ರಾಜಾ-ರಾಣಿಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸ್ತಾ ಇದೆ; ಬಾಣಂತಿಯಲ್ಲೇ ಶೋಗೆ ಬಂದ ಬಗ್ಗೆ ಅದಿತಿ ಮಾತು

By ಎಸ್ ಸುಮಂತ್

'ರಾಜಾ-ರಾಣಿ' ರಿಲೋಡೆಡ್ ರಿಯಾಲಿಟಿ ಶೋ ಎಲ್ಲರಿಗೂ ಸಾಕಷ್ಟು ಇಷ್ಟವಾದಂತ ಶೋ ಆಗಿದೆ. ಈ ಬಾರಿ ಬೇರೆ ಬೇರೆ ವಿಭಾಗಗಳಿಂದ ಜೋಡಿಗಳು ಬಂದಿದ್ದು, ಒಳ್ಳೆ ಮನರಂಜನೆ ನೀಡುತ್ತಿದ್ದಾರೆ.

ತಾರಾ, ಸೃಜನ್ ಲೋಕೇಶ್, ಅದಿತಿ ಪ್ರಭುದೇವ ಈ ಬಾರಿಯ ಜಡ್ಜ್ ಆಗಿದ್ದಾರೆ. ಅದಿತಿ ಪ್ರಭುದೇವ ಈ ಶೋಗೆ ಬರುತ್ತಿದ್ದಂತೆ ಸಾಕಷ್ಟು ಜನರಿಗೆ ಆಶ್ಚರ್ಯವಾಗಿತ್ತು. ಆಗಿನ್ನು ಹುಟ್ಟಿದ ಮಗುವನ್ನು ಬಿಟ್ಟು ಬಂದಿದ್ದಾರೆ ಎಂಬ ಮಾತುಗಳು ಬಂದವು. ಅಂದ್ರೆ ಹಾಲು ಕುಡಿಯುವ ಮಗುವನ್ನು ಬಿಟ್ಟು ಬಂದಿದ್ದಾರೆ ಎಂಬುದು.

Aditi Prabhudeva shares what she learnt from Raja Rani show

ರಾಜಾರಾಣಿಗೆ ಬಂದ ಮೇಲೆ ಅದಿತಿ ಪ್ರಭುದೇವ ಲೈಫ್‌ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ತುಂಬಾನೇ ಎಂಜಾಯ್ ಮಾಡಿದ್ದಾರೆ. ಟ್ರೋಲರ್‌ಗಳಿಗೆ, ನೆಗೆಟಿವ್ ಕಮೆಂಟ್ ಮಾಡಿದವರಿಗೆ ನಾನ್ಯಾಕೆ ರಾಜಾ-ರಾಣಿಗೆ ಬಂದೆ ಎಂಬುದನ್ನು ತಿಳಿಸಿದ್ದಾರೆ‌.

ಲೈವ್ ಬಂದ ಅದಿತಿ ಪ್ರಭುದೇವ

ರಾಜಾರಾಣಿ ರಿಯಾಲಿಟಿ ಶೋಗೆ ಬಂದಿರುವ ಅದಿತಿ ಪ್ರಭುದೇವ ಇಂದು ಇನ್ಸ್ಟಾಗ್ರಾಮ್ ಲೈವ್‌ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ‌ ನೀಡಿದ್ದಾರೆ. ರಿಯಾಲಿಟಿ ಶೋನಲ್ಲಿ ತುಂಬಾನೇ ಎಂಜಾಯ್ ಮಾಡ್ತಾ ಇದ್ದೀನಿ. ನನ್ನ ಜೀವನದಲ್ಲಿಯೇ ಅಷ್ಟೊಂದು ನಕ್ಕಿರಲಿಲ್ಲ. ಈ ಶೋನಲ್ಲಿ ಅಷ್ಟು ನಗ್ತೀನಿ ಎಂದು ಹೇಳಿಕೊಂಡಿದ್ದಾರೆ.

ಮಗುವನ್ನು ಬಿಟ್ಟು ಬರ್ತಾರಾ?

ಇನ್ನು ನಿಮ್ಮ ಲೈಫ್ ಹೇಗೆ ಸಾಗುತ್ತಾ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅದಿತಿ ಪ್ರಭುದೇವ, ಇದು ತೀರಾ ವೈಯಕ್ತಿಕ ವಿಚಾರ ಆದರೂ ಹಂಚಿಕೊಳ್ಳಬೇಕು ಎನಿಸುತ್ತಿದೆ. ರಾಜಾ-ರಾಣಿ ತಂಡ ನಂಗೆ ತುಂಬಾ ಸಪೋರ್ಟಿವ್ ಆಗಿದೆ. ನನ್ನ ಮಗಳ ಜೊತೆಗೆ ಸಮಯ ಕಳೆಯುವುದಕ್ಕೂ ಆಗಾಗ ಬ್ರೇಕ್ ಕೊಡುತ್ತಾರೆ ಎಂದಿದ್ದಾರೆ. ಈ ಮೂಲಕ ಮಗುವನ್ನ ಮನೆಯಲ್ಲಿ ಬಿಟ್ಟು ಶೂಟಿಂಗ್ ಬರಲ್ಲ. ಬದಲಿಗೆ ಜೊತೆಗೆ ಕರೆದುಕೊಂಡು ಬಂದು ಮಗುವಿಗೆ ಬೇಕಾದ ಹಾಲು, ನಿದ್ದೆ, ತಾಯಿಯ ಅಪ್ಪುಗೆ ಎಲ್ಲದನ್ನು ಕೊಡುತ್ತಿದ್ದಾರೆ ಎಂಬುದು ಅರ್ಥ.

Aditi Prabhudeva shares what she learnt from Raja Rani show

ಅಸ್ತಿತ್ವ ಕಂಡುಕೊಂಡೆ ಎಂದ ಅದಿತಿ

'ನಂಗೆ ಮಗು ಹುಟ್ಟುವುದಕ್ಕೂ ಮುಂಚೆ ನಾನಾಯ್ತು, ನನ್ನ ಮನೆ ಕೆಲಸ ಆಯ್ತು, ಬ್ಲಾಗ್ ಆಯ್ತು ಅಂತ ಇದ್ದು ಬಿಟ್ಟೆ. ಅದು ಹತ್ತಿರತ್ತಿರ ಒಂದು ವರ್ಷ. ಆದರೆ ಈಗ ವಾರಕ್ಕೊಮ್ಮೆಯಾದರೂ ಜನರ ಜೊತೆಗೆ ಬೆರೀತೀನಿ. ವಿಭಿನ್ನ ವ್ಯಕ್ತಿತ್ವಗಳು ತಿಳಿಯುತ್ತೆ. ನಾನು ಶೂಟಿಂಗ್ ಬಂದರು ನನ್ನ ಮಗಳು ನನ್ನ ಜೊತೆಗೆ ಇರುತ್ತಾಳೆ. ಆದರೆ ಜನರನ್ನ ನೋಡ್ತೀನಿ, ಮಾತಾಡ್ತೀನಿ. ರಾಜಾ ರಾಣಿಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸ್ತಾ ಇದೆ' ಎಂದಿದ್ದಾರೆ.

ಪ್ರೀತಿ ಬಗ್ಗೆ ಹೇಳಿದ ಅದಿತಿ

'ರಾಜಾ-ರಾಣಿ ಶೋ ತುಂಬಾ ಇಷ್ಟವಾಗುವುದು ಯಾಕೆ ಅಂದ್ರೆ. ಯಾವ ಜೋಡಿಗಳು ಪರ್ಫೆಕ್ಟ್ ಅಲ್ಲ. ಮನಸ್ತಾಪಗಳು ಇರುತ್ತವೆ. ಏರಿಳಿತಗಳು ಬರುತ್ತವೆ. ಆದರೆ ನಮ್ಮ ಹಿರಿಯರನ್ನು ನೋಡಿದಾಗ ನಮಗೆ ಒಂದು ಸ್ಪೂರ್ತಿಯಾಗುತ್ತದೆ. ಫೈನಲಿ ಗಂಡ - ಹೆಂಡತಿ ಸಂಬಂಧದಲ್ಲಿ ಪ್ರೀತಿ ಉಳಿಯಬೇಕು. ಆ ರೀತಿಯಾದ ವಿಚಾರಗಳು ನಮ್ಮ ರಾಜಾರಾಣಿಯಲ್ಲಿ ನೋಡುವುದಕ್ಕೆ‌ ಸಿಗುತ್ತವೆ. ಎಲ್ಲರಿಗೂ ಹತ್ತಿರವಾಗುವಂತದ್ದು ರಾಜಾ-ರಾಣಿ' ಎಂದಿದ್ದಾರೆ.

More from Filmibeat

English summary
colors kannada Raja-Rani Written Update on July 21st episode. Here is the details about Aditi Prabhudeva shared her experience In Raja-Rani show;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X