ವಿವಾಹೇತರ ಸಂಬಂಧ ಆರೋಪ, ನನ್ನ ಗಂಡ ಸಂಶಯ ಪಿಶಾಚಿ ಎಂದು ಕಣ್ಣೀರಾದ ನಟಿ..!

ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ, ಪ್ರೀತಿ, ವಿಶ್ವಾಸವಿರಬೇಕು. ಇಂತಹ ಸಂಬಂಧಗಳು ಮಾತ್ರ ದೀರ್ಘಕಾಲ ಬಾಳಲು ಸಾಧ್ಯ. ಕೆಲವು ಜೋಡಿಯನ್ನು ನೋಡಿದ ಕೂಡಲೇ ಇಂತಹ ಜೋಡಿ ನಮ್ಮದಾಗಿರ ಬೇಕು ಎನ್ನುವ ಭಾವನೆಯು ಕೆಲವರಲ್ಲಿ ಮೂಡುವುದು. ಆದರೆ ಎಲ್ಲರಿಗೂ ಇಂತಹ ಭಾಗ್ಯ ಸಿಗುವುದಿಲ್ಲ. ಕೆಲವು ಸಂಬಂಧಗಳು ಹಾಗೆ ಅರ್ಧದಲ್ಲೇ ಕಳಚಿ ಹೋಗುವುದು ಇದೆ. ಇದಕ್ಕೆ ಅದಿತಿ ಶರ್ಮಾ ಮತ್ತು ಅಭಿನೀತ್ ಕೌಶಿಕ್ ಅತ್ಯುತ್ತಮ ಉದಾಹರಣೆ.

ಹೌದು, ಗಂಗಾ, ಸಿಲ್‌ ಸಿಲಾ ಬದಲ್ತೇ ರಿಶ್ತೋ ಕಾ, ರಬ್ ಸೇ ಹೈ ದುವಾ ಮುಂತಾದ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಅದಿತಿ ಶರ್ಮಾ ಅವರ ವ್ಯೆಯಕ್ತಿಕ ಬದುಕು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಮದುವೆಯಾದ ನಾಲ್ಕೇ ತಿಂಗಳಿಗೆ ವಿಚ್ಛೇದನದ ಹಂತಕ್ಕೆ ನಟಿಯ ಬದುಕು ತಲುಪಿರುವ ಹಿನ್ನೆಲೆ ಮುಂಬೈ ಕಿರುತೆರೆಯಲ್ಲಿ ಈ ವಿಚಾರ ವ್ಯಾಪಕ ಚರ್ಚೆಯಾಗುತ್ತಿದೆ.

Aditi Sharma Breaks Down Exposes Infidelity Allegations amp amp Threats from Abhineet Kaushik

ಇನ್ನು ಆದಿತಿ ಶರ್ಮಾ ಅವರ ಗಂಡ ಅಭಿನೀತ್ ಕೌಶಿಕ್, ನನ್ನ ಹೆಂಡತಿಗೆ ಅನೈತಿಕ ಸಂಬಂಧ ಇದೆ ಎಂದು ಆರೋಪ ಮಾಡಿದ್ದಾರೆ. ನನ್ನ ಪತ್ನಿ ಅಭಿನಯಿಸುತ್ತಿರುವ ಧಾರಾವಾಹಿ 'ಅಪೊಲ್ಲೆನಾ'ದ ಸಹ ನಟ ಸಮರ್ಥ್ಯನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಕೂಡ ಹೇಳಿ ಅನೈತಿಕ ಸಂಬಂಧ ಹೊಂದುವುದಲ್ಲದೇ ವಿಚ್ಛೇದನಕ್ಕೆ 25 ಲಕ್ಷ ದುಡ್ಡನ್ನು ಕೂಡ ಅದಿತಿ ಕೇಳುತ್ತಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ. ಈ ಆರೋಪಗಳಿಗೆ ಈಗ ಅದಿತಿ ಶರ್ಮಾ ಉತ್ತರವನ್ನು ನೀಡಿದ್ದಾರೆ. ತಮ್ಮ ಮದುವೆಯ ಈ ರಾದ್ಧಾಂತದ ಕುರಿತು ಮೌನ ಮುರಿದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಅದಿತಿ ಶರ್ಮಾ ನಮ್ಮ ದಾಂಪತ್ಯ ಕೇವಲ ನಾಲ್ಕು ತಿಂಗಳಿಗೆ ಮುರಿದು ಬೀಳಲು ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ.ವಿಷಯ ಈಗ ನ್ಯಾಯಾಲಯದಲ್ಲಿರುವದರಿಂದ ನಾನು ಅಲ್ಲಿಯೇ ವಿವರವಾಗಿ ಎಲ್ಲವನ್ನೂ ಹೇಳುತ್ತೇನೆ ಎಂದಿರುವ ಅದಿತಿ ಶರ್ಮಾ, ನನ್ನ ಸ್ನೇಹಿತರ ಎದುರು ನನ್ನ ಹೆತ್ತವರನ್ನು ಅಭಿನೀತಿ ಹಲವು ಬಾರಿ ಅವಮಾನ ಮಾಡಿದ್ದಾನೆ ಎಂದು ಹೇಳಿದ್ದಾರೆ. ಮಾನಸಿಕವಾಗಿ ಕಿರುಕುಳವನ್ನು ನೀಡುವುದಲ್ಲದೇ ತುಂಬಾನೇ ಅಹಸ್ಯವಾಗಿ ನನ್ನ ಜೊತೆ ಆತ ವರ್ತಿಸಿದ್ದಾನೆ ಎಂದು ಹೇಳಿದ್ದಾರೆ.

ಇನ್ನು ಸಹನಟ ಸಮರ್ಥ್ಯ ಜೊತೆ ಅನೈತಿಕ ಸಂಬಂಧವನ್ನೊಂದಿರುವ ಆರೋಪದ ಕುರಿತು ಕೂಡ ಮಾತನಾಡಿರುವ ಅದಿತಿ ಶರ್ಮಾ, ನಾನು ಮತ್ತು ಸಮರ್ಥ್ಯ ತುಂಬಾ ಒಳ್ಳೆಯ ಸ್ನೇಹಿತರು ಆದರೆ ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಎನ್ನುವಂತೆ ನನ್ನ ಗಂಡ ಅಭಿನೀತ್‌ಗೆ ನಮ್ಮ ನಡುವೆ ಅಕ್ರಮ ಸಂಬಂಧ ಇದೆ ಎನ್ನುವ ಅನುಮಾನ ಇದೆ ಎಂದು ಹೇಳಿದ್ದಾರೆ. ಕೇವಲ ಸಮರ್ಥ್ಯ ಮಾತ್ರವಲ್ಲ ಆತ ಎಂತಹ ಸಂಶಯ ಪಿಶಾಚಿ ಅಂದರೆ ನಾನು ಯಾರಾದರೂ ಪರಪುರುಷನ ಜೊತೆ ಮಾತನಾಡಿದರು ಸಾಕು ಆತ ನನ್ನನ್ನೂ ಅವಮಾನಿಸಲು ಶುರು ಮಾಡುತ್ತಿದ್ದ, ತೀರಾ ಹೊಲಸು ಪದಗಳನ್ನು ಪ್ರಯೋಗ ಮಾಡುತ್ತಿದ್ದ ಎಂದಿರುವ ಅದಿತಿ ಇದೇ ವಿಚಾರಕ್ಕೆ ನಾವು ಡಾಕ್ಟರ್ ಬಳಿ ಕೌನ್ಸಲಿಂಗ್‌ಗೆ ಕೂಡ ಹೋಗಿದ್ದೇವು ಎಂದು ಹೇಳಿದ್ದಾರೆ. ಈ ಪರಿಸ್ಥಿತಿಗೆ ಆತನ ಇನ್‌ಸೆಕ್ಯೂರಿಟಿಯೇ ಕಾರಣವೆಂದು ವೈದ್ಯರೇ ಹೇಳಿದ್ದಾರೆ ಎಂದು ಕೂಡ ಅದಿತಿ ಹೇಳಿದ್ದಾರೆ.

ಇನ್ನು ಗುಟ್ಟಾಗಿ ಮದುವೆ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಕೂಡ ಉತ್ತರವನ್ನು ನೀಡಿರುವ ಅದಿತಿ, ನಾವು ಗುಟ್ಟಾಗಿ ಮದುವೆಯಾಗಿರಲಿಲ್ಲ ಬದಲಿಗೆ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಮದುವೆಯಾಗಿದ್ದೇವು ಎಂದು ಹೇಳಿದ್ದಾರೆ. ನಮ್ಮ ಮದುವೆಯಲ್ಲಿ ನಮ್ಮ ಇಬ್ಬರು ಕುಟುಂಬದವರು ಭಾಗಿಯಾಗಿದ್ದರು, ಸ್ನೇಹಿತರು ಇದ್ದರು ಎಂದಿರುವ ಅದಿತಿ ನಾನು ಮಾಡುತ್ತಿದ್ದ ಧಾರಾವಾಹಿ ಅಪೊಲ್ಲೊನಾದಲ್ಲಿ ನನ್ನದು ಹದಿನೆಂಟು ವರ್ಷದ ಹುಡುಗಿಯ ಪಾತ್ರವಾಗಿತ್ತು, ಹೀಗಾಗಿ ಮದುವೆಯ ಸುದ್ದಿಯಿಂದ ನನ್ನ ತೆರೆಯ ಮೇಲಿನ ಇಮೇಜ್ ಡ್ಯಾಮೇಜ್ ಆಗಬಹುದೆಂದು ಅಂದುಕೊಂಡು ನಾನು ಮದುವೆ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದೆ ಅಷ್ಟೇ ಎಂದು ಹೇಳಿದ್ದಾರೆ.

ಮುಂದುವರೆದು ಅಭಿನೀತ್‌ನ ನಾನು ತುಂಬಾ ಪ್ರೀತಿ ಮಾಡುತ್ತಿದ್ದೆ, ಹೀಗಾಗಿ ನಾವು ಮದುವೆಯಾದೆವು ಎಂದಿರುವ ಅದಿತಿ ನಮ್ಮ ಸಾಂಸಾರಿಕ ಸಮಸ್ಯೆಯನ್ನು ನಾಲ್ಕು ಗೋಡೆಗಳ ನಡುವೆ ಬಗೆ ಹರಿಸಿಕೊಳ್ಳುವ ಯೋಚನೆ ನನ್ನಲ್ಲಿತ್ತು ಆದರೆ ಅಭಿನೀತ ನಮ್ಮ ವ್ಯೆಯಕ್ತಿಕ ವಿಚಾರವನ್ನು ಬೀದಿ ರಂಪ ಮಾಡಿದ್ದಾನೆ ಎಂದು ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ ಅದಿತಿ ಶರ್ಮಾ.

More from Filmibeat

Read more about: divorce filmibeat news affair
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X