಮನ್ ರಂಗನಾಥ್ ಬೇಸರ ವ್ಯಕ್ತಪಡಿಸಿದರು. ಮುಂದೆ ಓದಿರಿ...

  ಆದಂ ಪಾಶಾ ಬಗ್ಗೆ ಉಲ್ಲೇಖ.!

  ಆದಂ ಪಾಶಾ ಬಗ್ಗೆ ಉಲ್ಲೇಖ.!

  ಎಲಿಮಿನೇಷನ್ ಬಗ್ಗೆ ಚರ್ಚೆ ಆರಂಭಗೊಂಡಾಗ, ''ಆದಂ ಪಾಶಾ ಶೋನ ಕ್ವಿಟ್ ಮಾಡಿದ್ದಾರೆ. ಅವರಿಗೆ ವೇದಿಕೆ ಮೇಲೆ ಅವಮಾನ ಆಗಿದ್ಯಂತೆ. ಹೀಗಾಗಿ ವಾಪಸ್ ಬರಲ್ಲ ಅಂತ ಹೇಳಿದರು'' ಎಂದು ಆದಂ ಡ್ಯಾನ್ಸ್ ಪಾರ್ಟ್ನರ್ ಪುನೀತ್ ನಾಯಕ್ ವೇದಿಕೆ ಮೇಲೆ ಹೇಳಿದರು. ಅಲ್ಲದೇ, ''ನಾನು ಪರ್ಫಾಮ್ ಮಾಡಲೇಬೇಕು. ಒಬ್ಬನೇ ಬೇಕಾದರೆ ಪರ್ಫಾಮ್ ಮಾಡುತ್ತೇನೆ. ನನಗೆ ಸಿಕ್ಕಿರುವ ಅವಕಾಶ ಬಿಡಲ್ಲ'' ಎಂದು ಪುನೀತ್ ನಾಯಕ್ ಕೇಳಿಕೊಂಡರು.

  ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!

  ದೊಡ್ಡ ಕಪ್ಪು ಚುಕ್ಕೆ

  ದೊಡ್ಡ ಕಪ್ಪು ಚುಕ್ಕೆ

  ''ಕ್ವಿಟ್ ಮಾಡುವುದು ಹೇಗೆ ಅಂದ್ರೆ, ಸಾಯುವ ಮುನ್ನವೇ ಸಾಯುವುದು. ಅವಮಾನ ಇಲ್ಲದೇ ಸನ್ಮಾನ ಯಾರಿಗೂ ಆಗಲು ಸಾಧ್ಯವೇ ಇಲ್ಲ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಇದ್ದು ಜೈಯಿಸಬೇಕು. ಕಲೆ ಇದ್ದರೆ, ವಾಪಸ್ ಬಂದು ಪ್ರೂವ್ ಮಾಡಿ. ಇಲ್ಲಾಂದ್ರೆ, ಇನ್ನೊಂದು ಕಡೆ ಹೋಗಿ ಪ್ರೂವ್ ಮಾಡಿ. ಕ್ವಿಟ್ ಮಾಡುವುದು ಅಂದ್ರೆ ಜೀವನದಲ್ಲಿ ದೊಡ್ಡ ಕಪ್ಪು ಚುಕ್ಕೆ ಇದ್ದ ಹಾಗೆ'' ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

  ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ

  ಗೌರವ ಕೊಟ್ಟು ಇರಬೇಕಿತ್ತು.!

  ಗೌರವ ಕೊಟ್ಟು ಇರಬೇಕಿತ್ತು.!

  ''ಆದಂ ಪಾಶಾ ಈ ವೇದಿಕೆ ಮತ್ತು ಅವರಲ್ಲಿ ಇರುವ ಕಲೆಗೆ ಗೌರವ ಕೊಟ್ಟು ಇಲ್ಲಿರಬೇಕಿತ್ತು ಅಂತ ಅನ್ಸತ್ತೆ'' ಅಂತ ಅನುರಾಧಾ ವಿಕ್ರಾಂತ್ ಹೇಳಿದರು.

  ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!

  ಆಟಿಟ್ಯೂಡ್ ಪ್ರಾಬ್ಲಂ

  ಆಟಿಟ್ಯೂಡ್ ಪ್ರಾಬ್ಲಂ

  ''ಅವರ ಆಟಿಟ್ಯೂಡ್ ಕರೆಕ್ಟ್ ಇಲ್ಲ ಅಂತ ಅನಿಸುತ್ತೆ ನನಗೆ'' ಎಂದುಬಿಟ್ಟರು ನಟಿ ಸುಮನ್ ರಂಗನಾಥ್.

  ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?

  ಅಕುಲ್ ಬಾಲಾಜಿ ಏನಂದರು.?

  ಅಕುಲ್ ಬಾಲಾಜಿ ಏನಂದರು.?

  ''ಎಲ್ಲೋ ಒಂದು ಕಡೆ ಆದಂ ಶೋನ ಬಿಟ್ಟು ಹೋಗಿದ್ದಕ್ಕೆ ಬೇಜಾರು ಆಗುತ್ತೆ. ಶೋನ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುವುದು ನೀವಲ್ಲ, ವೀಕ್ಷಕರು.! ಇದು ವೀಕ್ಷಕರಿಗೆ ಅವಮಾನ ಮಾಡಿದ ಹಾಗೆ. ಏನೇ ನೋವು ಆಗಿದ್ದರೂ, ನಮ್ಮ ಮತ್ತು ತೀರ್ಪುಗಾರರ ಜೊತೆ ಮಾತನಾಡಿದರೆ, ಪರಿಹಾರ ಆಗುತ್ತೆ. ಆದಂ ಕ್ವಿಟ್ ಮಾಡಿರುವುದರಿಂದ ವೇದಿಕೆಗೆ, ತೀರ್ಪುಗಾರರಿಗೆ, ವೀಕ್ಷಕರಿಗೆ ಅವಮಾನ ಆಗಿದೆ. ಆದಂ ಇಲ್ಲಿ ಇಲ್ಲ. ಅವರ ಪರವಾಗಿ ನಾವು ಕ್ಷಮೆ ಕೇಳುತ್ತಿದ್ದೇವೆ'' ಎಂದು ಕೈ ಮುಗಿದರು ಅಕುಲ್ ಬಾಲಾಜಿ.

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  English summary
  Bigg Boss Kannada 6 Contestant Adam Pasha quits 'Takadhimita' Dance reality show. Have a look at the Judges reaction. Crazy Star Ravichandran, Anuradha Vikranth and Suman Ranganath are not happy with Adam Pasha's decision.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X